ಮಹಿಳಾ ತಂಡ ಸತತ 25 ವರ್ಷಗಳಿಂದ ಹಾಗೂ ಪುರುಷರ ತಂಡ ಸತತ 7 ವರ್ಷಗಳಿಂದ ಸಮಗ್ರ ತಂಡ ಪ್ರಶಸ್ತಿ
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ದೈಹಿಕ
ಶಿಕ್ಷಣ ಮಹಾವಿದ್ಯಾಯದ ಆಶ್ರಯದಲ್ಲಿ ಆಳ್ವಾಸ್ ಸಂಸ್ಥೆಯ ಕೃಷಿಸಿರಿ ಆವರಣದಲ್ಲಿ ಜರುಗಿದ ಮಂಗಳೂರು ವಿವಿ ಅಂತರ್ ಕಾಲೇಜು
ವೇಯ್ಟ್ ಲಿಫ್ಟಿಂಗ್ ಸ್ಪರ್ಧಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಮಹಿಳಾ ಮತ್ತು ಪುರುಷರ ಎರಡು ವಿಭಾಗದಲ್ಲಿ ತಂಡ
ಪ್ರಶಸ್ತಿಯನ್ನು ಪಡೆದುಕೊಂಡರು.
ಮಹಿಳಾ ತಂಡವು ಒಟ್ಟು 3 ಚಿನ್ನ, 3 ಬೆಳ್ಳಿ, 2 ಕಂಚು ಪದಕ ಪಡೆದು
ಒಟ್ಟು 41 ಅಂಕ ಪಡೆದು ಈ
ಸಾಧನೆ ಮೆರೆದರೆ, ಪುರುಷರ ವಿಭಾಗವು 4 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕ ಗಳಿಸಿ ಒಟ್ಟು
47 ಅಂಕಗಳೊAದಿಗೆ ಸಮಗ್ರ ತಂಡ
ಪ್ರಶಸ್ತಿಯನ್ನು ಪಡೆಯಿತು. ಈ ಸಾಧನೆಯೊಂದಿಗೆ ಆಳ್ವಾಸ್ನ ಮಹಿಳಾ ತಂಡ ಸತತ 25 ವರ್ಷಗಳಿಂದ
ಹಾಗೂ ಪುರುಷರ ತಂಡ ಸತತ 7 ವರ್ಷಗಳಿಂದ
ಸಮಗ್ರ ತಂಡ ಪ್ರಶಸ್ತಿಯನ್ನು ಕ್ರಮವಾಗಿ
ಪ್ರೋ. ರಿಚರ್ಡ ರೆಬೆಲ್ಲೋ ರೋಲಿಂಗ್ ಟ್ರೋಫಿ ಮತ್ತು ಶಿರ್ವ ಬ್ಲೋಸಂ ಮಾನ್ಶನ್ ಸೆಲೆಸ್ಟಿಯನ್ ಡಿಸೋಜಾ ಟ್ರೋಫಿಯೊಂದಿಗೆ ಪಡೆದುಕೊಂಡಿತು.
110ಕೆಜಿ
ದೇಹ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ
ಆಳ್ವಾಸ್ ಕಾಲೇಜಿನ ತೇಜಸ್ ‘’ಬೆಸ್ಟ್ ಲಿಫ್ಟರ್’ ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು.
ವಿಜೇತ
ವಿದ್ಯಾರ್ಥಿಗಳನ್ನು
ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ
ಆಳ್ವ ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

