ಪುತ್ತೂರು: ಹಗಲಿರುಳೆನ್ನದೆ ಭೂಮಿಯ ಮೇಲೆ ಮಾನವನ ದಬ್ಬಾಳಿಕೆ ಅವಿರತವಾಗಿ ನಡೆಯುತ್ತಲೇ ಇದೆ. ತನ್ನ ದುರಾಸೆ ತ್ಯಜಿಸಿ ತಾನು ಬದುಕುವ ನೆಲ ಜಲಕ್ಕೆ ಒಂದಿಷ್ಟು ಗೌರವವನ್ನು ನೀಡಿದರೆ ಮಾತ್ರ ಮುಂದಿನ ಜನಾಂಗಕ್ಕೂ ಇಲ್ಲಿ ಬದುಕಲು ಎಡೆಯಾಗಬಹುದು ಎಂದು ಬೆಂಗಳೂರಿನ ಎಐಡಾಷ್ ಸಂಸ್ಥೆಯ ತಂತ್ರಜ್ಞ ಸೂರಜ್ ರಾಜ್ ಎಸ್ ಹೇಳಿದರು.
ಅವರು
ಇಲ್ಲಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್
ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ನಡೆದ ವಿಶ್ವ ಭೂಮಿ
ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು.
ಕೈಗಾರಿಕೀಕರಣ,
ಅಡವಿಗಳ ನಾಶ, ಕಾಂಕ್ರೀಟು ಕಾಡುಗಳ
ನಿರ್ಮಾಣದಿಂದ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ, ಜಾಗತಿಕ ತಾಪವಾನವು ಹೆಚ್ಚುತ್ತಿದೆ, ನೀರಿನ ಮೂಲಗಳು ಬತ್ತಿಹೋಗುತ್ತಿವೆ. ಹವಾಮಾನ ವೈಪರೀತ್ಯಗಳು ಉಂಟಾಗುತ್ತಿವೆ. ವಿಷಪೂರಿತ ತ್ಯಾಜ್ಯಗಳು ಪರಿಸರವನ್ನು ಸೇರುತ್ತಿದೆ. ಇದು ಹೀಗೆಯೇ ಮುಂದುವರಿದರೆ
ಮುಂದೊಂದು ದಿನ ಈ ಭೂಮಿಯಲ್ಲಿ
ವಾಸಿಸುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಉಂಟಾಗಬಹುದು ಎಂದರು. ನವೀಕರಿಸಬಹುದಾದ ಇಂದನಗಳ ಬಳಕೆಯ ಅಗತ್ಯತೆಯನ್ನು ವಿವರಿಸಿದ ಇವರು ಯುವಜನತೆ ಪರಿಸರ
ಸಂರಕ್ಷಣೆಯ ಮಹತ್ವವನ್ನು ಅರಿತುಕೊಂಡು ನೆಲ ಜಲದ ಸಂರಕ್ಷಣೆಯಲ್ಲಿ
ತೊಡಗಿಕೊಳ್ಳಬೇಕು ಎಂದರು.
ಸಿವಿಲ್
ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ ವೇದಿಕೆಯಲ್ಲಿ
ಉಪಸ್ಥಿತರಿದ್ದರು. ವಿಶ್ವ ಭೂಮಿ ದಿನದ ಅಂಗವಾಗಿ
ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ
ವಿತರಿಸಲಾಯಿತು. ಕಾರ್ಯಕ್ರಮ ಸಂಯೋಜಕ ಡಾ.ರಾಜೇಶ್ ಆರ್
ಸ್ವಾಗತಿಸಿ, ಶ್ಯಾಮ್ ಕುಮಾರ್ ವಂದಿಸಿದರು. ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpeg)
.jpeg)
