ಗೋಮಾತಾ ಗೌರವ ಅಭಿಯಾನಕ್ಕೆ ತಾಲೂಕು ಪ್ರಮುಖರ ಆಯ್ಕೆ

Upayuktha
0


ಉಡುಪಿ: ಗೋಮಾತೆಯ ಗೌರವವನ್ನು ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 27ರಂದು ದೇಶಾದ್ಯಂತ ಸಾಧು-ಸಂತರ ನೇತೃತ್ವದಲ್ಲಿ ನಡೆಯಲಿರುವ “ಗೋಮಾತಾ ಗೌರವ ಅಭಿಯಾನ”ಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ತಾಲೂಕು ಪ್ರಮುಖರನ್ನು ಆಯ್ಕೆ ಮಾಡಲಾಗಿದೆ.


ಗೋಮಾತೆಯನ್ನು ರಾಷ್ಟ್ರಮಾತೆಯಾಗಿ ಘೋಷಿಸಬೇಕು ಎಂಬ ಅಭಿಯಾನದ ಅಂಗವಾಗಿ, ಉಡುಪಿ ಜಿಲ್ಲೆಯ ಶ್ರೀ ಕ್ಷೇತ್ರ ಶಂಕರಪುರ ಏಕಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜಿಲ್ಲೆಯ ಏಳು ತಾಲೂಕುಗಳಿಗೆ ಪ್ರಮುಖರನ್ನು ನೇಮಕ ಮಾಡಲಾಗಿದೆ.


ಉಡುಪಿ ತಾಲೂಕಿಗೆ ವಿಜಯಕುಮಾರ್ ಕೊಡವೂರು, ಕಾಪು ತಾಲೂಕಿಗೆ ಗೀತಾಂಜಲಿ ಸುವರ್ಣ, ಕಾರ್ಕಳ ತಾಲೂಕಿಗೆ ರಮಿತಾ ಸೂರ್ಯವಂಶಿ, ಬೈಂದೂರು ತಾಲೂಕಿನಿಗೆ ನಾಗರಾಜ್ ಪೂಜಾರಿ, ಬ್ರಹ್ಮಾವರ ತಾಲೂಕಿಗೆ ರಾಘವೇಂದ್ರ ಪ್ರಭು ಕರ್ವಾಲು, ಕುಂದಾಪುರ ತಾಲೂಕಿಗೆ ಗಜೇಂದ್ರ ಬೇಲೆಮನೆ ಹಾಗೂ ಹೆಬ್ರಿ ತಾಲೂಕಿಗೆ ಸಂದೇಶ್ ಕುಮಾರ್ ಟಿ.ವಿ ಅವರನ್ನು ತಾಲೂಕು ಪ್ರಮುಖರಾಗಿ ಹಾಗೂ ಪ್ರಚಾರಕರಾಗಿ ನೇಮಕ ಮಾಡಲಾಗಿದೆ.


ಈ ಎಲ್ಲಾ ಪ್ರಮುಖರು ಅಭಿಯಾನದ ಯಶಸ್ಸಿಗಾಗಿ ತಮ್ಮ ತಮ್ಮ ತಾಲೂಕುಗಳಲ್ಲಿ ಸಂಘಟನೆ ಹಾಗೂ ಜಾಗೃತಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ ಎಂದು ಶ್ರೀ ಸಾಯಿ ಈಶ್ವರ್ ಗುರೂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top