ಶತಕ ತಪ್ಪಿದರೂ ಅಭಿಮಾನಿಗಳ ಮನ ಗೆದ್ದ ನಾಯಕ "ರಜತ್ ಪಾಟೀದಾರ್"
ನಾಯಕ
ರಜತ್ ಪಾಟಿದಾರ್ ಅದ್ಭುತ ಬಿರುಸಿನ ಆಟದಿಂದ ಹಿಮಾಚಲ್ ಪ್ರದೇಶದ ಧರ್ಮಶಾಲ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಕ್ವಾಲಿಫೈಯರ್
1 ನಲ್ಲಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ 92 ರನ್ಗಳ ಬೃಹತ್ ಅಂತರದಿಂದ
ಭರ್ಜರಿ ಜಯ ಗಳಿಸಿತು ರಾಯಲ್ ಚಾಲೆಂಜರ್ಸ್
ಬೆಂಗಳೂರು ತಂಡ.
ತಂಡವು
ಎದುರಾಳಿಗಳ ಮೇಲೆ ಸಂಪೂರ್ಣ ಒತ್ತಡ
ಹೇರಿ ಆಡಿದ್ದು ನಿಜಕ್ಕೂ ಆಕರ್ಷಕವಾಗಿತ್ತು. ಬೌಲರ್ಗಳು, ಬ್ಯಾಟರ್ಗಳು,
ಫಿಲ್ಡರ್ ಗಳು ಹೀಗೆ ಇಡೀ
ತಂಡ ಒಂದಾಗಿ ಹೋರಾಡಿದ ಈ ಆಟ, ಆರ್
ಸಿ ಬಿ ಯ ಶಕ್ತಿಯನ್ನು
ಇಡೀ ಕ್ರಿಕೆಟ್ ಜಗತ್ತಿಗೆ ತೋರಿಸಿ ಸಾರಿ ಹೇಳಿದಂತೆ ಆಗಿದೆ.
ಟಾಸ್
ಗೆದ್ದ ಜಿ.ಟಿ ಮೊದಲು ಫಿಲ್ಡಿಂಗ್ ಅಯ್ಕೆ ಮಾಡಿಕೊಂಡಿತು, ಆರ್ ಸಿ ಬಿ
ಆರಂಭದಿಂದಲೇ ಸಿಡಿಲಬ್ಬರದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ
ತೂರಿಸಿತು. ನಾಯಕ ರಜತ್ ಪಾಟಿದಾರ್
ಒತ್ತಡದಲ್ಲಿಯೂ ಸಹ ತಂಡವನ್ನು ಮುನ್ನಡೆಸಿ
ಕೇವಲ 33 ಎಸೆತಗಳಲ್ಲಿ 93 ರನ್ ಚಚ್ಚಿದರು. 9 ಬೌಂಡರಿ,
5 ಸಿಕ್ಸರ್ಗಳಿಂದ ಕೂಡಿದ ಅವರ ಇನ್ನಿಂಗ್ಸ್
ಸ್ಟೇಡಿಯಂನಲ್ಲಿ ರೋಮಾಂಚನ ಸೃಷ್ಟಿಸಿತು. ಇವರ ನಾಯಕತ್ವ ಆರ್.ಸಿ.ಬಿ ಯ
ಪಾಲಿಗೆ ಬೆಲೆ ಕಟ್ಟಲಾಗದ್ದು. 254 ರನ್ಗಳ ದೊಡ್ಡ ಮೊತ್ತ
ಸೇರಿಸಿ, ಎದುರಾಳಿ ಬೌಲರ್ ಗಳನ್ನು ಸಂಪೂರ್ಣವಾಗಿ ಕಟ್ಟಿಹಾಕಿತು.
ಕಗಿಸೊ
ರಬಾಡ, ಮೊಹಮ್ಮದ್ ಸಿರಾಜ್, ಜೇಸನ್ ಹೋಲ್ಡರ್, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್ ರನ್ನೊಳಗೊಂಡ ಬಲಿಷ್ಠ ಬೌಲಿಂಗ್ ಆಕ್ರಮಣದ ಮುಂದೆ ಅತ್ಮಸ್ಥೆರ್ಯದಿಂದ ಆಕರ್ಷಕವಾಗಿ ಬ್ಯಾಟಿಂಗ್ ಮಾಡಿ ರನ್ ಮಳೆ
ಸುರಿಸಿದ ಆಟವನ್ನು ಎಂದೂ ಯಾರು ಮರೆಯುವಂತಿಲ್ಲ,
ಆರ್.ಸಿ.ಬಿಯ 18 ವರ್ಷಗಳ
ಕಪ್ ಕನಸನ್ನು ನನಸು ಮಾಡಿದ್ದ ನಾಯಕ
ರಜತ್ ಪಾಟಿದಾರ್. ಆರ್.ಸಿ.ಬಿಯನ್ನು
ಸತತ 2ನೇ ಬಾರಿ ಫೈನಲ್
ಗೆ ಮುನ್ನಡೆಸಿ ಆರ್.ಸಿ.ಬಿ ಯ ಅದೃಷ್ಟವನ್ನೆ ಬದಲಿಸಿದ
ಸಾರಥಿ ರಜತ್ ಪಟಿದಾರ್, ಇವರ
ಜೊತೆ ಪ್ರತಿ ಬ್ಯಾಟರ್ಗಳು ಸಹ ಸ್ಫೋಟಕ
ಹಾಗು ಜವಾಬ್ದಾರಿಯುತ ಆಟವಾಡಿದ್ದಾರೆ.
255 ರನ್ಗಳ ಕಠಿಣ ಗುರಿ
ಬೆನ್ನಟ್ಟಿದ ಜಿಟಿ ತಂಡವನ್ನು ಆರ್.ಸಿ.ಬಿ ಬೌಲರ್ಗಳು 162 ರನ್ಗಳಿಗೆ ಕಟ್ಟಿಹಾಕಿದರು.
ಪವರ್ಪ್ಲೇನಲ್ಲೇ 3 ವಿಕೆಟ್ ಕಿತ್ತು ಎದುರಾಳಿಗಳ ಮನಸ್ಥೆರ್ಯ ಕುಗ್ಗಿಸಿದರು. ಮಧ್ಯಮ ಓವರ್ಗಳಲ್ಲಿ ರನ್ಗೆ ಕಡಿವಾಣ ಹಾಕಿ
ಒತ್ತಡ ಹೆಚ್ಚಿಸಿದರು. ಕೊನೆಗೆ ಆರ್.ಸಿ.ಬಿ. 92 ರನ್ಗಳಿಂದ ಭರ್ಜರಿ
ಗೆಲುವು ದಾಖಲಿಸಿತು.
ಆರ್.ಸಿ.ಬಿ.
ನಾಯಕ ರಜೆತ್ ಪಾಟಿದಾರ್ ಆಟಕ್ಕೆ ಹರಿದು ಬಂತು ಮೆಚ್ಚುಗೆಗಳ ಸುರಿಮಳೆ
ಪಂದ್ಯಶ್ರೇಷ್ಠ
ಪ್ರಶಸ್ತಿ ಗೆದ್ದ ರಜತ್ ಪಾಟಿದಾರ್ ಕುರಿತು
ಮಾಜಿ ಕ್ರಿಕೆಟಿಗರು ಮುಕ್ತಕಂಠದಿಂದ ಹೊಗಳಿದ್ದಾರೆ.
“ಒತ್ತಡದ ಕ್ವಾಲಿಫೈಯರ್ 1 ನಲ್ಲಿ ನಾಯಕನಾಗಿ ತಂಡವನ್ನು ಮುಂದೆ ನಿಂತು ಹೋರಾಡಿ ಮುನ್ನಡೆಸಿದ ರೀತಿ ಅದ್ಭುತ. ಇದು
ನಾಯಕತ್ವದ ಇನ್ನಿಂಗ್ಸ್”
ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ.
ಅಭಿಮಾನಿಗಳು
ಸಾಮಾಜಿಕ ಜಾಲತಾಣಗಳಲ್ಲಿ ‘ಕ್ಯಾಪ್ಟನ್ ರಜತ್’ ಹ್ಯಾಶ್ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.
‘ಈ ಸಲ ಕಪ್ ನಮ್ದೇ’ ಎಂಬ
ಕೂಗು ನ್ನು ಮತ್ತಷ್ಟು ಗಟ್ಟಿ
ಗೊಳಿಸಿದ್ದಾರೆ.
ಈ ಗೆಲುವಿನೊಂದಿಗೆ ಆರ್.ಸಿ.ಬಿ ಫೈನಲ್ಗೆ ಲಗ್ಗೆ ಇಟ್ಟಿದ್ದು,
ಕಪ್ ಗೆಲ್ಲುವ ಕನಸಿಗೆ ಇನ್ನೊಂದೇ ಹೆಜ್ಜೆ ಬಾಕಿ ಉಳಿದಿದೆ. ಫೈನಲ್ನಲ್ಲೂ ಇದೇ ಛಲ, ಇದೇ
ಆಕ್ರಮಣಕಾರಿ ಆಟ ಇದೇ ಜೋಶ್,
ಇದೇ ಹೋರಾಟ ಮುಂದುವರಿದರೆ ‘ಈ ಸಲ ಕಪ್ ನಮ್ದೇ’ ಅನ್ನುವ ಕೋಟ್ಯಂತರ
ಕ್ರಿಕೆಟ್ ಅಭಿಮಾನಿಗಳ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ.
ಹೆಚ್ .ವಿ. ಮಂಜುನಾಥ ಸ್ವಾಮಿ
9844882366
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


