ಸುದಾನ ಶಾಲೆ: ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ

Upayuktha
0

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ನೆಲ್ಲಿಕಟ್ಟೆ, ಪುತ್ತೂರು, ಇವುಗಳ ಸಹಯೋಗದಲ್ಲಿ ಪುತ್ತೂರಿನ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅಕ್ಟೋಬರ್ 31ರಂದು ಆಯೋಜಿಸಲಾಗಿತ್ತು.


ಸುದಾನ ಪ್ರೌಢಶಾಲೆಯಿಂದ ವೈಯಕ್ತಿಕ ವಿಭಾಗಕ್ಕೆ ಮೂರು ವಿಷಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭೌತಶಾಸ್ತ್ರ ವಿಷಯದಲ್ಲಿ ದೀಪಾಲಿ ಜೆ.ಕೆ (9ನೇ), ಬಯೋಸೈನ್ಸ್, ಬಯೋಕೆಮಿಸ್ಟ್ರಿ ಮತ್ತು ಪರಿಸರ ವಿಜ್ಞಾನ ವಿಷಯದಲ್ಲಿ ರೀಶೆಲ್‌ಎಲ್ಸಾ ಬೆನ್ನಿ (9ನೇ), ರಸಾಯನಶಾಸ್ತ್ರ ವಿಷಯದಲ್ಲಿ ಮಹಮ್ಮದ್‌ ಜಲಾಲ್ (9ನೇ), ತಮ್ಮ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿದರು.


ಸಮೂಹ ವಿಭಾಗದಲ್ಲಿ ಭೌತಶಾಸ್ತ್ರ ವಿಷಯದಲ್ಲಿಅಕ್ಷತ್‌ ಕುಮಾರ್ (9ನೇ), ತನೀಶ್ (9ನೇ), ಗಣಿತ ವಿಷಯದಲ್ಲಿ ಸಾನ್ವಿಜೆ.ಎಸ್. (9ನೇ) ಕೆ. ಮುಕ್ತಾ ರೈ (9ನೇ) ಮತ್ತು ಭೂಮಿ ಮತ್ತು ಬಾಹ್ಯಾಕಾಶ ವಿಷಯದಲ್ಲಿ ಆರ್. ರೋಹಿತ್‌ ಕುಮಾರ್ (9ನೇ) ಮತ್ತು ಬಿ.ಸಂಜಯ್ (9ನೇ) ತಮ್ಮ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿದರು.


ಈ ಸ್ಪರ್ಧೆಯಲ್ಲಿ ರೀಶೆಲ್‌ ಎಲ್ಸಾ ಬೆನ್ನಿ ಪ್ರದರ್ಶಿಸಿದ ‘ಬಯೋಸೈನ್ಸ್, ಬಯೋಕೆಮಿಸ್ಟ್ರಿ ಮತ್ತು ಪರಿಸರ ವಿಜ್ಞಾನ ವಿಷಯದ ‘ಇಂಟಿಗ್ರೇಟೆಡ್ ಸರ್‌ಕ್ಯುಲಾರ್ ಪಿರಮಿಡ್ ಫಾರ್ಮಿಂಗ್’ (Integrated Circular Pyramid Farming) ವಿಜ್ಞಾನ ಮಾದರಿಯು ತೀರ್ಪುಗಾರರ ಮೆಚ್ಚುಗೆ ಗಳಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತದೆ.


ಜಿಲ್ಲಾ ಮಟ್ಟದ ಸ್ಪರ್ಧೆಯು ನವೆಂಬರ್ 10ರಂದು ಬಂಟ್ವಾಳದ ಕಾರ್ಮೆಲ್‌ ಗರ್ಲ್ಸ್ ಹೈಸ್ಕೂಲ್ ನಲ್ಲಿ ಜರಗಲಿರುವುದು. ಈ ಎಲ್ಲಾ ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳಿಗೆ ವಿಜ್ಞಾನ ಶಿಕ್ಞಕಿಯರಾದ ಶ್ರೀಮತಿ. ರೇಖಾಮಣಿ ಮತ್ತು ಶ್ರೀಮತಿ ಶಾರದಾ ಮಾರ್ಗದರ್ಶನ ಮಾಡಿರುತ್ತಾರೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ರೇ. ವಿಜಯ ಹಾರ್ವಿನ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ನಾಗರಾಜ್ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿ ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top