ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಸ್ಥಾನದ ಜೀರ್ಣೋದ್ಧಾರ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟನೆ

Upayuktha
0

ಬೇಳ: ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಮಾರಮಂಗಲವು ಕೇರಳದ ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದಲ್ಲಿರುವ ಅತ್ಯಂತ ಪುರಾತನ ಹಾಗೂ ಪವಿತ್ರವಾದ ನಾಗಾರಾಧನೆ ಕೇಂದ್ರವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಮುಖ್ಯ ಆರಾಧ್ಯ ದೇವನಾಗಿ ಪೂಜಿಸಲಾಗುತ್ತದೆ. ಈ ಕ್ಷೇತ್ರವು ಸರ್ಪದೋಷ, ಕುಜದೋಷ ಮತ್ತು ಸಂತಾನ ದೋಷ ನಿವಾರಣೆಗೆ ಅತ್ಯಂತ ಪ್ರಸಿದ್ಧಿಯಾಗಿದೆ.

ದೇವಸ್ಥಾನದ ಆವರಣದಲ್ಲಿ 'ಹುಲಿ ದನ ಕಲ್ಲು' ಎಂಬ ವಿಶೇಷ ಶಿಲ್ಪವಿದೆ. ಇಲ್ಲಿ ಹುಲಿ ಮತ್ತು ದನವು  ವೈರತ್ವವನ್ನು ಮರೆತು ಅನ್ಯೋನ್ಯತೆಯಿಂದಿದ್ದ ಪವಿತ್ರ ಸ್ಥಳವೆಂಬುದನ್ನು  ಐತಿಹ್ಯವು ಸಾರುತ್ತದೆ. ಈ ಕ್ಷೇತ್ರದ ವಿಶೇಷತೆಯೆಂದರೆ ಇಲ್ಲಿ ಹಿಂದೂಗಳಲ್ಲದೆ ಮುಸ್ಲಿಂ ಬಾಂಧವರು ಕೂಡ ಭಕ್ತಿಪೂರ್ವಕವಾಗಿ  ಹರಕೆಗಳನ್ನು ಸಲ್ಲಿಸುತ್ತಾರೆ. ಕ್ಷೇತ್ರದ ಜೀರ್ಣೋದ್ಧಾರ ಕೆಲಸಕಾರ್ಯಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. ಈ ಎಲ್ಲಾ ಕಾರ್ಯಗಳಿಗೆ ಊರ ಪರವೂರ ಭಕ್ತ ಬಾಂಧವರ,ದಾನಿಗಳ ತನು, ಮನ, ಧನಗಳ ಸಹಕಾರವನ್ನು ಬಯಸುತ್ತಾ, ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ನೂತನ ಕಾರ್ಯಾಲಯವನ್ನು ಕ್ಷೇತ್ರದ ಆಡಳಿತ ಮೊಕ್ತೇಸರರೂ, ತಂತ್ರಿವರ್ಯರೂ ಆದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರು ಉದ್ಘಾಟಿಸಿದರು.


ಜೀರ್ಣೋದ್ಧಾರ ಸಮಿತಿಯ ಕಾರ್ಯಾದ್ಯಕ್ಷರಾದ ಶ್ರೀಧರ ಮಾಸ್ತರ್ ಬೇಳ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಹೆಬ್ಬಾರ್, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ , ಕ್ಷೇತ್ರದ ಗುರಿಕಾರರಾದ ಕೊಡ್ವಕೆರೆ ಶಿವಕುಮಾರ, ಕೇಶವ ಪ್ರಸಾದ್,  ಮಾತೃ ಸಮಿತಿಯ ಅಧ್ಯಕ್ಷೆ ಡಾ. ಮಾಲತಿ ಪ್ರಕಾಶ್, ಕ್ಷೇತ್ರದ ಅರ್ಚಕರಾದ ಸುಬ್ರಹ್ಮಣ್ಯ ಅಡಿಗ, ಕ್ಷೇತ್ರದ ವ್ಯವಸ್ಥಾಪಕರಾದ ಹರಿಕೃಷ್ಣ,ರಾಮಚಂದ್ರ ಶಾಸ್ತ್ರಿ,ಗಣೇಶ ಪೆರ್ವ, ವಿಜಯ ಕುಮಾರ್, ಶೀನ ಶೆಟ್ಟಿ, ಗಣೇಶ ಕೃಷ್ಣ ಅಳಕ್ಕೆ, ಬಾಲಕೃಷ್ಣ ಮೂರ್ತಿ, ಮಹಾಲಿಂಗ ಪಾಟಾಲಿ, ನಾರಾಯಣ ಬಂಟ, ಸದಾಶಿವ ಮಾಸ್ತರ್, ಬಾಲಗೋಪಾಲ,ನಾರಾಯಣ ಮಣಿಯಾಣಿ ಮೊದಲಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top