ಮಂಗಳೂರು:
ಸೌಹಾರ್ದ ಸಾಹಿತ್ಯ ವೇದಿಕೆ ಹುಬ್ಬಳ್ಳಿ (ಮಂಗಳೂರು ಘಟಕ) ಸಾರಥ್ಯದಲ್ಲಿ ಮಂಗಳೂರಿನ
ಕವಿ ಮನದವರಿಗೆ ಮೇ ತಿಂಗಳು
ಕಾರ್ಮಿಕ ದಿನಾಚರಣೆ ಅಂಗವಾಗಿ ತಾವೇ ಬರೆದ ಕವನಗಳ
ವಾಚನ ಮತ್ತು ಭಾವಾರ್ಥ ವ್ಯಕ್ತ ಪಡಿಸುವ ವಿಚಾರ ಸಂಕಿರಣವನ್ನು ಮೇ 3 ಭಾನುವಾರದಂದು ಆರ್ ಎಂ ಗೊಗೆರಿಯವರ
ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಒಂಬತ್ತನೆಯ
ಸರಣಿಯ ಈ ಕವಿಗೋಷ್ಠಿಯಲ್ಲಿ ಮುಂಬಯಿಯ
ಸರ್ವಮಂಗಳಾ ಅರಸ ಶೆಟ್ಟಿ, ಸಂಯೋಜಕರಾದ
ಆರ್ ಎಂ ಗೊಗೇರಿ, ನಿರೀಕ್ಷಿತ,
ರೇಖಾ ಸುದೇಶ್ ರಾವ್, ಡಾ ಸುರೇಶ್ ನೆಗಳಗುಳಿ,
ಆಕೃತಿ ಐ ಎಸ್ ಭಟ್,
ಅರುಣಾ ನಾಗರಾಜ್, ಬಿ ಎಮ್ ಆಕಾಶ್
ಉಳ್ಳಾಲ, ಪ್ರೇಮ ಮೂಗೇರ ಉಳ್ಳಾಲ ಮತ್ತಿತರರು ಕಾರ್ಮಿಕನ ಕುರಿತಾದ ಕವನ ವಾಚಿಸಿದರು. ಇನ್ನೋರ್ವರು
ಅವರ ಕವನವನ್ನು ವಿಶ್ಲೇಷಣೆ ಮಾಡಿದ್ದು ವಿಶೇಷವಾಗಿತ್ತು.
ಈ ವೇಳೆ ಮಂಗಳೂರಿನ ಕಣಚೂರು
ಆಯುರ್ವೇದ ಆಸ್ಪತ್ರೆಯ ಮುಖ್ಯ ಸಲಹೆಗಾರ ಹಾಗೂ ಮಂಗಳಾ ಆಸ್ಪತ್ರೆಯ
ಮೂಲವ್ಯಾಧಿ ತಜ್ಞ ಡಾ ಸುರೇಶ
ನೆಗಳಗುಳಿಯವರು ಮಾತನಾಡುತ್ತಾ ಕಾರ್ಮಿಕನಿಗೆ ನಿತ್ಯವೂ ದಿನಾಚರಣೆ ಅವನಿಲ್ಲದೆ ಯಾರೂ ಇಲ್ಲ ಹಾಗಾಗಿ
ಅವನು ಲೋಕಮಾನ್ಯ ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


