ಸುರತ್ಕಲ್: ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳ ಪಾತ್ರ ಹಿರಿದಾಗಿದೆ. ರಸ್ತೆ ಸುರಕ್ಷತಾ ಮತ್ತು ಸಾರಿಗೆ ನಿಯಮಗಳ ಪರಿಣಾಮಕಾರಿ ಅನುಪಾಲನೆ ಅಗತ್ಯ ಎಂದು ರೋಟರಿ ಜಿಲ್ಲೆ 3181ರ ರಸ್ತೆ ಸುರಕ್ಷೆ ಮತ್ತು ಸಾರಿಗೆ ನಿಯಮಗಳ ಸಮಿತಿ ಅಧ್ಯಕ್ಷ ರೊ. ಹರ್ಷ ಕುಮಾರ್ ರೈ ನುಡಿದರು.
ಅವರು ಸುರತ್ಕಲ್ ರೋಟರಿ ಕ್ಲಬ್ ಎನ್.ಐ.ಟಿ.ಕೆ. ಪಡ್ರೆಯ ಶ್ರೀ ಧೂಮಾವತಿ ದ್ವಾರ ಬಳಿ ರೋಟರಿ ಫೌಂಡೇಶನ್ ನೆರವಿನಿಂದ ರೋಟರಿ ಜಿಲ್ಲೆ 3181 ಜಿಲ್ಲಾ ಅನುದಾನದೊಂದಿಗೆ ಸುಸಜ್ಜಿತ ನವೀಕೃತ ಪಡ್ರೆ ಬಸ್ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು.
ನಾಗರಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸಾರಿಗೆ ನಿಯಮ ಮತ್ತು ರಸ್ತೆ ಸುರಕ್ಷೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರೋಟರಿ ವಲಯ 2 ರ ಝೋನಲ್ ಲೆಫ್ಟಿನೆಂಟ್ ಸಂದೀಪ್ ರಾವ್ ಇಡ್ಯಾ ಶುಭ ಹಾರೈಸಿದರು.
ಹಿಂದು ವಿದ್ಯಾದಾಯಿನೀ ಸಂಘದ ಜೊತೆ ಕಾರ್ಯದರ್ಶಿ ಎಂ.ಜಿ. ರಾಮಚಂದ್ರ, ಹೊಸಬೆಟ್ಟು ನಾಗರಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಆನಂದ ಭಂಡಾರಿ, ಮಾಜಿ ಸಹಾಯಕ ಗವರ್ನರ್ ಡಾ. ಅರವಿಂದ ಭಟ್, ಸುರತ್ಕಲ್ ರೋಟರಿ ಕ್ಲಬ್ ನ ಕೋಶಾಧಿ ಕಾರಿ ಮೋಹನ ಹೆಚ್, ಸಾಮಾಜಿಕ ಸೇವಾ ನಿರ್ದೇಶಕ ಚಂದ್ರಕಾಂತ್ ಮರಾಠೆ, ಕ್ಲಬ್ ಸೇವಾ ನಿರ್ದೇಶಕ ಕೃಷ್ಣ ಮೂರ್ತಿ, ನಿಯೋಜಿತ ಅಧ್ಯಕ್ಷ ಶ್ರೀಧರ್ ಟಿ.ಎನ್, ನಿಯೋಜಿತ ಕಾರ್ಯದರ್ಶಿ ಶ್ರೀನಿವಾಸ ದೇವ ರಾವ್, ಸ್ಥಾಪಕ ಸದಸ್ಯ ಸತೀಶ್ ರಾವ್ ಇಡ್ಯಾ, ಸದಸ್ಯರಾದ ಶ್ರೀನಿವಾಸ ರಾವ್ ಪಾದೆಬೆಟ್ಟು, ವಿದ್ಯಾಲಕ್ಷೀ ಅರವಿಂದ ಭಟ್, ಆನಂದ ರಾವ್, ದಿನೇಶ್ ಶೆಟ್ಟಿ, ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಕಾರ್ಯದರ್ಶಿ ರೊ. ಸತೀಶ್ ಸದಾನಂದ, ಸಮಾಜ ಸೇವಕ ಮಹಾಬಲ ರೈ ಪಡ್ರೆ ಉಪಸ್ಥಿತರಿದ್ದರು.
ಬಸ್ ತಂಗುದಾಣವನ್ನು ನಿರ್ಮಿಸಿದ ದಾನಿ ಹಾಗೂ ಉದ್ಯಮಿ ರೊ. ದಿನೇಶ್ ಶೆಟ್ಟಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ರೊ. ರಾಮಚಂದ್ರ ಬಿ. ಕುಂದರ್ ಅವರನ್ನು ಸಮ್ಮಾನಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಮ ಮೋಹನ್ ವೈ. ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


