ಲಂಡನ್ ನಲ್ಲಿ ಪುತ್ತಿಗೆ ಶ್ರೀಪಾದರಿಗೆ ಪೌರ ಸಮ್ಮಾನ

Upayuktha
0


 ಲಂಡನ್: ಲಂಡನ್‌ನ ಸೈಂಟ್ ಅಲ್ಬನ್ಸ್ ಎಂಬಲ್ಲಿರುವ ಶ್ರೀ ಪುತ್ತಿಗೆ ಮಠದ ಶಾಖೆಯಲ್ಲಿ ಪೂಜ್ಯ ಶ್ರೀ ಪುತ್ತಿಗೆ ಶ್ರೀಪಾದರಿಗೆ ಪೌರ ಸಮ್ಮಾನವನ್ನು ಏರ್ಪಡಿಸಲಾಯಿತು. ಇಂಗ್ಲೆಂಡ್ ದೇಶದಾದ್ಯಂತ ನೆಲೆಸಿರುವ ಹಿಂದೂ ಬಂಧವರು ಮತ್ತು ಭಕ್ತರೆಲ್ಲರೂ ಸೇರಿ ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಲಂಡನ್ ನ ಸೈಂಟ್ ಆಲ್ಬನ್ಸ್ ಸಿಟಿಯ ಮೇಯರ್ ಮ್ಯಾಟ್ ಫಿಷರ್ ಮತ್ತು ಕೌನ್ಸಿಲರ್ ಸೀನ್ ಹಗ್ಸ್ ಮೊದಲಾದ ಗಣ್ಯರು ಭಾಗವಹಿಸಿದರು.  


ಲಂಡನ್ ಮಹಾನಗರದ ಸಮಸ್ತ ಜನತೆಯ ಪರವಾಗಿ ಮೇಯರ್ ಮ್ಯಾಟ್ ಫಿಷರ್ ಶ್ರೀಗಳಿಗೆ ಅಭಿನಂದನಾ ಪತ್ರವನ್ನು ಸಲ್ಲಿಸಿ ಗೌರವಿಸಿದರು.  ಸಂದರ್ಭದಲ್ಲಿ ಮಾತನಾಡಿದ ಮೇಯರ್ ಶ್ರೀಗಳ ಅಪೂರ್ವ ಸಾಧನೆಗಳ ಬಗ್ಗೆ ಮಾಧ್ಯಮಗಳ ತಾನೂ ತಿಳಿದುಕೊಂಡಿದ್ದು ಅವರಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿದರು. ಮತ್ತು ಲಂಡನ್ ನಲ್ಲಿ ಸುಂದರವಾದ ಶ್ರೀಮಠದ ಶಾಖೆಯನ್ನು ನಿರ್ಮಿಸಿದ್ದಕ್ಕೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು. 


ನಂತರ ಮಾತನಾಡಿದ ಪೂಜ್ಯ ಶ್ರೀಪಾದರು 'ಭೌಗೋಳಿಕವಾಗಿ ಮತ್ತು ವ್ಯಾವಹಾರಿಕವಾಗಿ ಸಮಸ್ತ ದೇಶಗಳಿಗೂ ಪ್ರಧಾನ ಕೇಂದ್ರದಂತಿರುವ ಲಂಡನ್ ಮಹಾನಗರವು ಪ್ರಸ್ತುತ ಲಕ್ಷಾಂತರ ಭಾರತೀಯ ಹಿಂದೂಗಳಿಗೆ ಉದ್ಯೋಗ ಮತ್ತು ಆಶ್ರಯವನ್ನು ಕೊಟ್ಟಿದೆ. ತಮ್ಮ ಶ್ರೀಮಠದ ಲಂಡನ್ ಶಾಖೆ ಅವರಿಗೆ ಧರ್ಮ ಮತ್ತು ಸಂಸ್ಕಾರಗಳ ಮಾರ್ಗದರ್ಶನವನ್ನು ನೀಡುತ್ತಿದೆ. ಅವರ ಮುಂದಿನ ಪೀಳಿಗೆಯವರನ್ನೂ ಸಂಸ್ಕಾರವಂತರನ್ನಾಗಿ, ಧರ್ಮಿಷ್ಠರನ್ನಾಗಿ,  ಉತ್ತಮ ನಾಗರಿಕರನ್ನಾಗಿ ಬೆಳೆಯುವಂತೆ ಮಾಡುವುದು ತಮ್ಮ ಧ್ಯೇಯ ಎಂದು ಹೇಳಿದರು. 


ಡಾ. ಯೋಗೀಂದ್ರ ಭಟ್ ಉಳಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮವನ್ನು ನಿರ್ವಹಿಸಿದರೆ ಶ್ರೀ ಕೇಶವ್ ತುಕಾರಾಮ್ ಅಭಿನಂದನಾ ಭಾಷಣವನ್ನು ಮಾಡಿದರು. ಶ್ರೀ ಮಠದ ಲಂಡನ್ ಶಾಖೆಯ ಪ್ರ.ಅರ್ಚಕ ಶ್ರೀ ಗಣೇಶ್ ಭಟ್ ಮತ್ತು ಶ್ರೀ ಪ್ರಭಂಜನ್ ವೇದ ಘೋಷವನ್ನು ಮಾಡಿ ಗುರುವಂದನಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಸ್ಥಳೀಯ ಗಣ್ಯರಾದ ಶ್ರೀ ಸುಬ್ರಮಣ್ಯ ರಾಮಚಂದ್ರ, ಮುಕೇಶ್ ರಾವ್, ಪ್ರವೀಣ್ ರಾವ್, ಡಾ. ಮಧು ಕೊಪ್ಪ, ಶ್ರೀ ನವನೀತ್ ಮುಂತಾದವರು ಮೇಯರ್ ಜೊತೆಗೂಡಿ ಪೂಜ್ಯ ಶ್ರೀಪಾದರನ್ನು ಸನ್ಮಾನಿಸಿದರು. 


ನಂತರ ನಿತಿನ್ ಬಾಳಿಗ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top