ಸಂಗೀತ ಎನ್ನುವುದು ಒಂದು ಆಧ್ಯಾತ್ಮಿಕ ಪರಂಪರೆಯ ಕಲೆ: ಶಶಿಕಲ ಜಿ.ಮಯ್ಯ

Upayuktha
0

 


ಕಾಸರಗೋಡು: ಮನುಷ್ಯನ ಮಾನಸಿಕ ನೆಮ್ಮದಿ ಹಾಗೂ ಜ್ಞಾನವರ್ಧನೆಗೆ ಸಂಗೀತ ಎನ್ನುವುದು ಒಂದು ಆಧ್ಯಾತ್ಮಿಕ ಪರಂಪರೆಯ ಕಲೆ. ಇದೊಂದು ಚಿಕಿತ್ಸಾ ಪದ್ಧತಿ, ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಸುಗಮ ಸಂಗೀತ ಕಾರ್ಯಾಗಾರ ನಾಂದಿ ಎಂದು ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಶಿಕಲ ಜಿ.ಮಯ್ಯ ಅಭಿಪ್ರಾಯಪಟ್ಟರು.

 

ಇವರು ಇತ್ತೀಚೆಗೆ ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ, “ಕಲಾಕುಂಚ” ಕೇರಳ ರಾಜ್ಯ ಗಡಿನಾಡ ಶಾಖೆಯ ಆಶ್ರಯದಲ್ಲಿ, ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯಲ್ಲಿ ನಡೆದ “ಸುಗಮ ಸಂಗೀತ ಕಾರ್ಯಾಗಾರ”ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ನಿವೃತ್ತ ಮುಖ್ಯೋಪಾಧ್ಯಾಯರಾದ ರಾಧಾಕೃಷ್ಣ ತುಂಗ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಾಗಾರ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರಿನ ವಿದುಷಿ ಸುಮನಾರಾವ್, ಸುಪ್ರಜಾ ರಾವ್  ಶ್ರೀ ಶಾರದಾ ದೇವಿಯ ಕುರಿತಾದ ಹಾಡುಗಳು, ದುರ್ಗಾಸ್ತುತಿ, ಶ್ಲೋಕಗಳನ್ನು ಹೇಳಿಕೊಟ್ಟರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಅಭಿನಂದನಾ ಪತ್ರ, ಬಹುಮಾನಗಳನ್ನು ವಿತರಿಸಲಾಯಿತು.

 

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸಂಸ್ಥಾಪಕಿ ಜಯಲಕ್ಷ್ಮಿ ಕಾರಂತ್, ಶ್ರೀರಾಮ ಕಾರಂತ್, ಶ್ರೀಮತಿ ತಾರಾ ಪ್ರವೀಣ್ ಉಪಸ್ಥಿತರಿದ್ದರು.ದಿವ್ಯಾ ಚಂದನ್ ಕಾರಂತ್ ಪ್ರಾರ್ಥಿಸಿದರು. ಜಯಲಕ್ಷ್ಮಿ ಆರ್. ಹೊಳ್ಳ ನಿರೂಪಿಸಿ, ಚಂದನ್ ಕಾರಂತ್ ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top