ವನಜೀವನ ಯಜ್ಞ: ಸಸಿಗಳ ವಿತರಣೆ

Upayuktha
0



ಉಜಿರೆ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆಶಯದಂತೆ ನಡೆಯುತ್ತಿರುವ ‘ವನಜೀವನ ಯಜ್ಞ’ ಯೋಜನೆಯ ಸಸಿಗಳ ವಿತರಣೆಯ ಅಂಗವಾಗಿ ಉಜಿರೆ ವಲಯದ ನಡ ಘಟಕ ಗುರಿಕ್ಕಾರರು ಆಗಿರುವ ಕುಕ್ಕಿನಕಟ್ಟೆಯ ‘ಶ್ರೀರಾಮ ನಿಲಯ’ದ ಶ್ರೀ ರಾಮಕೃಷ್ಣ ಭಟ್ ಬೈಪದವು,ಮತ್ತು ಮಕ್ಕಳಾದ ವಂದನಾ ಶಾರದ ಅವರ ಮನೆಯವರು ಕಂಬಾರು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ 200ಕ್ಕೂ ಹೆಚ್ಚು ವಿವಿಧ ತಳಿಯ ಉತ್ತಮ ಗುಣಮಟ್ಟದ ಸಸಿಗಳನ್ನು ಸೇವಾ ರೂಪದಲ್ಲಿ ಸಮರ್ಪಿಸಿದರು.


​ಇವುಗಳಲ್ಲಿ ಮುತ್ತುಗ, ಪುನರ್ಪುಳಿ, ಜಂಬುನೇರಳೆ, ಪನ್ನೇರಳೆ, ಸಂಪಿಗೆ, ನಾಗಲಿಂಗ ಪುಷ್ಪ, ಬಿಲ್ವಪತ್ರೆ, ಬಾದಾಮಿ, ನೆಲ್ಲಿ, ನೇರಳೆ, ರೆಂಜೆ ಸೇರಿದಂತೆ ಹಲವು ಅಪರೂಪದ ಸಸಿಗಳು ಒಳಗೊಂಡಿವೆ.


ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಅಡಳಿತ ಮುಕ್ತೆಸ್ಥಾರ ಎಡಕ್ಕಾನ ರವಿಶಂಕರ ಭಟ್ ಶ್ರೀ ರಾಮಕೃಷ್ಣ ಭಟ್ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಗುಂಪೆ ವಲಯ ಅಧ್ಯಕ್ಷರಾದ ಕುಮಾರ ಸುಬ್ರಮಣ್ಯ ಭಟ್, ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಶಂಕರರಾವ್ ಕಕ್ವೆ, ಪರಮೇಶ್ವರ ಭಟ್ ಮೇರ್ಕಳ, ಚಿದಾನಂದ ಭಟ್ ಮರುವಳ, ರಂಜಿತ್ ಕೋಳಾರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top