ಹವ್ಯಕ ಕವನ: ಕಣ್ಣು ಬಿಟ್ಟಿಕ್ಕು

Upayuktha
0

(ಭಾಮಿನಿ ಷಟ್ಪದಿಯಲ್ಲಿ ಹವ್ಯಕ ಭಾಷೆಯ ಕವನ) 





ಮುಗಿಲು ಹಾಕಿರು ಮಳೆಯೆ ಬತ್ತಿಲೆ,

ಬೆಗರು ಬಿಚ್ಚುದು ಚೆಂಡಿಯಪ್ಪದು

ರಗಳೆ ಕಿರಿಕಿರಿ ಮೈದೆ ಬೊದುಲೀ ಮಿಂದ ಹಾಂಗಾತು |

ಪಗರುವಂತಹ ರೋಗ ಸಾವಿರ

ಹೊಗೆಯ ಹಾಂಗೆಯೆ ದಟ್ಟ ಹರಡುದು

ಚಿಗುರು ಬಳ್ಳಿಗೊ ಬಾಡಿವೊಣಗೊದು

ನೋಡಿ ಸಾಕಾತು ||೧||


ವರುಣ ದೇವರೆ ಕೋಪಯೆಂತಕೆ

ಕರುಣೆ ರಜ್ಜವು ಬತ್ತಿಲೆಂತಕೆ 

ಹೊರುದು ಹಾಕುವ ಬೆಶಿಲಿಲೆಡ್ತಿಲೆ ಮನಸು ಕೂಗುತ್ತು |

ಸುರಗೆ ಹೂಗುದೆ ಮುದುಡಿಗೊಂಡಿದು 

ಕೊರಗಿ ಬೀಳೊದು,ಭಾನು ಸುಡುವಗ

ಬರಗಿ ಹೆರ್ಕುಲೆ, ಬಿದ್ದ ಹೂಗಿನ ನೆಲವೆ ಸುಟ್ಟತ್ತು ||೨||


ಹಿಗ್ಗಿ ಸುಗ್ಗಿಯ ಕಾಲ ಬದಲಿತು

ಕುಗ್ಗಿ ಹೋದರೆ ಹೃದಯ ಬೇಯಿತು

ತಗ್ಗಿ ನಡವಲೆ ಬುದ್ಧಿ ಕಲಿಶುದು ದೇವರಾದಿಕ್ಕು |

ಬಗ್ಗಿಹೋಯಿದು ಬೆನ್ನಮೂಳೆಗೊ 

ಹುಗ್ಗುಲೆಡ್ತಿಲೆ ಕೆಲಸ ಮಾಡೆಕು 

ನುಗ್ಗಿ ಬಪ್ಪಾ ಸೆಖೆಯ ತಡವಲೆ ಕಷ್ಟಕಷ್ಟಪ್ಪ ||೩||


ಜಾಲಕರೆಯಾ ಹಲಸು ಬೆಳೆಯದೆ

ಬೇಳೆಚೆಕ್ಕೆಯೆ ಬಾಡಿ ಬೀಳುತು

ಹಾಳೆಗಾಕೀ ಮನೆಗೆ ತಂದಿಕಿ ಕೊದಿಲು ಮಾಡೆಕ್ಕು | 

ನಾಳೆ ಕಾಚಲು ಮುಂದುವರಿದರೆ

ಬಾಳೆತೋಟದೆ ಹಳದಿಯಕ್ಕದ

ಕಾಲಕೆಡುದರ ಮೊದಲು ದೇವರೆ ಕಣ್ಣು ಬಿಟ್ಟಿಕ್ಕು ||೪||


-ಪ್ರಮೀಳಾ ಚುಳ್ಳಿಕ್ಕಾನ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top