ಪಿಯುಸಿ: ಎಸ್‌ಡಿಎಂ ಪದವಿ ಪೂರ್ವ ಕಾಲೇಜಿಗೆ ಶೇ 98.78 ಫಲಿತಾಂಶ

Upayuktha
0


ಉಜಿರೆ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಉಜಿರೆಯ ಶ್ರೀ ಧ. ಮಂ. ಪದವಿಪೂರ್ವ ಕಾಲೇಜು ಶೇ.98.78 ಫಲಿತಾಂಶ ದಾಖಲಿಸಿದೆ.


ಪರೀಕ್ಷೆಗೆ ಹಾಜರಾದ 904 ವಿದ್ಯಾರ್ಥಿಗಳ ಪೈಕಿ 893 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಶೇ.98.62, ವಾಣಿಜ್ಯ ವಿಭಾಗದಲ್ಲಿ ಶೇ.99.69, ಕಲಾ ವಿಭಾಗದಲ್ಲಿ ಶೇ.95.77 ಫಲಿತಾಂಶ ಲಭಿಸಿದೆ.


ವಿಜ್ಞಾನ ವಿಭಾಗದ ಅಂಕಿತಾ 591 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 9ನೇ ರ್‍ಯಾಂಕ್, ವಾಣಿಜ್ಯ ವಿಭಾಗದಲ್ಲಿ ಹಂಸಿನಿ ಭಿಡೆ 595 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 6ನೇ ರ್‍ಯಾಂಕ್, ಅಂಶುಲ ಶ್ರೇಷ್ಠ 592 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 9ನೇ ರ್‍ಯಾಂಕ್


ರಾಮಚರಣ್ 591 ಅಂಕಗಳೊಂದಿಗೆ ತೃತೀಯ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 10ನೇ ರ್‍ಯಾಂಕ್ ಮತ್ತು ಕಲಾ ವಿಭಾಗದಲ್ಲಿ ನಿಜ ಕುಲಾಲ್ 593 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್, ಶ್ರೀಪೂರ್ಣ ಅಂಕಗಳೊಂದಿಗೆ 588 ಕಾಲೇಜಿಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 9ನೇ ರ್‍ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.


ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 510 ವಿದ್ಯಾರ್ಥಿಗಳಲ್ಲಿ 503 ಮಂದಿ ಉತ್ತೀರ್ಣಗೊಂಡಿದ್ದು, 234 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 260 ವಿದ್ಯಾರ್ಥಿಗಳು ಪ್ರಥಮ ಹಾಗೂ 9 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.



ವಾಣಿಜ್ಯ ವಿಭಾಗದಲ್ಲಿ 323 ವಿದ್ಯಾರ್ಥಿಗಳಲ್ಲಿ 322 ಮಂದಿ ಉತ್ತೀರ್ಣಗೊಂಡಿದ್ದು, 132 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ , 182 ವಿದ್ಯಾರ್ಥಿಗಳು ಪ್ರಥಮ, 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.



ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 71 ವಿದ್ಯಾರ್ಥಿಗಳಲ್ಲಿ 68 ಮಂದಿ ಉತ್ತೀರ್ಣಗೊಂಡಿದ್ದು, 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 34 ವಿದ್ಯಾರ್ಥಿಗಳು ಪ್ರಥಮ, 18 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.


ಸಾಧಕರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ., ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ., ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top