ಪೂಜ್ಯಶ್ರೀ ದೊಡ್ಡಪ್ಪ ಅಪ್ಪ ಅವರಿಂದ "ಹೋಟೆಲ್ ಬೃಂದಾವನ ಗ್ರ್ಯಾಂಡ್" ಉದ್ಘಾಟನೆ
ಕಲಬುರಗಿ: ಯಾವುದೇ ಉದ್ಯಮದಲ್ಲಿ ಗ್ರಾಹಕರ ಪ್ರೀತಿಯನ್ನು ಗಳಿಸಿ ವಿಶ್ವಾಸ ಉಳಿಸಿಕೊಂಡರೆ ಮಾತ್ರ ಯಶಸ್ಸು ಸಾಧ್ಯ ಎಂದು ಕಲಬುರಗಿ ಜಿಲ್ಲಾ ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯಶ್ರೀ ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದರು.
ಕಲಬುರಗಿಯ ನಾಗನಹಳ್ಳಿ ಸರ್ಕಲ್ ರಿಂಗ್ ರೋಡ್ ಬಳಿ ನೂತನವಾಗಿ ನಿರ್ಮಿಸಿದ "ಹೋಟೆಲ್ ಬೃಂದಾವನ ಗ್ರ್ಯಾಂಡ್" ಅನ್ನು ಏಪ್ರಿಲ್ 19 ರಂದು ಶ್ರೀ ಶರಣಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ದೊಡ್ಡಪ್ಪ ಅಪ್ಪ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಉದ್ಯಮಿಯಾದವನು ಚಿಂತನ, ಮಂಥನ ಮಾಡಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಕಡೇಚೂರ್ ಗ್ರೂಪ್ ಆಫ್ ಹೋಟೆಲ್ಸ್ ನ ವೆಂಕಟೇಶ್ ಕಡೇಚೂರ್ ಅಂತಹ ವಿಶೇಷ ವ್ಯಕ್ತಿತ್ವವನ್ನು ಹೊಂದಿ ಯಶಸ್ಸು ಹೊಂದಿದ್ದಾರೆ. ಕಲಬುರಗಿಗೆ ವಸತಿ ಗೃಹ ಮತ್ತು ಉಪಹಾರ ಗೃಹ ನೀಡಿದ ಕಡೇಚೂರ್ ಗ್ರೂಪ್ ನಿಜಕ್ಕೂ ಅಭಿನಂದನಾರ್ಹ ಎಂದರು.
ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಮಾತನಾಡಿ ಕಲಬುರಗಿಗೆ ಅತ್ಯಾಧುನಿಕ ಮತ್ತು ಸುಸಜ್ಜಿತ ವಸತಿ ಗೃಹ ಮತ್ತು ಉಪಹಾರ ಗೃಹದ ಆರಂಭದೊಂದಿಗೆ ಹೆಸರಾಂತ ಉದ್ಯಮಿಗಳಾದ ದಿವಂಗತ ಮಹಾದೇವಪ್ಪ ಕಡೇಚೂರ್ ಅವರ ಹೆಸರನ್ನು ಅವರ ಮಕ್ಕಳು ಚಿರಸ್ಥಾಯಿ ಗೊಳಿಸಿದ್ದಾರೆ. ಆತಿಥ್ಯ ಕ್ಷೇತ್ರಕ್ಕೆ ಉತ್ತೇಜನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಲಬುರಗಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಇಲ್ಲಿನ ಪ್ರವಾಸೋದ್ಯಮದ ಬೆಳವಣಿಗೆಗೆ ಸುಸಜ್ಜಿತ ಹೋಟೆಲ್ ಅತ್ಯಂತ ಅವಶ್ಯಕವಾಗಿದ್ದು ಅಂತಹ ಬೇಡಿಕೆ ನೀಗಿಸಿದ ಕಡೇಚೂರ್ ಗ್ರೂಪ್ ನವರು ಅಭಿನಂದನಾರ್ಹರು ಎಂದು ವಿಧಾನ ಪರಿಷತ್ ಸದಸ್ಯರಾದ ಡಾ. ಬಿ. ಜಿ ಪಾಟೀಲ್ ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನಸಭಾ ಸದಸ್ಯರಾದ ಶಶಿಲ್ ಜಿ ನಮೋಶಿ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಶಿವಕಾಂತ ಮಹಾಜನ, ಹಿರಿಯ ಉದ್ಯಮಿಗಳಾದ ಚಂದ್ರಕಾಂತ ವಿ ಗುತ್ತೇದಾರ್, ಸತೀಶ್ ಬಿ ಗುತ್ತೇದಾರ್, ಮಾಲಕರಾದ ಬಿ. ವಿಜಯಕುಮಾರ್, ವೆಂಕಟೇಶ ಕಡೇಚೂರ್, ಡಾ ರಾಜೇಶ್ ಕಡೇಚೂರ್ ಉಪಸ್ಥಿತರಿದ್ದರು. ಶಶಾಂಕ್ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರೂಪಿನ ಆಡಳಿತ ನಿರ್ದೇಶಕರಾದ ಡಾ. ಸದಾನಂದ ಪೆರ್ಲ ಸ್ವಾಗತಿಸಿ ನಿರೂಪಿಸಿದರು.
ಗಣ್ಯರಿಂದ ಶುಭಾಶಯಗಳು
ಹೋಟೆಲ್ ಬೃಂದಾವನ ಗ್ರ್ಯಾಂಡ್ ಉದ್ಘಾಟನಾ ಸಮಾರಂಭಕ್ಕೆ ಶಾಸಕರಾದ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಬಿಜೆಪಿ ಮುಖಂಡರಾದ ನಿತಿನ್ ಗುತ್ತೇದಾರ್, ಶರಣಪ್ಪ ತಳವಾರ್, ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಪಾಟೀಲ್ ಹರವಾಳ, ಕಾಂಗ್ರೆಸ್ ನಾಯಕರಾದ ಸಂತೋಷ್ ಬಿಲಗುಂದಿ ನೀಲಕಂಠ ರಾವ್ ಮೂಲಗೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಉಮೇಶ್ ಬಗಲಿ, ಹರ್ಷಾನಂದ ಗುತ್ತೇದಾರ್, ಡಾ. ಪಿ ಎಸ್ ಶಂಕರ್, ಡಿ ಜಿ ಸಾಗರ್, ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್, ಉದ್ಯಮಿಗಳಾದ ಶ್ರೀಕಾಂತ್ ಲಾಹೋಟಿ ಸಾರಂಗ ಮೆಹ್ತಾ, ಮಹಾದೇವ ಗುತ್ತೇದಾರ್, ಸತ್ಯನಾಥ ಶೆಟ್ಟಿ, ಪ್ರವೀಣ್ ಜತ್ತನ್, ಕುಪೇಂದ್ರ ಗುತ್ತೇದಾರ್ ನಾಗೂರ, ಡಾ.ಎಚ್ ವೀರಭದ್ರಪ್ಪ, ಡಾ. ಬಿ.ಸಿ ಪಾಟೀಲ್, ಡಾ.ಎಸ್ ಬಿ. ಕಾಮರೆಡ್ಡಿ ಅಪ್ಪಾರಾವ ಅಕ್ಕೋಣಿ, ಡಾ. ಚಿ ಸಿ. ನಿಂಗಣ್ಣ, ನಂದಿನಿ ಸನಬಾಳ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


