ಪುತ್ತೂರು: ಸುದಾನ ಶಾಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಿಕ್ಷಕ - ರಕ್ಷಕ ಸಂಘದ ಅಧ್ಯಕ್ಷರಾದ ಡಾ. ರಾಜೇಶ್ ಬೆಜ್ಜಂಗಳರವರು ಕನ್ನಡಾಂಬೆಯ ಭಾವಚಿತ್ರಕ್ಕೆ ದೀಪ ಬೆಳಗಿ, ಪುಷ್ಪನಮನವನ್ನು ಸಲ್ಲಿಸಿ ಮಾತನಾಡುತ್ತಾ “ಕನ್ನಡ ನುಡಿಗೆ ಅದರದ್ದೇ ಆದ ಅಸ್ಮಿತೆಯಿದ್ದು, ಕನ್ನಡಿಗರಾದ ನಾವು ಭಾಷಾ ಶುದ್ಧತೆಯನ್ನು ರೂಢಿಸಿಕೊಳ್ಳಬೇಕು”ಎಂದು ಕರೆ ನೀಡುತ್ತಾ ನಮ್ಮ ನಾಡು ಮತ್ತು ನುಡಿಯ ವೈಭವಗಳ ಸುಂದರ ಚಿತ್ರಣವನ್ನು ನೀಡಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್‌ರವರು ಕನ್ನಡ ನುಡಿಯನ್ನು ರಕ್ಷಿಸುವ ನಮ್ಮ ಕರ್ತವ್ಯವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯ ಪಡಿಸಿದರು. ಉಪ ಮುಖ್ಯ ಶಿಕ್ಷಕಿ ಲವೀನ ರೋಸ್ಲಿನ್ ಹನ್ಸ್, ಸಂಯೋಜಕರಾದ ಶ್ರೀಮತಿ ಪ್ರತಿಮಾ, ಗಾಯತ್ರಿ, ಅಮೃತವಾಣಿ, ಲಹರಿ ಸಾಹಿತ್ಯ ಸಂಘದ ನಿರ್ದೇಶಕಿ ಪ್ರತಿಭಾ ಎಸ್ ರೈ ಹಾಗೂ ಶಿಕ್ಷಕ - ಶಿಕ್ಷಕೇತರರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಗೆ ಕನ್ನಡ ಪರ ಸ್ಪರ್ಧೆಯನ್ನು ನಡೆಸಿ ಬಹುಮಾನ ನೀಡಲಾಯಿತು.
ನವೆಂಬರ್ 28 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕೋಟಿ ಕಂಠ ಗಾಯನದಲ್ಲಿಯೂ ಸುದಾನ ಶಾಲೆಯ ವಿದ್ಯಾರ್ಥಿಗಳು, ಆಡಳಿತ ಮಂಡಳಿ, ರೋಟರಿ ಸದಸ್ಯರು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು.
ಈ ಕಾರ್ಯಕ್ರಮದ ನೇತೃತ್ವವನ್ನು ಲಹರಿ ಸಾಹಿತ್ಯ ಸಂಘವು ವಹಿಸಿಕೊಂಡಿತ್ತು. ಸಾನವಿ ರೈ (10ನೇ) ಸ್ವಾಗತಿಸಿ ಕುಮಾರಿ ಈಶಾನ್ವಿ ಪಿ (8ನೇ) ದಿನದ ಮಹತ್ವವನ್ನು ವಿವರಿಸಿದರು. ಆಶ್ರಿತ್ ಕೃಷ್ಣ ರಾವ್ (5ನೇ) ಕನ್ನಡದ ಗೀತೆಯನ್ನು ಹಾಡಿ ಮನರಂಜಿಸಿದರು, ಜಿಯಾ ಸ್ವೀಡಲ್ (9ನೇ) ವಂದಿಸಿದರು, ವೃಂದಾ ಜೆ ಗೌಡ (10ನೇ) ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ