ದಾವಣಗೆರೆ:
ಉಡುಪಿ ಜಿಲ್ಲೆಯ ಮಣಿಪಾಲದ ಯಕ್ಷರಂಗ ಕಲಾ ಸಂಸ್ಥೆಯಾದ ಶ್ರೀ
ಮಿತ್ರ ಯಕ್ಷಗಾನ ಮಂಡಳಿ ವತಿಯಿಂದ ಸಂಸ್ಥೆಯ 44ನೇ ವಾರ್ಷಿಕೋತ್ಸವದ ಪ್ರಯುಕ್ತ
ಉಡುಪಿಯ ಶ್ರೀ ಕೃಷ್ಣಮಠದ ಸಭಾಂಗಣದಲ್ಲಿ
ಮಠದ ಪರ್ಯಾಯ ಶಿರೂರು ಶ್ರೀಪಾದಗಳ ಸಾನಿಧ್ಯದಲ್ಲಿ ದಾವಣಗೆರೆಯ ಯಕ್ಷರಂಗ ಯಕ್ಷಗಾನ ಸಂಸ್ಥೆಯ
ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಯವರಿಗೆ “ಯಕ್ಷಮಿತ್ರ
ಶ್ರೀ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ
ಹೆಚ್.ಪ್ರಕಾಶ್ ಶಾನುಭಾಗ್ ತಿಳಿಸಿದ್ದಾರೆ.
ಸಾಲಿಗ್ರಾಮ
ಗಣೇಶ್ ಶೆಣೈ ವಾಣಿಜ್ಯ ನಗರಿ
ದಾವಣಗೆರೆಯಲ್ಲಿ ಕಳೆದ 4 ದಶಕಗಳಿಂದ ಕರಾವಳಿ ಜಿಲ್ಲೆಗಳ ಜಾನಪದ ಕಲೆಯನ್ನು ಪರಿಚಯಿಸಿರುತ್ತಾರೆ. ಅಲ್ಲದೇ ಗಂಡುಕಲೆ ಯಕ್ಷಗಾನವನ್ನು ಮಹಿಳೆಯರಿಗೆ ತರಬೇತಿ ನೀಡಿ ಮಹಿಳೆಯರಿಂದ ಯಕ್ಷಗಾನ,
ತಾಳಮದ್ದಳೆಗಳ ಪ್ರದರ್ಶನ ನೀಡಿರುತ್ತಾರೆ.
ಈ ಸಾಧನೆಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದು ಮಣಿಪಾಲದ ಸರಳೇಬೆಟ್ಟು
ಶ್ರೀ ಮಿತ್ರ ಯಕ್ಷಗಾನ ಮಂಡಳಿಯವರು ಪ್ರಕಟಿಸಿದ್ದಾರೆ.
ದಾವಣಗೆರೆಯ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ ಕುಮಾರ್ ಶೆಟ್ಟಿ, ಖಜಾಂಚಿ ನೀಲಾವರ್ ಭಾಸ್ಕರ್ ನಾಯಕ್ ಸಮಿತಿ ಸದಸ್ಯರು, ಕರಾವಳಿ ಮಿತ್ರ ಮಂಡಳಿಯ ಸರ್ವ ಸದಸ್ಯರು, ಪದಾಧಿಕಾರಿಗಳು
ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


