ನಮ್ಮ ಉಳಿವಿಗಾಗಿ ಪರಿಸರ ಉಳಿಸೋಣ

Upayuktha
0

ರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಪರಿಸರ ನಮ್ಮ ಬದುಕಿನ ಒಂದು ಭಾಗವಾಗಿದ್ದು, ಅದರ ಬಗ್ಗೆ ನಮ್ಮ ಕೊಡುಗೆ ಏನು ಅನ್ನುವುದು ನಮ್ಮ ಪಾಲಿನ ಯಕ್ಷ ಪ್ರಶ್ನೆ ಆಗಿದೆ.


ಇಡೀ ಸೌರ ವ್ಯೂಹದಲ್ಲಿ ಕೇವಲ ನಮ್ಮಭೂಮಿಯೊಂದೇ ಜೀವಿಗಳಿಗೆ ಆಶ್ರಯದಾತವಾಗಿದೆ. ಪರಿಸರ ನಮಗೆ ಮಾತ್ರ ಸೀಮಿತವಲ್ಲ, ಅದೂ ಪ್ರಾಣಿ, ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ನಾವು ಪರಿಸರದ ಒಂದು ಭಾಗವಾಗಿ ಇರುವುದನ್ನು ಬಿಟ್ಟು ನಾವೇ ಪರಿಸರದ ಯಜಮಾನನಂತೆ ವರ್ತಿಸುತ್ತಿದ್ದೇವೆ. ಬಹುಶಃ ಪರಿಸರ ಮಾಲಿನ್ಯ ಎಂಬ ಶಬ್ದ ಬಂದಿದ್ದೇ ನಮ್ಮಿಂದ ಎಂದು ಹೇಳಬಹುದು.


ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮಾತ್ರವಲ್ಲ, ಪರಿಸರದ ಉಳುವಿಗಾಗಿ ಸಹ ನಾವು ನಮ್ಮ ಕರ್ತವ್ಯ ನಿಭಾಯಿಸಿ ತೋರಿಸಬೇಕಾಗುತ್ತದೆ. ಒಂದು ಗಿಡ ಬೆಳೆಸಿದರೆ, ವಾತಾವರಣದಲ್ಲಿ ಆಮ್ಲಜನಕಕ್ಕೆ ನಮ್ಮ ಕೊಡುಗೆ ಕೊಟ್ಟಂತೆ ಎಂದು ಹೇಳಬಹುದು.


ಒಂದು ಗಿಡ ಬೆಳೆಸಿದರೆ, ನಾವು ವಾತಾವರಣಕ್ಕೆ ಆಮ್ಲಜನಕ ಕೊಡುಗೆ, ಅದರ ಬೇರುಗಳಿಂದ ಮಣ್ಣಿನ ಸವಕಳಿ ತಡೆಯ ಬಹುದು. ಅದು ಬೆಳೆದು ಮರವಾದ ಮೇಲೆ ಪ್ರಾಣಿ ಮತ್ತು ಪಕ್ಷಿಗಳಿಗೆ ಆಶ್ರಯ ಸ್ಥಾನವಾಗುತ್ತದೆ. ಸೂರ್ಯನ ಕಿರಣಗಳು ನೇರವಾಗಿ ಬೀಳುವುದನ್ನು ತಡೆಯಬಹುದು. ಇದರಿಂದ ಮಳೆಯ ಪ್ರಮಾಣವನ್ನು ಹೆಚ್ಚಿಸಿ ಭೂಮಿಗೆ ನಮ್ಮದೇ ಆದ ಕೊಡುಗೆ ನೀಡಬಹುದು.


ಒಂದು ಗಿಡ ಮರವಾಗಿ ಬೆಳೆದು ನಿಲ್ಲಲು ವರ್ಷಾನುಗಟ್ಟಲೆ ಸಮಯ ಬೇಕು. ಆದರೆ ಅದನ್ನು ಕಡಿಯಲು ಕೇವಲ ಒಂದು ಕೊಡಲಿ ಸಾಕು. ಇದರ ಮಹತ್ವವನ್ನು ಅರಿತು ನಮ್ಮ ಹಿರಿಯರು ಅಶ್ವತ್ಥ ವೃಕ್ಷ, ಔದುಂಬರ ವೃಕ್ಷ, ಶಮಿ ವೃಕ್ಷ ಎಂದು ದೇವತೆಗಳ ಹೆಸರಿನಲ್ಲಿ ವೃಕ್ಷಗಳನ್ನು ಪೋಷಿಸುತ್ತಿದ್ದರು.


ನಮಗೆ ಜೀವನವನ್ನು ಕೊಟ್ಟಂತಹ ಪರಿಸರಕ್ಕೆ ನಾವು ಕೂಡ ಬೇಕಾದ ಕೊಡುಗೆ ಮರೆತು ಬಿಟ್ಟಿದ್ದೇವೆ. ನಮ್ಮ ರಾಕ್ಷಸೀ ಪ್ರವೃತ್ತಿಗೆ ಇಡೀ ಪರಿಸರಕ್ಕೆ ಕೊಡಲಿ ಪೆಟ್ಟು ನೀಡಿ ಪರಿಸರದ ದೃಷ್ಟಿಯಲ್ಲಿ ಬೇಡವಾದ ಜೀವಿ ಎನಿಸಿಕೊಳ್ಳುತ್ತಿದ್ದೇವೆ. ಬನ್ನಿ, ಗಿಡಗಳು ನೆಟ್ಟು ಪೋಷಿಸಿ, ನಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸೋಣ. ಏನಂತೀರಾ?

- ಗಾಯತ್ರಿ ಸುಂಕದ, ಬದಾಮಿ



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top