ಮಂಗಳೂರು: ತುಳು ರಂಗಭೂಮಿ ಮತ್ತು ಕೊಂಕಣಿ ರಂಗ ಭೂಮಿ ಕಾರ್ಯಗಳು ಸಾಹಿತ್ಯ ಕ್ಷೇತ್ರದ ಕಡೆಗೆ ಆಕರ್ಷಿಸುವಂತೆ ಮಾಡಿದವು. ತುಳು, ಕೊಂಕಣಿ ಮತ್ತು ಕನ್ನಡ ಸಾಹಿತ್ಯಗಳು ತನ್ನ ಬದುಕಿನ ಕಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹಿರಿಯ ತುಳು, ಕೊಂಕಣಿ ಹಾಗೂ ಕನ್ನಡ ಸಾಹಿತಿ ಮತ್ತು ರಂಗ ನಿರ್ದೇಶಕ ಯಶವಂತ ಡಿ.ಎಸ್ ಶಕ್ತಿನಗರ ನುಡಿದರು.
ಅವರು ಕಲ್ಲಚ್ಚು ಪ್ರಕಾಶನ ವತಿಯಿಂದ ವಿಶ್ವ ಪುಸ್ತಕ ದಿನಾಚರಣೆಯ ಸಂದರ್ಭದಲ್ಲಿ ಸ್ವಗೃಹದಲ್ಲಿ ನೀಡಿದ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಸಾಹಿತ್ಯ ರಚನೆ ಮತ್ತು ಓದು ಬಾಳಿಗೆ ನೆಮ್ಮದಿಯನ್ನು ಕೊಡುತ್ತದೆ. ಯುವ ಪೀಳಿಗೆ ಸಾಹಿತ್ಯದತ್ತ ಆಸಕ್ತಿ ಹೊಂದುವಂತೆ ಮಾಡಬೇಕಾಗಿದೆ ಎಂದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿಯವರು ಅಭಿನಂದಿಸಿ ಯಶವಂತರು ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ ಎಂದರು.
ಸಾಹಿತಿ ರಘು ಇಡ್ಕಿದು ಮಾತನಾಡಿ ಯಶವಂತರ ತುಳು ಮತ್ತು ಕೊಂಕಣಿ ನಾಟಕಗಳು ಜನಪ್ರಿಯ ವಾಗಿದ್ದು ಕೃತಿಗಳಾಗಿ ಪ್ರಕಟಗೊಳ್ಳಬೇಕು ಎಂದರು.
ಪ್ರಕಾಶಕ ಕಲ್ಲಚ್ಚು ಮಹೇಶ್ ನಾಯಕ್ ಮಾತನಾಡಿ ಪುಸ್ತಕ ಸಂಸ್ಕೃತಿ ನಮ್ಮ ಬದುಕಿನ ಅಂಗವಾಗಬೇಕಾಗಿದ್ದು ಯಶವಂತ್ ಸಾಹಿತ್ಯ ಮತ್ತು ಸಂಘಟನೆಗಳಲ್ಲಿ ತೊಡಗಿಸಿಕೊಂಡವರು ಎಂದರು. ಡೇಜಿ ಡಿ ಸೋಜ ವಂದಿಸಿದರು. ಮೆಲೊರಾ ಪಿಂಟೊ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


