ರೆ| ಜಾನ್ ಫ್ರಾನ್ಸಿಸ್ ಸಿಕ್ವೇರಾ, ಒಸಿಡಿ, ಕರ್ನಾಟಕ-ಗೋವಾ ಪ್ರಾಂತ್ಯದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ಆಯ್ಕೆ

Upayuktha
0

 

ಮೈಸೂರು: ಇಲ್ಲಿನ ಬೋಗಾದಿಯ ಧ್ಯಾನ ಸಾಧನದಲ್ಲಿ ಎ. 17 ರಂದು ನಡೆದ 16ನೇ ಪ್ರೊವಿನ್ಶಿಯಲ್ ಚಾಪ್ಟರ್ (ಮಹಾಧಿವೇಶನ) ನಲ್ಲಿ ಡಿಸ್ಕಾಲ್ಸ್ಡ್ ಕಾರ್ಮೆಲೈಟ್ಸ್ ಸಭೆಯ ಕರ್ನಾಟಕ-ಗೋವಾ ಪ್ರಾಂತ್ಯದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ಡಾ. ಜಾನ್ ಫ್ರಾನ್ಸಿಸ್ ಸಿಕ್ವೇರಾ, ಒಸಿಡಿ, ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ರೆ| ಸಿಲ್ವೆಸ್ಟರ್ ಡಿ'ಸೋಜಾ, ಒಸಿಡಿ ಅವರ ಉತ್ತರಾಧಿಕಾರಿಯಾಗಿ ಇವರು ಅಧಿಕಾರ ವಹಿಸಿಕೊಂಡಿದ್ದಾರೆ.


ರೆ| ಜಾನ್ ಫ್ರಾನ್ಸಿಸ್ ಸಿಕ್ವೇರಾ ಅವರು ಮಂಗಳೂರು ಧರ್ಮಪ್ರಾಂತ್ಯದ ಅಗ್ರಾರ್ ಧರ್ಮ ಪ್ರಾಂತ್ಯದವರು. ಪ್ರಖ್ಯಾತ ಶಿಕ್ಷಣತಜ್ಞ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರಾಗಿರುವ ಇವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎರಡನೇ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಅಲ್ಲಿಯೇ ಜರ್ಮನ್ ಭಾಷಾಶಾಸ್ತ್ರದಲ್ಲೂ ಅಧ್ಯಯನ ನಡೆಸಿದ್ದಾರೆ. ರೋಮ್ ಪಾಂಟಿಫಿಕಲ್ ಯೂನಿವರ್ಸಿಟಿ ಆಫ್ ಸೇಂಟ್ ಥಾಮಸ್ ಅಕ್ವಿನಾಸ್ ನಿಂದ ಹರ್ಮೆನ್ಯೂಟಿಕ್ಸ್ (ಪ್ರಾಚೀನ ಪಠ್ಯಗಳ ವ್ಯಾಖ್ಯಾನ) ವಿಷಯದಲ್ಲಿ ಪರಿಣತಿಯೊಂದಿಗೆ ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.


ಗೌರವಾನ್ವಿತ ವಿದ್ವಾಂಸರಾಗಿರುವ ವಂ| ಜಾನ್ ಅವರು ಹಲವಾರು ಪದವಿ ಮತ್ತು ಸ್ನಾತಕೋತ್ತರ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೈಕ್ಷಣಿಕ ವಲಯದ ಆಚೆಗೆ, ಮಾನವ ಸಂಪನ್ಮೂಲ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳು, ಕಾರ್ಮೆಲೈಟ್ ಆಧ್ಯಾತ್ಮಿಕತೆ ಮತ್ತು ಅತೀಂದ್ರಿಯತೆಯ ಬಗೆಗಿನ ಅವರ ಆಳವಾದ ಒಲವು ಮತ್ತು ತೊಡಗಿಸಿಕೊಳ್ಳುವಿಕೆಗೆ ಅವರು ಹೆಸರುವಾಸಿಯಾಗಿದ್ದಾರೆ. "ಆಂತರಿಕ ಮೌನ ಮತ್ತು ದೈವಿಕ ಅನ್ಯೋನ್ಯತೆ" ಕುರಿತಾದ ಅವರ ಚಿಂತನೆಗಳು ಅನೇಕರಿಗೆ ಸ್ಫೂರ್ತಿ ನೀಡಿವೆ.


ಇವರು ಮಂಗಳೂರಿನ ಆಂತರಿಕ ಮೌನ ಮತ್ತು ಧ್ಯಾನ ಕೇಂದ್ರವಾದ "ಋಷಿವನ" (Ryshivana) ಹಾಗೂ ಗೋವಾದ ಕಾಣಕೋಣದ ಕ್ಸೆಲ್ಲಿಮ್ನಲ್ಲಿ ಯುವಜನರು ಮತ್ತು ಕುಟುಂಬಗಳಿಗಾಗಿರುವ ಪ್ರಾರ್ಥನಾ ಕೇಂದ್ರ "ಡಿವೈನ್ ಸ್ಪ್ರಿಂಗ್ಸ್" ಧ್ಯಾನ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಧರ್ಮ ಮತ್ತು ಆಧ್ಯಾತ್ಮಿಕತೆಯ ಪತ್ರಿಕೆಯಾದ "ಧ್ಯಾನ" ಸಂಸ್ಥಾಪಕ ಮತ್ತು ಮುಖ್ಯ ಸಂಪಾದಕ, ಕನ್ನಡದ ಆಧ್ಯಾತ್ಮಿಕ ಪತ್ರಿಕೆಯಾದ "ಜೀವ ಜಲ" ಸಂಸ್ಥಾಪಕ-ಸಂಪಾದಕರೂ ಹೌದು. ಇವರು ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ಹಾಗೂ ಬರವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top