ಉಡುಪಿ: ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ ಮಕ್ಕಳ ಗೋಶಾಲೆ ಭೇಟಿ

Shreya Hegde
0

ಗೋವುಗಳೊಂದಿಗೆ ಸಂಭ್ರಮಿಸಿದ ಸಿರಿವಂತರ ಮಕ್ಕಳು!


ಉಡುಪಿ: ಉಡುಪಿಯ ಪ್ರತಿಷ್ಠಿತ ಶಾರದಾ ರೆಸಿಡೆನ್ಶಿಯಲ್ ಶಾಲೆಯ ಸುಮಾರು 100 ವಿದ್ಯಾರ್ಥಿಗಳು ಶುಕ್ರವಾರದಂದು ನೀಲಾವರ ಗೋಶಾಲೆಗೆ ಪ್ರವಾಸಗೈದರು. ಬಹುತೇಕ ನಗರ ಪ್ರದೇಶಗಳ ಸಿರಿವಂತರ ಮಕ್ಕಳೇ ಆಗಿರುವ ಇವರಿಗೆ ಗೋವಿನೊಂದಿಗಿನ ಬಾಂಧವ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಲೆಯ ನಿರ್ದೇಶಕ ವಿದ್ಯಾವಂತ ಆಚಾರ್ಯರು ಮತ್ತು ಅಧ್ಯಾಪಕ ವೃಂದ ಈ ಪ್ರವಾಸವನ್ನು ಕಲ್ಪಿಸಿದ್ದರು.


3-4 ವರ್ಷಗಳಿಂದಲೂ ಈ ಪ್ರವಾಸ ಮಾಡಿಸುತ್ತಿದ್ದಾರೆ. 2-3 ಘಂಟೆಗಳ ಕಾಲ ಮಕ್ಕಳು ಗೋಶಾಲೆಯ ಗೋವುಗಳೊಂದಿಗೆ ಬೆರೆತು ಸಂಭ್ರಮಿಸಿದ್ದು ವಿಶೇಷ.‌ ವಿಶಾಲವಾದ ಕೆರೆ ಅದರ ನಡುವೆ ಇರುವ ಶ್ರೀ ಕೃಷ್ಣನಗುಡಿಯನ್ನೂ ಕಂಡು ಖುಷಿಪಟ್ಟರು. ಗೋಶಾಲೆಯ ಮೆನೇಜರ್ ಆಶ್ರಿತ್ ಗೋಶಾಲೆಯ ಬಗ್ಗೆ ವಿವರಿಸಿದರು. ಆತಿಥ್ಯವಾಗಿ ನೀಡಿದ ಪಾನಕವನ್ನೂ ಸವಿದು ಮಕ್ಕಳು ತೆರಳಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top