ದ್ವಿತೀಯ ಪಿಯು ಪರೀಕ್ಷೆಯಲ್ಲಿ ಆಳ್ವಾಸ್ ಐತಿಹಾಸಿಕ ಸಾಧನೆ: ಪದವಿಪೂರ್ವ ಕಾಲೇಜಿಗೆ ಒಂದರಿಂದ 10ರ ಒಳಗೆ 95 ವಿದ್ಯಾರ್ಥಿಗಳು

Upayuktha
0



ವಾಣಿಜ್ಯ  ವಿಭಾಗದ ವಿದ್ಯಾರ್ಥಿ ರಾಜ್ಯಕ್ಕೆ ಮೊದಲ ರ‍್ಯಾಂಕ್

ವಿಜ್ಞಾನ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿ ದ್ವಿತೀಯ ರ‍್ಯಾಂಕ್


ಮೂಡುಬಿದಿರೆ:  ಆಳ್ವಾಸ್ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2026ರಲ್ಲಿ ಅಸಾಧಾರಣ ಸಾಧನೆಗೈದು ತನ್ನ ಶೈಕ್ಷಣಿಕ ಮೇಲುಗೈಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.


ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ 600ರಲ್ಲಿ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ ಅನನ್ಯ ಕೆ, 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ  ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದು, ದ್ವಿತೀಯ ಪಿಯು ಫಲಿತಾಂಶದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಸಾಧನೆ ಮೆರೆದಿದ್ದಳು.


ವಿಜ್ಞಾನ ವಿಭಾಗದಲ್ಲಿ  ರಕ್ಷಿತಾ ಮಂಜುನಾಥ್ ಎಸ್ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಶ್ರೇಷ್ಠ ಸಾಧನೆ ಮೆರೆದಿದ್ದಾಳೆ.


ಈ ವರ್ಷದ ಫಲಿತಾಂಶದಲ್ಲಿ 95 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. 687 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದರೆ, 1557 ವಿದ್ಯಾರ್ಥಿಗಳು 90% ಕ್ಕಿಂತ  ಅಧಿಕ, 1892 ವಿದ್ಯಾರ್ಥಿಗಳು 85% ಕ್ಕಿಂತ ಹೆಚ್ಚು (ಡಿಸ್ಟಿಂಕ್ಷನ್) ಅಂಕಗಳನ್ನು ಗಳಿಸಿದ್ದಾರೆ.  285 ವಿದ್ಯಾರ್ಥಿಗಳು  ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಲ್ಲವಿ ಕೆ. ಸಿ – 597, ಅಂಕಿತಾ ಬಸಪ್ಪ ಕೊನ್ನೂರ – 596, ದಿಶಾ ಎಚ್ ಶೆಟ್ಟಿ – 596,  ಜ್ಞಾನಶ್ರೀ ಡಿ ಅರಳ – 596 ,ಆದರ್ಶ್ ಬಾಲಚಂದ್ರ ಹೆಗಡೆ – 596, ಲಿಜ್ವಿತಾ ವರ್ಜೀನಿಯಾ ಡಿ ಮೆಲ್ಲೋ – 596, ನೇಹಾ ಪಿ ಕಕರಡ್ಡಿ – 596, ಐಶ್ವರ್ಯ – 595, ಮಾನವಿ ಡಿ ಎಸ್ – 595, ನಿರಾಳಿ ಹೆಗ್ಗರ್ – 595, ಜಶ್ ಕಾವೇರಿಯಪ್ಪ ಎ. ಎಂ – 595, ವೈಷ್ಣವಿ ರಾವ್ – 595, ಅಕ್ಷಯಕುಮಾರ್ ಸೋಮಶೇಖರ ಗುಗ್ಗಾರಿ – 595 ಅಂಕವನ್ನು ಪಡೆದು  ವಿಶೇಷ ಸಾಧನೆ ಮೆರೆದಿದ್ದಾರೆ.  


ಗಣಿತ ವಿಷಯದಲ್ಲಿ 199, ಸಂಸ್ಕೃತ -122, ಬಿಸಿನೆಸ್ ಸ್ಟಡೀಸ್-86, ಕಂಪ್ಯೂಟರ್ ಸೈನ್ಸ್ -86,  ಭೌತಶಾಶ್ತç-85, ಕನ್ನಡ-82, ಬೇಸಿಕ್ ಮ್ಯಾತ್ಸ್- 54, ಅಕೌಂಟೆನ್ಸಿ-53, ಜೀವಶಾಸ್ತç-49, ಸಂಖ್ಯಾಶಾಸ್ತç-45, ಅರ್ಥಶಾಸ್ತ್ರ-36, ರಸಾಯನಶಾಸ್ತ್ರ-21, ಹಿಂದಿ-13,  ಎಲೆಕ್ಟಾçನಿಕ್ಸ್-6, ಇಂಗ್ಲೀಷ್-3, ಸಮಾಜಶಾಸ್ತ್ರ-2, ರಾಜ್ಯಶಾಸ್ತ್ರ-1, ಅರೇಬಿಕ್-1 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.


6 ವಿಷಯಗಳಲ್ಲಿ 100ಕ್ಕೆ ನೂರು ಅಂಕಗಳನ್ನು ಒರ್ವ ವಿದ್ಯಾರ್ಥಿ,  5 ವಿಷಯಗಳಲ್ಲಿ 4, 4 ವಿಷಯಗಳಲ್ಲಿ 20, 3 ವಿಷಯಗಳಲ್ಲಿ 66, 2 ವಿಷಯದಲ್ಲಿ 147, ಒಂದು ವಿಷಯದಲ್ಲಿ 481 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ.


ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರೊ. ಎಂ. ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿಎನ್,  ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಕಲಾ ನಿಖಾಯದ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top