ಪಿಲಿಕುಳ: ಗುತ್ತು ಮನೆ, ಕುಶಲಕರ್ಮಿ ಗ್ರಾಮಕ್ಕೆ ವಿದೇಶಿ ಪ್ರವಾಸಿಗರ ಭೇಟಿ

Upayuktha
0

 ಬೆತ್ತಬಿದಿರು ವಿಭಾಗದ ನೇರ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸುತ್ತಿರುವ ವಿದೇಶಿಗರು

ಮಂಗಳೂರು: ನವಮಂಗಳೂರು ಬಂದರಿಗೆ ಶನಿವಾರ ಆಗಮಿಸಿದ್ದ ಸೆವೆನ್ ಸೀಸ್ ಮರೈನರ್ ಐಷಾರಾಮಿ ಹಡಗಿನಲ್ಲಿ ನೂರಾರು ವಿದೇಶಿ ಪ್ರವಾಸಿಗರು ಪಿಲಿಕುಳದ ಗುತ್ತುಮನೆ ಮತ್ತು ಕುಶಲಕರ್ಮಿ ಗ್ರಾಮಕ್ಕೆ ಭೇಟಿ ನೀಡಿದರು.

 

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕುಶಲಕರ್ಮಿ ಗ್ರಾಮದಲ್ಲಿ ಮುಂದಿನ ತಲೆಮಾರಿಗೆ ಪಾರಂಪರಿಕವಾಗಿ ಉಳಿಸಿಕೊಂಡು ಬಂದಿರುವ ವಿವಿಧ ಕುಶಲಕರ್ಮಿ ವೃತ್ತಿಗಳ ನೈಜ ಅನುಭವ ಪ್ರವಾಸಿಗರನ್ನು ಆಕರ್ಷಿಸಿತು. ಇಲ್ಲಿ ಕುಂಬಾರಿಕೆ, ಕುಟ್ಟಣದ ಅವಲಕ್ಕಿ ತಯಾರಿಕೆ, ಎಣ್ಣೆ ಗಾಣದ ಕಾರ್ಯವಿಧಾನ, ಕಮ್ಮಾರಿಕೆ, ಬಡಗಿ ಕೆಲಸಗಳು ಹಾಗೂ ಬೆತ್ತಬಿದಿರು ವಿಭಾಗಗಳಲ್ಲಿ ದೈನಂದಿನವಾಗಿ ನಡೆಯುವ ನೇರ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು.

ಪ್ರತಿ ವಿಭಾಗದಲ್ಲಿಯೂ ಕುಶಲಕರ್ಮಿಗಳು ತಮ್ಮ ತಮ್ಮ ಕೌಶಲ್ಯವನ್ನು ನೈಜವಾಗಿ ಪ್ರದರ್ಶಿಸುತ್ತಿರುವುದನ್ನು ಗಮನಿಸಿದ ಪ್ರವಾಸಿಗರು, ಪರಂಪರೆಯ ವೃತ್ತಿಗಳು ಇಂದಿಗೂ ಹೇಗೆ ಜೀವಂತವಾಗಿವೆ ಎಂಬುದರ ಬಗ್ಗೆ ಕುತೂಹಲದಿಂದ ವಿಚಾರಿಸಿದರು. ಗ್ರಾಮ್ಯ ಜೀವನ ಶೈಲಿ, ಪರಂಪರೆಯ ತಂತ್ರಜ್ಞಾನ, ಹಾಗೂ ಸ್ಥಳೀಯರ ಜೀವನೋಪಾಯಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಮಾರ್ಗದರ್ಶಕರಿಂದ ಪಡೆದುಕೊಂಡರು. ಒಟ್ಟು 200 ಕ್ಕಿಂತಲೂ ಹೆಚ್ಚು ವಿದೇಶಿ ಪ್ರವಾಸಿಗರು ಪಿಲಿಕುಳಕ್ಕೆ ಭೇಟಿ ನೀಡಿದ್ದಾರೆ.

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top