ಕನ್ನಡ ಭಾಷೆ ಹಾಗೂ ಜಾನಪದ ಪ್ರಕಾರಗಳನ್ನು ಉಳಿಸಿ, ಬೆಳೆಸಬೇಕು: ವಿದುಷಿ ಮಾನಸಿ ಸುಧೀರ್

Upayuktha
0

ನಿಟ್ಟೆ: "ಯುವಕ, ಯುವತಿಯರಲ್ಲಿ ಕನ್ನಡದ ಬಗೆಗಿನ ಒಲವು ಹಾಗೂ ಅಭಿಮಾನ ಹೆಚ್ಚುತ್ತಿರುವುದು ಸ್ವಾಗತಾರ್ಹ. ಜಾನಪದ ಪ್ರಕಾರಗಳನ್ನು ಇಂದಿನ ಜನತೆ ಅಭ್ಯಸಿಸಿ ಮುಂದಿನ ಪೀಳಿಗೆಗೆ ಕಲಾಪ್ರಕಾರವನ್ನು ತಿಳಿಸುವುದು ಅಗತ್ಯ" ಎಂದು ಚಲನಚಿತ್ರ, ಕಾವ್ಯಾಭಿನಯ ಹಾಗೂ ನೃತ್ಯ ಕಲಾವಿದೆ ವಿದುಷಿ ಮಾನಸಿ ಸುಧೀರ್ ಅಭಿಪ್ರಾಯಪಟ್ಟರು.


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ 'ದಿವ್ಯಾಂಕುರ' ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಸಾಂಸ್ಕೃತಿಕ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲಾವಿದರು, ಪ್ರಾಂತ್ಯಾವಾರು ವಿವಿಧ ಬಗೆಯ ಕಲಾಪ್ರಕಾರಗಳು, ತಿಂಡಿತಿನಿಸುಗಳು ಇವೆಲ್ಲವೂ ಜಗತ್ತಿನಲ್ಲಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಯುವ ಜನತೆಯನ್ನು ಮುಟ್ಟುವ ರೀತಿಯಲ್ಲಿ ಚಲನಚಿತ್ರ ಹಾಗೂ ಸಾಮಾಜಿಕ ಜಾಲತಾಣಗಳ ಸಹಾಯದೊಂದಿಗೆ ಕನ್ನಡಪ್ರೇಮವನ್ನು ಹೆಚ್ಚಿಸುವ ಪ್ರಯತ್ನಗಳನ್ನು ನಡೆಸುವುದು ಉತ್ತಮ" ಎಂದು ಅವರು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ "ನಿಟ್ಟೆ ತಾಂತ್ರಿಕ ಕಾಲೇಜು ಪ್ರತಿವರ್ಷವೂ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜ್ರಂಭಣೆಯಿಂದ ಆಚರಿಸುತ್ತಾ ಬಂದಿದೆ. ವ್ಯಾವಹಾರಿಕ ದೃಷ್ಠಿಯಿಂದ ವಿವಿಧ ಭಾಷೆಗಳನ್ನು ಕಲಿಯುವುದು ಅಗತ್ಯವಾದರೂ ಕನ್ನಡವನ್ನು ನಾವು ಎಂದಿಗೂ ಮರೆಯಬಾರದು. ವಿದ್ಯಾರ್ಥಿಗಳಲ್ಲಿ ಸಂಭ್ರಮಾಚರಣೆಯಂತಹ ಕಾರ್ಯಕ್ರಮಗಳ ಆಯೋಜನೆಯಲ್ಲಿ ಇರುವ ಆಸಕ್ತಿ ಶ್ಲಾಘನೀಯ" ಎಂದು ಹೇಳಿದರು.


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ.ಐ ಆರ್ ಮಿತ್ತಂತಾಯ, ಡಾ.ಶ್ರೀನಿವಾಸ ರಾವ್ ಬಿ ಆರ್, ಕ್ಯಾಂಪಸ್ ಮೈಂಟೆನೆನ್ಸ್ ಮತ್ತು ಡೆವಲೆಪ್ಮೆಂಟ್ ವಿಭಾಗದ ನಿರ್ದೇಶಕ ಪ್ರೊ.ಯೋಗೀಶ್ ಹೆಗ್ಡೆ ಹಾಗೂ ಸ್ಟೂಡೆಂಟ್ ವೆಲ್ಫೇರ್ ವಿಭಾಗದ ಡೀನ ಡಾ.ನರಸಿಂಹ ಬೈಲ್ಕೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಪೂರ್ವಿಕಾ ಸ್ವಾಗತಿಸಿದರು. ವಿದ್ಯಾರ್ಥಿನಿ ಸಿಂಚನಾ ಎಸ್ ಬಯರಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಪ್ರಣವ ಮೂಡಿತ್ತಾಯ ವಂದಿಸಿದರು. ವಿದ್ಯಾರ್ಥಿಗಳಾದ ನಚಿಕೇತ ನಾಯಕ್ ಹಾಗೂ ಶಾಶ್ವತೀ ನಾವಡ ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ಅನಂತರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ಜನಪದ ಪ್ರಕಾರಗಳ ಪ್ರದರ್ಶನ, ಸಮೂಹ ಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಶೇಷ ಆಕರ್ಷಣೆ ಎಂಬಂತೆ ಉಳ್ಳಾಲದ ರಾಣಿ ಅಬ್ಬಕ್ಕ ಅವರ ವೀರಗಾಥೆಯನ್ನು ವಿದ್ಯಾರ್ಥಿಗಳು ಒಂದು ನಾಟಕ ಪ್ರದರ್ಶನದ ಮೂಲಕ ವಿವರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಪ್ರಾಧ್ಯಾಪಕ ವರ್ಗದಿಂದ ವಿವಿಧ ಸಾಂಸ್ಕೃತಿಕ ಉಡುಗೆಯೊಂದಿಗೆ ರ್‍ಯಾಂಪ್‌ ವಾಕ್ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿ ಶ್ರವಣ್ ಉಡುಪ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top