ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ - ಪುಸ್ತಕ ಮಳಿಗೆಗಳಿಗೆ ಆಹ್ವಾನ

Upayuktha
0

ಮೂಡುಬಿದಿರೆ: ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯು ದಶಂಬರ 21ರಿಂದ 27ರವರೆಗೆ ಒಂದು ವಾರಗಳ ಕಾಲ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಅದ್ದೂರಿಯಾಗಿ ಜರುಗಲಿದೆ. ಇದರಲ್ಲಿ ರಾಜ್ಯ, ರಾಷ್ಟ್ರ, ವಿದೇಶಗಳ 50 ಸಾವಿರ ಪ್ರತಿನಿಧಿಗಳು ಹಾಗೂ 10 ಸಾವಿರ ಶಿಕ್ಷಕರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.


ಪ್ರತಿ ದಿನ ಲಕ್ಷಕ್ಕೂ ಮೀರಿ ಆಸಕ್ತರು ಜಾಂಬೂರಿಯನ್ನು ವೀಕ್ಷಿಸಲು ಭಾಗವಹಿಸುವ ನಿರೀಕ್ಷೆ ಇದೆ ಮಾತ್ರವಲ್ಲ, ಇದೊಂದು ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಾಡುವುದರಿಂದ ರಾಜ್ಯದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರವಾಸದ ಅವಕಾಶವನ್ನೂ ಕಲ್ಪಿಸಲಾಗಿದೆ. ಈ ಬೃಹತ್ ಸಮ್ಮೇಳನದ ಅಂಗವಾಗಿ ಅಭೂತಪೂರ್ವ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗುತ್ತಿದ್ದು, ಪುಸ್ತಕ ಮಳಿಗೆಗಳನ್ನು ಆಹ್ವಾನಿಸುತ್ತಿದ್ದೇವೆ.


ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ದೇಶ - ವಿದೇಶಗಳ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿರುವುದರಿಂದ ಕನ್ನಡ ಪುಸ್ತಕಗಳ ಜೊತೆಗೆ ಇಂಗ್ಲೀಷ್, ಹಿಂದಿ ಹಾಗೂ ಇತರ ರಾಜ್ಯ ಮತ್ತು ಪ್ರಾದೇಶಿಕ ಭಾಷೆಗಳ ಪುಸ್ತಕಗಳೂ ಮಳಿಗೆಯಲ್ಲಿರಬೇಕಾದುದು ಅಗತ್ಯ. ಭಾಗವಹಿಸುವ ಪುಸ್ತಕ ಮಳಿಗೆಗಳು ಜಾಂಬೂರಿಯ ಏಳು ದಿನಗಳೂ ಪುಸ್ತಕ ಮೇಳದಲ್ಲಿರಲೇ ಬೇಕು. ಮಳಿಗೆಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮಳಿಗೆಯ ಇಬ್ಬರಿಗೆ ವಸತಿ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುವುದು.


ಭಾಗವಹಿಸುವ ಮಳಿಗೆಗಳು ದಿನಾಂಕ 30.11.2022ರ ಮೊದಲು ಪತ್ರ ಬರೆದು ಭಾಗವಹಿಸುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ಕೇಳಿಕೊಳ್ಳಲಾಗಿದೆ. (ಪತ್ರದ ಹೊರ ಲಕೋಟೆಯಲ್ಲಿ ಸ್ಪಷ್ಟವಾಗಿ ‘ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ - ಪುಸ್ತಕ ಮೇಳ’ ಎಂದು ನಮೂದಿಸಿರತಕ್ಕದ್ದು.) ಹೆಚ್ಚಿನ ಮಾಹಿತಿಗಾಗಿ ಡಾ. ಯೋಗೀಶ್ ಕೈರೋಡಿ (9845704371), ಅಂಬರೀಷ್ ಚಿಪ್ಳೂಣ್ಕರ್ 9845882048 ರನ್ನು ಸಂಪರ್ಕಿಸಬಹುದು.


ಸಂಪರ್ಕ ವಿಳಾಸ :

ಡಾ| ಎಂ.ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ -574227


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top