ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ ಅಗತ್ಯ: ಶ್ರೀ ದಯಾನಂದ ಶೆಟ್ಟಿ
ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐ.ಕ್ಯೂ.ಎ.ಸಿ. ಹಾಗೂ ವಾಣಿಜ್ಯಶಾಸ್ತ್ರ ಹಾಗೂ ನಿರ್ವಹಣೆ ವಿಭಾಗದ ಸಹಯೋಗದಲ್ಲಿ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಾಗಾರವನ್ನು ದಿನಾಂಕ : 29/10/2022 ರಂದು ಆಯೋಜಿಸಲಾಯಿತು.
ಕಾಲೇಜು ಅಭಿವೃದ್ಧಿ ಸಮಿತಿಯ ಖಜಾಂಚಿಗಳಾದ ಶ್ರೀ ದಯಾನಂದ ಶೆಟ್ಟಿ ಕೊಜಕುಳಿ ಕಾರ್ಯಾಗಾರ ಉದ್ಘಾಟಿಸಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಜ್ಞಾನವೊಂದಿದ್ದರೆ ಸಾಲದು, ಜ್ಞಾನದ ಬಳಕೆಗೆ ಅವಶ್ಯಕವಾದ ಸಂವಹನ ಕೌಶಲಗಳು ಮತ್ತು ಬದುಕಿನ ಸವಾಲುಗಳನ್ನು ಎದುರಿಸುವ ಕೌಶಲಗಳು ತುಂಬಾ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ. ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ಉಪನ್ಯಾಸಕರ ಸಂಘದ (FOBMAT) ಅಧ್ಯಕ್ಷರಾದ ಡಾ. ಚಂದ್ರಶೇಖರ ಕೆ., ಸೆಕ್ರೆಟರಿ ಶ್ರೀ ನಂದಕಿಶೋರ್ ಹಾಗೂ ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಶ್ರೀ ತಿಮ್ಮಣ್ಣ ಜಿ. ಭಟ್ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಡಾ. ಉದಯ ಶೆಟ್ಟಿ ಕೆ. ಪ್ರಾಸ್ತಾವಿಸಿದರು. ಶ್ರೀ ಉಮೇಶ್ ಪೈ ವಂದಿಸಿದರು. ಶ್ರೀಮತಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ 94ಕ್ಕೂ ಹೆಚ್ಚು ಉಪನ್ಯಾಸಕರು ಇದರ ಪ್ರಯೋಜನ ಪಡೆದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ