ಬೀದರ್, ಕಲಬುರಗಿ - ಬೆಂಗಳೂರು ನಡುವೆ ವಿಮಾನ ಸೇವೆಗೆ ಹಸಿರು ನಿಶಾನೆ ಸ್ವಾಗತಾರ್ಹ

Upayuktha
0

  


ಕಲಬುರಗಿ: ಬೆಂಗಳೂರಿನಿಂದ ಬೀದರ್ ಮತ್ತು ಕಲಬುರಗಿಗೆ ವಿಮಾನ ಸೇವೆ ಅಬಾಧಿತವಾಗಿ  ಮುಂದುವರಿಸಲು ರಾಜ್ಯ ಸರ್ಕಾರ ಒಟ್ಟು ಯೋಜನಾ ವೆಚ್ಚ 28.47 ಕೋಟಿ ರೂ. ಸಬ್ಸಿಡಿ ನೀಡಲು  ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಹೇಳಿದ್ದಾರೆ.


ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ . 30 ರಂದು ಮೂಲ ಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಒಟ್ಟು ಯೋಜನಾ ವೆಚ್ಚದಡಿ ವಿಮಾನಸೇವೆ ಪುನರಾರಂಭಿಸಲು (ವಿಜಿಎಫ್) 28.47 ಕೋಟಿ. ರೂ. ಸಬ್ಸಿಡಿ ಘೋಷಿಸಿದೆ. ಬೀದರ್ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಸೇವೆ ಒದಗಿಸಲು ಅನುದಾನವನ್ನು 80:20 ಅನುಪಾತದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಡಿ ಅನುಮೋದನೆ ನೀಡಿದೆ.


ಬೆಂಗಳೂರು- ಬೀದರ್- ಬೆಂಗಳೂರು, ಹಾಗೂ ಬೆಂಗಳೂರು- ಕಲಬುರಗಿ -ಬೆಂಗಳೂರು ಮಾರ್ಗಗಳಲ್ಲಿ ವಿಮಾನಯಾನ ಕಾರ್ಯಾಚರಣೆ ಕಾಯ್ದೆ 1999 ಕಲಂ 4 (ಜಿ ) ಅಡಿಯಲ್ಲಿ ವಿನಾಯಿತಿ ಪಡೆದ ನಂತರ ಕೆ ಎಸ್ ಡಿ ಸಿ ನಿಗಮವು ಗೋದಾವತ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ (ಸ್ಟಾರ್ ಏರ್ ಲೈನ್ಸ್) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಂಪುಟ ಸಭೆಯಲ್ಲಿ ಅನುದಾನ ನೀಡಿ ವಿಮಾನ ಸೇವೆ ಆರಂಭಕ್ಕೆ ಒಪ್ಪಿಗೆ ಸೂಚಿಸಿದೆ


ಬೆಂಗಳೂರಿನಿಂದ ಬೀದರ್ ಕಲಬುರಗಿಗೆ ಕನಿಷ್ಠ 12 ತಾಸುಗಳು ಪ್ರಯಾಣ ಅವಧಿ ಇದ್ದು ವಿಮಾನಸೇವೆ ಆರಂಭದೊಂದಿಗೆ ಸಮಯದ ಉಳಿತಾಯದ ಜೊತೆಗೆ ಪ್ರವಾಸಿಗರು ಉದ್ಯಮಿಗಳು ವಿದ್ಯಾರ್ಥಿಗಳು ಸರಕಾರಿ ಅಧಿಕಾರಿಗಳಿಗೆ ಸುಲಭ ಸಂಚಾರ ವಾತಾವರಣ ನಿರ್ಮಾಣಗೊಳ್ಳುತ್ತದೆ. ಇದರಿಂದ ಭಾಗದ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆರ್ಥಿಕ ಒಳಗೊಳ್ಳುವಿಕೆ ಮತ್ತು ರಾಜಧಾನಿ ಹಾಗೂ ಅಂತರ್ಜಿಲ್ಲಾ ಸಂಪರ್ಕ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಡಾ.ಪೆರ್ಲ ಅಭಿಪ್ರಾಯಪಟ್ಟಿದ್ದಾರೆ.


ಮಂಗಳೂರು, ಮುಂಬೈಗೆ ಹೆಚ್ಚಿದ ಒತ್ತಡ

ಕಲಬುರಗಿಯಿಂದ ಮಂಗಳೂರು, ಮುಂಬೈ, ದೆಹಲಿ, ತಿರುಪತಿ ಮುಂತಾದಡೆಗಳಿಗೆ ವಿಮಾನ ಸಂಚಾರ ಪ್ರಾರಂಭಿಸುವಂತೆ ಪ್ರಯಾಣಿಕರು ತೀವ್ರ ಒತ್ತಡ ಹೇರುತ್ತಿದ್ದಾರೆ. ಮಾರ್ಗಗಳಲ್ಲಿ ವಿಮಾನ ಸಂಚಾರ ಆರಂಭಗೊಂಡರೆ ಅಂತರಾಜ್ಯ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಹಾಗೂ ಅಭಿವೃದ್ಧಿ ಹೊಂದಲು ಉತ್ತಮ ಅವಕಾಶಗಳಿವೆ ಎಂದು ಡಾ. ತಿಳಿಸಿದ್ದಾರೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top