ಪಿಯು ಫಲಿತಾಂಶ: ಪುತ್ತೂರಿನ ವಿವೇಕಾನಂದ ಪ.ಪೂ ಕಾಲೇಜಿನ ವಿಜ್ಞಾನ ವಿಭಾಗದ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ದ್ವಿತೀಯ

Upayuktha
0

ಮನ್ನಿತ ಹಾಗೂ ಬಿಂದು ಎಚ್. ಆರ್ ವಾಣಿಜ್ಯ ವಿಭಾಗದಲ್ಲಿ 596 ಅಂಕಗಳೊಂದಿಗೆ ಪುತ್ತೂರು ತಾಲೂಕಿಗೆ ಪ್ರಥಮ

ಕಲಾ ವಿಭಾಗದ ರೂಪಶ್ರೀ 584 ಅಂಕಗಳೊಂದಿಗೆ ಪುತ್ತೂರು ತಾಲೂಕಿಗೆ ಪ್ರಥಮ

ತಾಲೂಕಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ 447 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ

224 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ 100 ಅಂಕಗಳು


ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ಫೆಬ್ರವರಿ-ಮಾರ್ಚ್ ನಲ್ಲಿ ನಡೆಸಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಅಭಿರಾಮ್ ವಿ. ಭಟ್ (ಬಂಟ್ವಾಳ ತಾಲೂಕಿನ ವಸಂತ ಕುಮಾರ್ ಎನ್ ಹಾಗೂ ಸುಲೋಚನಾ ಕುಮಾರಿ ಬಿ. ಕೆ ದಂಪತಿಗಳ ಪುತ್ರ) 598 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ರಾಂಕ್ ಪಡೆದಿರುತ್ತಾರೆ.


ವಾಣಿಜ್ಯ ವಿಭಾಗದ ಮನ್ನಿತ (ಕಡೇಶಿವಾಲಯದ ವಸಂತ ಯು ಹಾಗೂ ಚಿತ್ರಾವತಿ ದಂಪತಿಗಳ ಪುತ್ರಿ) ಹಾಗೂ ಬಿಂದು ಎಚ್. ಆರ್ (ಕೊಡಗು ಜಿಲ್ಲೆಯ ಡಿ .ಸಿ ರವಿಕುಮಾರ್ ಹಾಗೂ ಹೆಚ್. ಆರ್ ಪವಿತ್ರ ದಂಪತಿಗಳ ಪುತ್ರಿ) 596 ಅಂಕಗಳೊಂದಿಗೆ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಗಳಾಗಿದ್ದಾರೆ. ಕಲಾ ವಿಭಾಗದಲ್ಲಿ ರೂಪಶ್ರೀ (ಪುತ್ತೂರು, ನೆಹರು ನಗರದ ಆನಂದ ಗೌಡ ಕೆ ಹಾಗೂ ಪಿ. ದಾಜಮ್ಮ ದಂಪತಿಗಳ ಪುತ್ರಿ) ಇವರು 584 ಅಂಕಗಳೊಂದಿಗೆ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.


ವಿಜ್ಞಾನ ವಿಭಾಗದಲ್ಲಿ ತೀರ್ಥ ಶೆಟ್ಟಿ (ಬಂಟ್ವಾಳ ತಾಲೂಕಿನ ರಾಜೇಶ್ ಶೆಟ್ಟಿ ಹಾಗೂ ಸುಮಲತಾ ದಂಪತಿಗಳ ಪುತ್ರಿ) 595, ಶ್ರೀಜಾ (ಬಂಟ್ವಾಳ ತಾಲೂಕಿನ ಸದಾನಂದ ಹಾಗೂ ವನಿತಾ ದಂಪತಿಗಳ ಪುತ್ರಿ) 594 , ಪ್ರಾಪ್ತಿ ಆಳ್ವ (ಬಂಟ್ವಾಳ ತಾಲೂಕಿನ ಸರಪಾಡಿಯ ಪ್ರವೀಣ ಆಳ್ವ ಹಾಗೂ ಸವಿತಾ ಆಳ್ವಾ ದಂಪತಿಗಳ ಪುತ್ರಿ) 593, ಮಂಗಳಾಮೃತ ಕೆ. ಆರ್ ( ಸುಳ್ಯ ತಾಲೂಕಿನ ರವಿರಾಜ ಕೆ. ಹಾಗೂ ವಾಣಿಕುಮಾರಿ ಎ. ದಂಪತಿಗಳ ಪುತ್ರಿ) 592 ಹಾಗೂ ಪ್ರಸ್ತುತಿ ಪಿ .(ಕಾಸರಗೋಡಿನ ಉದಯ ಶಂಕರ ಭಟ್ ಪಿ ಕೆ ಹಾಗೂ ಶ್ರೀವಾಣಿ ಪಿ. ದಂಪತಿಗಳ ಪುತ್ರಿ) ಅದಿತಿ ಯು (ಬೆಂಗಳೂರಿನ ಉಮಾಶಂಕರ್ ಹಾಗೂ ಸುಮಾ ಕೆ.ಡಿ ದಂಪತಿಗಳ ಪುತ್ರಿ) 590 ಅಂಕಗಳನ್ನು ಪಡೆದುಕೊಂಡಿರುತ್ತಾರೆ.


23 ವಾಣಿಜ್ಯ ವಿಭಾಗದಲ್ಲಿ ಪ್ರಮಥ ಎಂ. ಭಟ್ 594 (ಪುತ್ತೂರು ತಾಲೂಕಿನ ರವಿ ನಾರಾಯಣ ಎಂ ಹಾಗೂ ಶರಾವತಿ ರವಿ ನಾರಾಯಣ ದಂಪತಿಗಳ ಪುತ್ರಿ ), ಶ್ರೀ ವಿದ್ಯಾ 593 (ಬಂಟ್ವಾಳ ತಾಲೂಕಿನ ಪ್ರಕಾಶ್ ನಾರಾಯಣ ಜೆ ಹಾಗೂ ರಮ್ಯಾ ದಂಪತಿಗಳ ಪುತ್ರಿ), ಸುಶ್ಮಿತಾ ಬಿ 592 (ಬಾಲಕೃಷ್ಣ ನಾಯಕ್ ಬಿ ಹಾಗೂ ರೇವತಿ ಎಂ ದಂಪತಿಗಳ ಪುತ್ರಿ) ಸಹನ ಮಳಿ 591 (ಪುತ್ತೂರು ತಾಲೂಕಿನ ವೆಂಕಟ ಕೃಷ್ಣ ಎಂ. ಎನ್ ಹಾಗೂ ವೀಣಾ ಸರಸ್ವತಿ ದಂಪತಿಗಳ ಪುತ್ರಿ) ಅಂಕಗಳನ್ನು ಪಡೆದುಕೊಂಡಿರುತ್ತಾರೆ.


ಕಲಾ ವಿಭಾಗದಲ್ಲಿ ಪ್ರೀತಿ ಸುನಿಲ್ ಚಿಲ್ಲಾಲ್ ಹಾಗೂ ರೇಷ್ಮಾ ಸುನಿಲ್ ಚಿಲ್ಲಾಲ್ ದಂಪತಿಗಳ ಪುತ್ರಿ) ತಾಲೂಕಿನ ಕೆ. ಎನ್ ಜಗದೀಶ ಹಾಗೂ ಶೋಭಾ ಕೆ. 582 (ಹುಬ್ಬಳ್ಳಿಯ ಸುನಿಲ್ ಚಿಲ್ಲಾಲ್ ಬಿಂದು ಕೆ .ಜೆ 580 ( ಎಚ್ ದಂಪತಿಗಳ ಪುತ್ರಿ), ಕಿರಣ್ 577 (ಮೈಸೂರಿನ ರವಿಕುಮಾರ್ ಹಾಗೂ ಮಂಜುಳ ದಂಪತಿಗಳ ಪುತ್ರ) ಶೋಭಿತಾ ಸಿ. ಎಚ್ 571. (ಬಂಟ್ವಾಳ, ಕನ್ಯಾನ ಗ್ರಾಮದ ಗಣರಾಜ ಸಿ. ಎಚ್ ಹಾಗೂ ಸವಿತಾ ದಂಪತಿಗಳ ಪುತ್ರಿ) ಅಂಕಗಳನ್ನು ಪಡೆದುಕೊಂಡಿರುತ್ತಾರೆ.


ಕಾಲೇಜಿನ ಒಟ್ಟು 820 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 447 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 330 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇದರೊಂದಿಗೆ ಪುತ್ತೂರಿನಲ್ಲಿ ರಾಜ್ಯಮಟ್ಟದಲ್ಲಿ ಅತ್ಯಧಿಕ ರಾಂಕ್‌ಗಳನ್ನು ಗಳಿಸಿದ ಏಕೈಕ ವಿದ್ಯಾಸಂಸ್ಥೆ ಎನ್ನುವ ಹೆಗ್ಗಳಿಕೆಗೆ ವಿವೇಕಾನಂದ ಪದವಿಪೂರ್ವ ಕಾಲೇಜು ಪಾತ್ರವಾಗಿದೆ. ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top