ಯುವಜನತೆಯಿಂದ ರಾಷ್ಟ್ರದ ಉನ್ನತಿ ಸಾಧ್ಯ - ಪ್ರೊ. ದಾಮೋದರ ಕಣಜಾಲು
ಪುತ್ತೂರು:
ವಿವೇಕಾನಂದರ ತತ್ವಗಳಿಂದ ಜಾಗತಿಕ ಮಟ್ಟದಲ್ಲಿ ಭಾರತವನ್ನು ಗುರುತಿಸಲು ಸಾಧ್ಯವಾಗಿದೆ. ಭವ್ಯ ಭಾರತದಲ್ಲಿ ಸಂಸ್ಕಾರಯುತವಾದ
ಜೀವನವನ್ನು ನಡೆಸುವ ಜವಾಬ್ದಾರಿ ಇಂದಿನ ಯುವಜನಾಂಗಕ್ಕಿದೆ. ರಾಷ್ಟ್ರದ
ಉನ್ನತಿಗಾಗಿ ಯುವಜನತೆ ಶ್ರಮಿಸಬೇಕು ಎಂದು ಸರ್ಕಾರಿ ಪ್ರಥಮ
ದರ್ಜೆ ಕಾಲೇಜು, ಬೆಟ್ಟಂಪಾಡಿಯ ಪ್ರಾಚಾರ್ಯ ಪ್ರೊ. ದಾಮೋದರ ಕಣಜಾಲು ಹೇಳಿದರು.
ಇವರು
ವಿವೇಕಾನಂದ ಕಲಾ, ವಿಜ್ಞಾನ ಮತ್ತು
ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ ) ಪುತ್ತೂರು ಹಾಗೂ ವಿವೇಕಾನಂದ ವಿದ್ಯಾವರ್ಧಕ
ಸಂಘದ ಸಹಯೋಗದೊಂದಿಗೆ ನಡೆದ ವಿದ್ಯಾರ್ಥಿ ಸಂಘದ
ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಜೀವನದಲ್ಲಿ
ದುಡ್ಡು ಗಳಿಸುವುದಕ್ಕಿಂತಲೂ ಹೆಚ್ಚಾಗಿ ಮನಸ್ಸು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸನ್ನಡತೆ ಮತ್ತು ಸಜ್ಜನತೆಯನ್ನು ಅಳವಡಿಸಿಕೊಳ್ಳಬೇಕು. ಸಮಸ್ಯೆ ಬಂದಾಗ ಅದನ್ನು ಸವಾಲಾಗಿ ಸ್ವೀಕರಿಸುವ ಮನಸ್ಥಿತಿ ಇಂದಿನ ಯುವಜನಾಂಗಕ್ಕಿಲ್ಲ. ಸಣ್ಣ ಸಣ್ಣ ವಿಚಾರಗಳಿಗೂ
ಬೆನ್ನುಹಾಕಿ ಹೋಗುವ ಸನ್ನಿವೇಶಗಳು ಕಾಣುತ್ತಿವೆ. ಪ್ರತಿಯೊಬ್ಬರಿಗೂ ದೃಢವಾದ ಮನಸ್ಸು ಮಾಡಿ ಸಮಸ್ಯೆಯನ್ನು ಎದುರಿಸುವ
ಶಕ್ತಿ ಬರಬೇಕು ಎಂದರು.
ಕಾರ್ಯಕ್ರಮದ
ಅಧ್ಯಕ್ಷತೆಯನ್ನು ವಹಿಸಿದ್ದ, ಕಾಲೇಜಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.
ಕೆ. ಎಂ. ಕೃಷ್ಣ ಭಟ್
ಮಾತನಾಡುತ್ತಾ, ಪ್ರಕೃತಿಯ ಬಗ್ಗೆ ಪ್ರೀತಿ ಬೆಳೆಸಬೇಕು. ಯಾವುದಾದರೂ ಒಂದು ಸಮಸ್ಯೆ ಬಂದಾಗ
ಅದನ್ನು ಬೆಳೆಯಲು ಬಿಡದೆ ಪರಿಹಾರವನ್ನು
ಕಂಡುಕೊಳ್ಳಬೇಕು. ನಮ್ಮ ಉದ್ಧಾರ ನಮ್ಮಿಂದಲೇ
ಆಗಬೇಕು. ಸಮಸ್ಯೆಗಳು ಏನೇ ಇದ್ದರೂ ಅದರ
ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ಯುವಜನತೆಯಿಂದಾಗಬೇಕು ಎಂದು ನುಡಿದರು.
ವೇದಿಕೆಯಲ್ಲಿ
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ,
ಪ್ರಾಚಾರ್ಯ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್, ಸದಸ್ಯರಾದ ಎಂ.
ಶ್ರೀನಿವಾಸ ಸಾಮಂತ್ (ಕೋಶಾಧಿಕಾರಿ), ಅನಂತಕೃಷ್ಣನಾಯಕ್, ಸುಕುಮಾರ ರಾವ್ ಎನ್. ಎಸ್,
ಜಗನ್ನಾಥ ಎ, ಯರ್ಮುಂಜ ಶಂಕರ
ಜೋಯಿಸ ಮತ್ತು ಶಿವಕುಮಾರ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷೆ
ಸುಮನಾ, ಕಾರ್ಯದರ್ಶಿ ಅಶ್ವಿನ್ ಕುಮಾರ್, ಜೊತೆಕಾರ್ಯದರ್ಶಿ ಗಣೇಶ್ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ
ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್ ಕಾರ್ಯಕ್ರಮಕ್ಕೆ
ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಂದ ರೂಪಿಸಲ್ಪಟ್ಟ ವಿನೂತನ ಪ್ರಾಯೋಗಿಕ ಪತ್ರಿಕೆಯನ್ನು ಕಾರ‍್ಯಕ್ರಮದ ಮುಖ್ಯ ಅತಿಥಿ ಪ್ರೊ.ದಾಮೋದರ ಕಣಜಾಲು
ಬಿಡುಗಡೆಗೊಳಿಸಿದರು.
ಕಾರ‍್ಯಕ್ರಮದಲ್ಲಿ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಲಾಯಿತು
ಹಾಗೂ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ
ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮವನ್ನು
ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭನೀಶ್
ಕುಮಾರ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಹಂಪನ
ಹೆಚ್. ಪಿ ವಂದಿಸಿದರು. ದ್ವಿತೀಯ
ಎಂಕಾಂ ವಿದ್ಯಾರ್ಥಿನಿ ಅನನ್ಯಾ ಎಸ್ ನಿರೂಪಿಸಿದರು.
ಸಭಾ
ಕಾರ‍್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ
ಸಾಂಸ್ಕೃತಿಕ ಕರ‍್ಯಕ್ರಮ ಹಾಗೂ ಯಕ್ಷರಂಜಿನಿಯ
ವಿದ್ಯಾರ್ಥಿಗಳಿಂದ ಸಹಸ್ರಾರ-ಸಹಸ್ರಾಕ್ಷಿ ಎನ್ನುವ ಯಕ್ಷಗಾನ ಪ್ರಸಂಗ ನಡೆಯಿತು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



