ಮಂಗಳೂರು: ಇಲ್ಲಿನ ಶಾರದಾ ವಿದ್ಯಾಲಯದಲ್ಲಿ ಭಾನುವಾರ ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ಶ್ರೀ ರತ್ನಾಕರ ಕುಳಾಯಿ (ಸಾಹಿತ್ಯ ಪರಿಚಾರಿಕೆ), ಪ್ರೊ. ಜಯರಾಮ ಪೂಂಜ (ಶಿಕ್ಷಣ), ಡಾ. ಕುಮಾರಸ್ವಾಮಿ ಉಪ್ಪಂಗಳ (ವೈದ್ಯಕೀಯ), ವಿದ್ವಾನ್ ಕೃಷ್ಣರಾಜ ಭಟ್ಟ ನಂದಳಿಕೆ (ಯಕ್ಷಗಾನ), ಶ್ರೀ ಕ್ರಿಸ್ಟಿ ನೀನಾಸಂ (ರಂಗಭೂಮಿ), ಶ್ರೀಮತಿ ಸೌಮ್ಯಲತಾ ಮುರಳೀಧರ (ಕೃಷಿ), ವಿದುಷಿ ದೀಪಾ ಭಟ್ (ಸಂಗೀತ), ಡಾ. ದೊಡ್ಡ ನಂಜಯ್ಯ ಹೆಚ್.ಎಂ (ದೇಶಸೇವೆ), ಶ್ರೀ ಅಬ್ದುಲ್ಲ ರವೂಫ್ (ಸಮಾಜಸೇವೆ), ಕೃಷ್ಣಪ್ಪ (ಪರಿಸರ ಪ್ರೇಮಿ) ಅವರನ್ನು ಸನ್ಮಾನಿಸಲಾಯಿತು.
ಸಮ್ಮೇಳನಾಧ್ಯಕ್ಷ ಡಾ.ನಾ.ದಾ ಶೆಟ್ಟಿ, ಹಿರಿಯ ಸಾಹಿತಿ ಅಜಕ್ಕಳ ಗಿರೀಶ್ ಭಟ್, ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಮಂಗಳೂರು ತಾಲೂಕು ಅಧ್ಯಕ್ಷ ಮಂಜುನಾಥ ರೇವಣ್‌ಕರ್, ಗೌರವ ಕಾರ್ಯದರ್ಶಿಗಳಾದ ಡಾ. ಮುರಲೀ ಮೋಹನ್ ಚೂಂತಾರು, ಗಣೇಶ್ ಪ್ರಸಾದ್‌ಜೀ, ಕೋಶಾಧಿಕಾರಿ ಎನ್.ಸುಬ್ರಾಯ ಭಟ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ