ನೀರ್ಚಾಲು: ವಿಶ್ವಪರಿಸರ
ದಿನದ ಅಂಗವಾಗಿ ಕಾಸರಗೋಡು ಸರಕಾರಿ ಕಾಲೇಜಿನ ಎನ್.ಸಿ.ಸಿ ವಿದ್ಯಾರ್ಥಿಗಳು ಕಾಲೇಜು ಪ್ರಾಧ್ಯಾಪಕ
ಡಾ.ರತ್ನಾಕರ ಮಲ್ಲಮೂಲೆಯವರ ಬನವಾಸಿ ಪ್ರಕೃತಿಧಾಮಕ್ಕೆ ಭೇಟಿ ನೀಡಿ ವಿಶ್ವಪರಿಸರ ದಿನವನ್ನು
ಅರ್ಥಪೂರ್ಣವಾಗಿ ಆಚರಿಸಿದರು.
ಎನ್ ಸಿ ಸಿ ಹಿರಿಯ ಹಾಗೂ
ಕಿರಿಯ ಕೇಡೆಟ್ಸ್ ಗಳು ಪಾಲ್ಗೊಂಡರು. ಬನವಾಸಿಯ ಸೌರಯೋಜನೆ, ಜಲಮರುಪೂರಣ
ವ್ಯವಸ್ಥೆ, ಮಳೆಕೊಯ್ಲು
ವ್ಯವಸ್ಥೆಗಳನ್ನು ವೀಕ್ಷಿಸಿದರು. ಈ ಕುರಿತು ಡಾ.ರತ್ನಾಕರ ಮಲ್ಲಮೂಲೆಯವರ ಜತೆ ಸಂವಾದ ನಡೆಸಿದರು.
ಎಲ್ಲರೂ ಜತೆಸೇರಿ ಬನವಾಸಿಯ ಸೀತಾವನ ಔಷಧೀಯ ತೋಟದಲ್ಲಿ ರಾಮಪತ್ರೆ
ಗಿಡವೊಂದನ್ನು
ನೆಟ್ಟು ವಿಶ್ವಪರಿಸರ ದಿನವನ್ನು ಅರ್ಥಪೂರ್ಣಗೊಳಿಸಿದರು.
ತಂಡದಲ್ಲಿ ಸೀನಿಯರ್ ಅಂಡರ್ ಆಫಿಸರ್ ವರ್ಷ ಎಂ ಆರ್, ಅಂಡರ್ ಆಫಿಸರ್ ಅಮೃತಾ ಪಿ ಸರ್ಜೆಂಟ್
ಸಾಯಿರಾಜ್, ಸರ್ಜೆಂಟ್
ಹರ್ಷಿಣಿ ಬಿ ಎನ್, , ಕೇಡೆಟ್ಸ್ ಗಳಾದ
ರೇವತಿ ಕೆ, ಅರ್ಜುನ್ ಕೆ, ಶಿವನಂದನ ಕೆ.ವಿ, , ವಿನೋಲ ಡಿಸೋಜ, ಮಿಥುನ್ ರಾಜ್, ಸಮೀಕ್ಷ, ಹರ್ಷಕುಮಾರ್, ದಿವ್ಯ, ಸುಶ್ಮಿತ ಈ
ಮುಂತಾದವರು ಭಾಗವಹಿಸಿದರು. ವರ್ಷ ಎಂ ಆರ್ ನೇತೃತ್ವ ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


