ಮಂಗಳಗಂಗೋತ್ರಿ: ಕನ್ನಡ ನಾಡಿನ ಏಕೀಕರಣಕ್ಕೆ ಹೋರಾಡಿದ ಮಹನೀಯರಿಗೆ ಕನ್ನಡ ಸಂಸ್ಕೃತಿಯು ಬಹುಕಾಲ ಉಳಿಯಬೇಕು. ನಾಡು ಸಾಮರಸ್ಯದಿಂದ ಬಾಳಬೇಕು ಎಂಬ ಕನಸಿತ್ತು. ಆ ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಹೊಂಗಳ್ಳಿ ಹೇಳಿದರು.
ಅವರು ಶುಕ್ರವಾರ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ನನ್ನ ನಾಡು ನನ್ನ ಹಾಡು ಕಲ್ಪನೆಯಡಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು.
ಉಳ್ಳಾಲ ಕಸಾಪ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಸಂಕಲ್ಪ ವಿಧಿ ಬೋಧಿಸಿ ಕನ್ನಡವೆಂದರೆ ಬರಿ ನುಡಿಯಲ್ಲ. ಅದು ಸಂಸ್ಕೃತಿಯ ಅಸ್ಮಿತೆ. ಕನ್ನಡ ಲಿಪಿಯೂ ಸುಂದರ. ವಿನೋಬಾ ಭಾವೆಯವರು ಕನ್ನಡ ಲಿಪಿಯನ್ನು ಲಪಿಗಳ ರಾಣಿ ಎಂದಿದ್ದಾರೆ. ನಾವು ಕನ್ನಡಿಗರೆಂಬುದು ಅಭಿಮಾನ ಪಡಬೇಕಾದ ವಿಷಯ ಎಂದರು.
ಉಳ್ಳಾಲ ಕಸಾಪ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿದರು. ಮಂಗಳೂರು ವಿವಿಯ ಕನ್ನಡ, ರಸಾಯನಶಾಸ್ತ್ರ, ಮತ್ತು ಗ್ರಂಥಾಲಯ ವಿಭಾಗದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಕನ್ನಡ ಗೀತಗಾಯನ ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ