ಮಹದೇವಪುರ: ಪ್ರತಿಭಾ ಪುರಸ್ಕಾರ, ದಲಿತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ

Upayuktha
0


ಮಹದೇವಪುರ: ಅಂಬೇಡ್ಕರ್ ಜಯಂತಿ ಮತ್ತು ಬಾಬು ಜನಜೀವನ ರಾಮ್ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿರುವ ಮಹದೇವಪುರ ದಲಿತ ಸಂಘದಿಂದ ಎಡ ಬಲ ಮರೆತು ಒಂದಾದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.ಎಡ ಬಲ ರಹಿತವಲ್ಲ,ಎಡ ಬಲ ಸಹಿತ ನಾವು ಸಾಗಬೇಕಿದೆ ಎಂದು ಕವಿಗಳು, ವಿಮರ್ಶಕರಾದ ಡಾ. ಯಲ್ಲಪ್ಪ ತಿಳಿಸಿದರು. 


ಮಹದೇವಪುರ ದಲಿತ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ರವರ ಜಯಂತಿ ಪ್ರಯುಕ್ತ "ಪ್ರತಿಭಾ ಪುರಸ್ಕಾರ ಮತ್ತು ಮಹದೇವಪುರ ದಲಿತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.


ಎಡ ಬಲ ಮರೆತು ನಾವು ಒಂದಾದರೆ ಇಡೀ ರಾಜ್ಯದಲ್ಲಿ ಮುಖ್ಯಮಂತ್ರಿಯಲ್ಲ, ದೇಶದ ಪ್ರಧಾನಿಯು ಆಗಬಹುದು, ಶಾಲಾ ಕಾಲೇಜುಗಳಲ್ಲಿ ದಲಿತರು ಪಡುವ ನೋವು ನನಗೆ ಗೊತ್ತು, ನಮಗೆ ನಮ್ಮವರು ಒಂದು ಎನ್ನುವ ಭಾವನೆ ದಲಿತರಲ್ಲಿ ಮೂಡಬೇಕು, ಸಂವಿಧಾನವೆ ನಮ್ಮ ಧರ್ಮ, ಅಂಬೇಡ್ಕರ್ ಎನ್ನುವ ವ್ಯಕ್ತಿ ದಲಿತರು ಗುತ್ತಿಗೆ ತೆಗೆದುಕೊಂಡಿರುವ ಸಾಮಾಜಿಕ ಕಾರ್ಯಕರ್ತರಲ್ಲ, ಎಲ್ಲಾ ವರ್ಗದ, ಸಮುದಾಯದ ಸಂವಿಧಾನದಲ್ಲಿ ಹಕ್ಕುಗಳನ್ನು ಕೊಟ್ಟಿದ್ದಾರೆ. ಸಮ ಸಮಾಜವೆಂದರೆ ಎಲ್ಲಾ ರಂಗಗಳಲ್ಲೂ ಎಲ್ಲಾ ರೀತಿಯಲ್ಲೂ ಕಟ್ಟಿರುವವರು ದಲಿತರು,ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಇತಿಹಾಸ, ವಿದ್ಯಾರ್ಥಿಗಳಿಗೆ ದಿನಕ್ಕೆ ಅಂಬೇಡ್ಕರ್ ಅವರ ಜೀವನದ ಒಂದು ಪುಟ ಓದಿ, ಬದುಕಿನ ಹೋರಾಟ ತಿಳಿದಿದ್ದರೆ ಏನು ಬೇಕಾದರೂ ಮಾಡಬಹುದು, ಬುದ್ಧ, ಬಸವ, ಅಂಬೇಡ್ಕರ್, ಬಾಬು ಜಗಜೀವನ ರಾಮ್ ಅವರನ್ನು ನಾವು ಅಳವಡಿಸಿಕೊಳ್ಳಬೇಕುನಾವೆಲ್ಲ ಎಂದರು.



ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ ನಾವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಯಾಗಲು ಕಾರಣರಾದ ವಿಧ್ಯಾರ್ಥಿಗಳು, ಪೋಷಕರು ಸಮುದಾಯದ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಕಾರ್ಯಕ್ರಮದ ಉದ್ದೇಶ ವಿಧ್ಯಾಭ್ಯಾಸ ಎಷ್ಟು ಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು, ಬುದ್ದ ಮತ್ತು ಅಂಬೇಡ್ಕರ್ ವಿಚಾರಗಳನ್ನು ಒಳಗೊಂಡ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದಬೇಕು, ವಿಚಾರವಂತರಾಗಬೇಕು ಹಾಗೂ ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ಮಹದೇವಪುರ ಕ್ಷೇತ್ರದ ದಲಿತ ಮುಖಂಡರನ್ನು ಗುರುತಿಸಿ ದಲಿತ ರತ್ನ ಪ್ರಶಸ್ತಿ ಪ್ರದಾನ ಮಾಡಿ ನಾವೆಲ್ಲ ಒಂದೆ ಎನ್ನುವ ಸಂದೇಶ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು ಎಂದರು. 


ನಂತರ ಮಾತನಾಡಿದ ಪ್ರಧಾನ ಕಾರ್ಯದರ್ಶಿ ವಿಕ್ರಮ್ ನಾವು ಒಂದೇ ದಿನ ಬುದ್ಧ ಪೂರ್ಣಿಮೆ, ಅಂಬೇಡ್ಕರ್ ಜಯಂತಿ, ಬಾಬು ಜಗಜೀವನ್ ರಾಮ್ ಜಯಂತಿ, ಕಾರ್ಮಿಕರ ಜಯಂತಿಯನ್ನು ವಿಜೃಂಭಣೆಯಿಂದ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಕ್ಕಳಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿಧ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಿದ್ದೆವು. ಅದೇ ರೀತಿ ಸುಮಾರು ದಶಕಗಳ ಕಾಲ ಮಹದೇವಪುರ ಕ್ಷೇತ್ರದಲ್ಲಿ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಗಣ್ಯರನ್ನು ಗುರುತಿಸಿ ಐವತ್ತು ಜನರಿಗೆ ಮಹದೇವಪುರ ದಲಿತ ರತ್ನ ಪ್ರಶಸ್ತಿ ಪ್ರಧಾನವನ್ನು ಪ್ರಥಮ ಭಾರಿಗೆ ನೀಡಿದೆವು. ನಮ್ಮಲ್ಲಿ ಎಡ ಬಲ ಎಂದು ಒಡಕಾಗಬಾರದೆಂದು ಈ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಆ ರೀತಿಯ ಸಂಘರ್ಷಕ್ಕೆ ನಾವು ಬಿಡುವುದಿಲ್ಲ ಎಂದರು. 


ಈ ಸಂದರ್ಭದಲ್ಲಿ ಯುವ ಕವಿಗಳು, ಡಾ.ಸುಧಾಕರ್, ಜೆ. ಸಿ.ಪ್ರಕಾಶ್‌, ಆರಕ್ಷಕ ನಿರೀಕ್ಷಕರು ಪ್ರವೀಣ್ ಬಾಬು, ಚಿಕ್ಕಮುನಿಯಪ್ಪ, ಗುಂಜೂರು ಮುನಿಸ್ವಾಮಣ್ಣ, ಪದಾಧಿಕಾರಿಗಳಾದ, ಮಾದೇಶ್, ಗಣೇಶ್, ಸುರೇಶ್, ಮುನಿರಾಜ್, ಸಂಜಯ್, ಗುಂಜೂರು ವಿಜಿ ಮುಂತಾದವರಿದ್ದರು.


Post a Comment

0 Comments
Post a Comment (0)
To Top