ಎಸ್‌ ಸಿ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆಯ ಕುರಿತು ಜಾಗೃತಿ ಕಾರ್ಯಕ್ರಮ

Upayuktha
0




ಮಂಗಳೂರು: ಎಸ್‌.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ದೂರು ಸಮಿತಿಯಿಂದ "ಲೈಂಗಿಕ ಕಿರುಕುಳ ತಡೆ, ಜಾಗೃತಿ ಹಾಗೂ ಕ್ರಮ" ಎಂಬ ವಿಷಯದಡಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗಾಗಿ ಮೇ 2 ರಂದು ಸಮಗ್ರ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ  ಉಪನ್ಯಾಸ ಕೊಠಡಿ 8 ರಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಸುರಕ್ಷಿತೆ ಮತ್ತು ಲೈಂಗಿಕ ಕಿರುಕುಳ ವಿರೋಧಿ ಕಾಯ್ದೆಗಳ ಬಗ್ಗೆ ಅರಿವು ಮೂಡಿಸುವುದಾಗಿತ್ತು.


ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಸಂಸ್ಥೆಯ ಕಾನೂನು ಸಲಹೆಗಾರರು ಹಾಗೂ ವಕೀಲರಾದ ಕುಮಾರಿ ಶ್ರೀದೇವಿ ಆರ್. ಅಮೀನ್ ಅವರು ಭಾಗವಹಿಸಿ, ಲೈಂಗಿಕ ಕಿರುಕುಳ ತಡೆ ಕಾಯ್ದೆಯ ಮಹತ್ವ ಅದರ ಅವಶ್ಯಕತೆ ಹಾಗೂ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು. ತಮ್ಮ ಉಪನ್ಯಾಸದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಪಡುವ ವಿವಿಧ ವರ್ತನೆಗಳು, ಅದರ ಹಿನ್ನಲೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅದರ ಆನ್ವಯವನ್ನು ಸ್ಪಷ್ಟವಾಗಿ ವಿವರಿಸಿದರು. ಜೊತೆಗೆ, ಆಂತರಿಕ ದೂರು ಸಮಿತಿಯ ರಚನೆ ಹಾಗೂ ಕಾರ್ಯವಿಧಾನ, ಕಾಯ್ದೆಯ ಅನುಷ್ಠಾನ, ಕಾನೂನಿನ ಮಹತ್ವ ಹಾಗೂ ಅಧಿಕೃತ ದೂರು ಸಲ್ಲಿಸುವ ಕ್ರಮವನ್ನು ಹಂತ ಹಂತವಾಗಿ ವಿವರಿಸಿದರು.



ಈ ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹಾರ್ದಿಕ್ ಪಿ. ಚೌಹಾನ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಸಂಯೋಜಕಿ ವಾಣಿಜ್ಯ ವಿಭಾಗದ  ಮುಖ್ಯಸ್ಥರಾದ ಗಾಯತ್ರಿ ಎಸ್  ಮತ್ತು ಫ್ಯಾಶನ್ ಡಿಸೈನಿಂಗ್ ವಿಭಾಗದ ಮುಖ್ಯಸ್ಥರಾದ ಅಶ್ವಿನಿ  ಎಸ್ ಅವರ  ಮಾರ್ಗದರ್ಶನದಲ್ಲಿ ಆಯೋಜಿಸಲಾಯಿತು.


ಫುಡ್ ಅಂಡ್ ನ್ಯೂಟ್ರಿಷನ್  ವಿಭಾಗದ ಮುಖ್ಯಸ್ಥರಾದ ರೂಪಾ ರಾವ್ ಅವರು ಸ್ವಾಗತ ಭಾಷಣ ಹಾಗೂ ಅತಿಥಿ ಪರಿಚಯ ಮಾಡಿದರು. ಪ್ರಥಮ ಬಿ.ಬಿ.ಎ ವಿದ್ಯಾರ್ಥಿನಿ ಶಾಮಾ ಅವರು ಕಾರ್ಯಕ್ರಮವನ್ನು ಸುಸೂತ್ರವಾಗಿ ನಿರ್ವಹಿಸಿದರು.


ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದವರಿಗೆ ತಮ್ಮ ಹಕ್ಕುಗಳು, ಜವಾಬ್ದಾರಿಗಳು ಹಾಗೂ ಸುರಕ್ಷಿತ ಮತ್ತು ಗೌರವಯುತ ವಾತಾವರಣವನ್ನು ಕಾಪಾಡಲು ಲಭ್ಯವಿರುವ ಸಂಸ್ಥಾತ್ಮಕ ವ್ಯವಸ್ಥೆಗಳ ಕುರಿತು ಸ್ಪಷ್ಟ ಅರಿವು ದೊರಕಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top