ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿಕೆಶಿ

Upayuktha
0

 ಜಲಾಶಯದ ಹೊಸ ಕ್ರಸ್ಟ್ ಗೇಟ್ ನಿರ್ಮಾಣ ಕಾಮಗಾರಿ ವೀಕ್ಷಣೆ 

 


ವಿಜಯನಗರ: ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಜಲಾಶಯದ ಹೊಸ ಕ್ರಸ್ಟ್ ಗೇಟ್ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.

ಸಂದರ್ಭದಲ್ಲಿ ಮಾತನಾಡಿದ ಡಿಕೆ. ಶಿವಕುಮಾರ್ ಎರಡೂವರೆ ಲಕ್ಷ ರೈತರ ಬದುಕಿನ ಜೀವನಾಡಿ ಇದಾಗಿದ್ದು ವಿರೋಧಿಗಳ ಟೀಕೆಗಳಿಗೆ ಉತ್ತರ ನೀಡಲಾಗಿದೆ ಎಂದರು. ಗೇಟ್ ಅಳವಡಿಕೆ ಯಾವ ಸ್ಟೇಜ್ ನಲ್ಲಿದೆ ಎಂದು ಪರಿಶೀಲಿಸಲು ಬಂದಿದ್ದು, ಇನ್ನೂ ಕೆಲಸ ನಡೆಯುತ್ತಿರುವುದರಿಂದ, ಮೇ. 15 ಕ್ಕೆ ಉದ್ಘಾಟನೆಗೆ ಸಾಧ್ಯಾವೇ ಎಂಬ ಆಲೋಚನೆ ಮಾಡಲಾಗುತ್ತಿದೆ. ಹತ್ತೂವರೆ ಟಿಎಂಸಿ ನೀರು ಇದೆ, 64: 34 ಅನುಪಾತದಲ್ಲಿ ಅನುದಾನವಿದೆ ಆಡಳಿತ ಮಂಡಳಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ ಎಂದು ತಿಳಿಸಿದರು

ಈಗಿನ ಗೇಟ್ ಅಳವಡಿಕೆಯು 50 ವರ್ಷದವರೆಗೆ ಏನು ಆಗುವುದಿಲ್ಲ ಎಂಭ ಭರವಸೆ ಇದೆ. ಮೇ 15 ರಂದು 3-4 ಜಿಲ್ಲೆಗಳ ರೈತರನ್ನು ಕರೆದು ದೊಡ್ಡ ಕಾರ್ಯಕ್ರಮ ಮಾಡುವ ಯೋಚನೆಯಿದೆ. ವಿಜಯನಗರ ಕಡತ ವಿಲೇವಾರಿ ಬಾಕಿ ವಿಚಾರ ಕುರಿತು ಮಾತನಾಡಿದ ಅವರು, ಅದೆನ್ನು ಅತಿ ಶೀಘ್ರದಲ್ಲಿ ವಿಲೇವಾರಿ ಮಾಡಲು ನಿರ್ದೇಶಿಸುತ್ತೇನೆ ಎಂದರು.

ಸಂದರ್ಭದಲ್ಲಿ ಸಚಿವರಾದ ಈಶ್ವರ ಖಂಡ್ರೆ, ಕೆ.ಹೆಚ್.ಮುನಿಯಪ್ಪ, ಶಿವರಾಜ ತಂಗಡಗಿ, ಎನ್.ಎಸ್.ಭೋಸರಾಜ್, ಸಂಸದರಾದ .ತುಕಾರಾಂ, ರಾಜಶೇಖರ ಹಿಟ್ನಾಳ್, ಶಾಸಕರಾದ ಹೆಚ್.ಆರ್.ಗವಿಯಪ್ಪ, ಡಾ.ಟಿ.ಶ್ರೀನಿವಾಸ, ಅನ್ನಪೂರ್ಣ ತುಕಾರಾಂ, ಮಾಜಿ ಸಚಿವ ಅಮರೇಗೋಡ ಬಯ್ಯಾಪುರ, ಡಿಸಿ ಕವಿತಾ ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ ಮೊದಲಾದವರು ಇದ್ದರು.

 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top