ಕಾಸರಗೋಡು: ಹಲಸು-ಮಾವು ಮೇಳ

Upayuktha
0

ಕಾಸರಗೋಡು: ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಇವರಿಂದ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದಲ್ಲಿ ಸಂಘದ 227ನೇ ಕಾರ್ಯಕ್ರಮವಾಗಿ ಜೂನ್ 25ರಂದು ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ ಶ್ರೀ ಗಿರಿ ಸದನ ಚೂರಿಪ್ಪಳ್ಳ ನೆಲ್ಲಿಕಟ್ಟೆ ಇಲ್ಲಿನ ಶಿವದುರ್ಗಾ ವೇದಿಕೆಯಲ್ಲಿ  ಹಲಸು ಮಾವು ಮೇಳ ಆಯೋಜಿಸಲಾಗಿತ್ತು.


ಸಂಘದ ಕೋಶಾಧಿಕಾರಿ ಡಾ. ವೆಂಕಟಗಿರೀಶ್ ಇವರು ವೇದಿಕೆಯಲ್ಲಿ ವಿಶೇಷ ತಳಿಯ ಮಾವು ಕತ್ತರಿಸಿ ವೇದಿಕೆಯಲ್ಲಿ ಇರುವವರಿಗೆ ಹಂಚುವುದರ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ರೀತಿಯಲ್ಲಿ ಚಾಲನೆ ಕೊಟ್ಟರು. ಉಪಾಧ್ಯಕ್ಷರಾದ ಶ್ರೀ ಅಚ್ಚುತ ಭಟ್ ಇವರು ಸ್ಥಳೀಯವಾಗಿ ದೊರೆಯುವ ವಿವಿಧ ಬಗೆಯ ಹಲಸು ಮತ್ತು ಮಾವಿನ ತಳಿಗಳ ಪರಿಚಯ ಮಾಡಿಸಿದರು. ಸಂಘದ ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಇವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರ್ವಹಿಸುದರ ಜೊತೆಗೆ ಹಲಸು ಮತ್ತು ಮಾವಿನ ಹಣ್ಣುಗಳ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳನ್ನು ತಿಳಿಸಿದರು.


ಇದೇ ಸಂದರ್ಭದಲ್ಲಿ ಮಾವು ಮತ್ತು ಹಲಸಿನಿಂದ ತಯಾರಿಸಿದ ಖಾದ್ಯಗಳು ಮತ್ತು ತಿಂಡಿ ತಿನಿಸುಗಳನ್ನು ಅತಿಥಿಗಳಿಗೆ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ. ವಾಣಿಶ್ರೀ ಕಾಸರಗೋಡು ಸಾಹಿತ್ಯ ಓದಿದರು. ಸುಚಿತ್ರ ಅವರ ಗಾನ ವೈಭವ ಸುಂದರವಾಗಿ ಮೂಡಿ ಬಂತು. ಭವಿತ್, ಹರ್ಷಿತ್, ಅಹಿಷ್, ಲಕ್ಷೀಶ್ ಮುಂತಾದ ಕಲಾವಿದರಿಂದ ವಿವಿಧ ಪ್ರಕಾರದ ನೃತ್ಯಗಳು ಮೂಡಿಬಂದವು. ಕಲಾವಿದರಿಗೆ ಪುಸ್ತಕ ಮತ್ತು ಸ್ಮರಣಿಕೆಗಳನ್ನು ನೀಡಿ ವೇದಿಕೆಯಲ್ಲಿ ಗೌರವಿಸಿ ಗುರುತಿಸಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top