ಕ.ಸಾ.ಪ ಮಂಗಳೂರು ಘಟಕದಿಂದ ರಾಜ್ಯೋತ್ಸವ ಸಂಭ್ರಮ

Upayuktha
0

ಮಂಗಳೂರು: 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ಘಟಕದ ವತಿಯಿಂದ ‘ಕನ್ನಡ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ದಿನಾಂಕ 01-11-2022ನೇ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ಜರುಗಿತು.


ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಎಸ್ ರೇವಣಕರ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ರಾಜ್ಯೋತ್ಸವದ ಹಿನ್ನಲೆ ಮತ್ತು ಪ್ರಾಮುಖ್ಯತೆ ಬಗ್ಗೆ ಗೌರವ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿದರು.


ನರಕಕ್ಕೆ ಇಳಿಸಿ ನಾಲಗೆ ಸೀಳಿ ಬಾಯಿ ಹೊಲಿಸಿ ಹಾಕಿದ್ರೂ ಮೂಗ್ನಲ್ ಕನ್ನಡ ಪದವಾಡ್ತೀನಿ ಎಂದು ಮಲಗಿದ್ದ ಕನ್ನಡಿಗರನ್ನು ಅಂದು ಬಡಿದೆಬ್ಬಿಸಿದ ಜೆ.ಪಿ ರಾಜರತ್ನಂ ಮಗದೊಮ್ಮೆ ಹುಟ್ಟಿ ಬರಲಿ ಎಂದು ಹಾರೈಸಿದರು. ಕಾರ್ಯಕಾರಣಿ ಸಮಿತಿ ಸದಸ್ಯರಾದ ಶ್ರೀ ಎಸ್ ಸುಬ್ರಾಯ ಭಟ್, ಶ್ರೀ ರಘು ಇಡ್ಕಿದು ಮತ್ತು ಶ್ರೀ ಗಣೇಶ್ ಪ್ರಸಾದ್‌ಜೀ ಅವರು ಕನ್ನಡ ಚುಟುಕು ಕವನವನ್ನು ಹಾಡಿ ರಂಜಿಸಿದರು.


ಕಾರ್ಯಕಾರಣಿ ಸಮಿತಿ ಸದಸ್ಯರಾದ ಡಾ|| ಮೀನಾಕ್ಷಿ ರಾಮಚಂದ್ರ, ಶ್ರೀಮತಿ ಸುಖಲಾಕ್ಷಿ, ಶ್ರೀಮತಿ ರತ್ನಾವತಿ ಜೆ ಬೈಕಾಡಿ ಕೆ, ಅವರು ಕನ್ನಡ ಕವನ ವಾಚನ ಮಾಡಿದರು. ಕೃಷ್ಣಪ್ಪ, ಮುರಲೀಧರ ಭಾರಧ್ವಾಜ್, ಸನತ್ ಕುಮಾರ್ ಮುಂತಾದವರು ಈ ಸಂಭ್ರಮದಲ್ಲಿ ಪಾಲ್ಗೊಂಡರು. ಇದೇ ಸಂಭ್ರಮದಲ್ಲಿ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top