ಜನಿವಾರ ಕಿತ್ತೆಸೆಯುವಂತಹ ದುಷ್ಟ ಚೇಷ್ಟೆಗಳ ದಮನಕ್ಕೇ ಅವತ್ತು ರಾಮ ದಂಡಕಾರಣ್ಯಕ್ಕೆ ಬಂದಿದ್ದು...!

Upayuktha
0


ರಾಮಾಯಣದ ಕಾಲದಲ್ಲಿ, ದಂಡಕಾರಣ್ಯವು ರಾಕ್ಷಸರಿಂದ ತುಂಬಿ ತುಳುಕುತ್ತಿತ್ತು. ಅವರು ಋಷಿ ಮುನಿಗಳಿಗೆ ಕಿರುಕುಳ ನೀಡುತ್ತಿದ್ದರು, ಪೀಡಿಸುತ್ತಿದ್ದರು. ಕೊಲ್ಲುತ್ತಿದ್ದರು.


ರಾಮನು ದಂಡಕಾರಣ್ಯ ಪ್ರವೇಶಿಸುವ ಸಮಯದಲ್ಲಿ ದಂಡಕಾರಣ್ಯವು "ದುಷ್ಟ ರಾಕ್ಷಸರ ತಾಣ" ಎಂದು ಪ್ರಸಿದ್ಧಿ ಪಡೆದಿತ್ತು.


ಋಷಿ ಮುನಿಗಳು ಯಜ್ಞ ಯಾಗಾದಿಗಳನ್ನು ಮಾಡುವಾಗ, ದುಷ್ಟ ರಾಕ್ಷಸರು ಮಾಂಸ ಮಜ್ಜನಗಳನ್ನು ತಂದು ಯಾಗ ಶಾಲೆಯಲ್ಲಿ, ಭೋಜನ ಶಾಲೆಯಲ್ಲಿ, ಪಾಠ ಶಾಲೆಯಲ್ಲಿ ಹಾಕಿ, ಕಿರುಕುಳ ಕೊಡುತ್ತಿದ್ದರು.  ದೂರದಲ್ಲಿ ನಿಂತು ಕಲ್ಲುಗಳಿಂದ ಹೊಡೆಯುವುದು, ಬಂಡೆಗಳನ್ನು ಉರುಳಿಸಿ ದ್ವಂಸ ಮಾಡುತ್ತಿದ್ದರು.


ಗುರುಕುಲದ ವಿದ್ಯಾ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದ ಮಕ್ಕಳ ಜನಿವಾರಗಳನ್ನು ದುಷ್ಟ ರಾಕ್ಷಸರು ಕಿತ್ತು ಬಿಸಾಡಿ ಅಟ್ಟಹಾಸ ಮೆರೆಯುತ್ತಿದ್ದರು


ದುಷ್ಟರ ಸಂಹಾರಕ್ಕಾಗಿ ಅವತಾರ ಎತ್ತಿದ ರಾಮನು, ಅಂತಹ ಎಲ್ಲ ದುಷ್ಟ ರಾಕ್ಷಸರನ್ನು ಸಂಹಾರ ಮಾಡಿ, ಶಾಂತಿಯುತ ರಾಮರಾಜ್ಯವನ್ನು ನಿರ್ಮಿಸಿ, ಅವತಾರದ ಸಂಕಲ್ಪವನ್ನು ಪೂರೈಸಿ, ವೈಕುಂಠಕ್ಕೆ ಹಿಂದಿರುಗಿದ ಕತೆ ಉತ್ತರ ರಾಮಾಯಣದಲ್ಲಿ ಕಾಣುತ್ತೇವೆ.


**


ಅದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತವರಾಹಕಲ್ಪೇ ವೈವಸ್ವತಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಭಾರತವರ್ಷೇ ಭರತಖಂಡೇ ಜಂಬೂದ್ವೀಪೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ  ತೀರೇ ಶಾಲಿವಾಹನಶಕವರ್ಷೇ ಬೌದ್ಧಾವತಾರೇ ಶ್ರೀರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇಯ ಈ ದಿನಗಳಲ್ಲಿ ಮತ್ತೆ ಇದೇ ರಾಮಕ್ಷೇತ್ರ, ದಂಡಕಾರಣ್ಯದ ಕರ್ನಾಟಕ, ಕೇರಳಗಳಲ್ಲಿ, ದುಷ್ಟ ರಾಕ್ಷಸೀ ಮನೋಭಾವದ DNA ಹೊಂದಿರುವ ರಾಕ್ಷಸರು ಮನುಷ್ಯರ ರೂಪದಲ್ಲಿ ಜನಿಸಿ, ಇತಿಹಾಸದ ದುಷ್ಟ ಚೇಷ್ಟೆಗಳನ್ನು ಮತ್ತೆ ಪುನರಾವರ್ತನೆ ಮಾಡುತ್ತಿದ್ದಾರೆ. 


ದಂಡಕಾರಣ್ಯದ ಭಾಗವಾಗಿರುವ ಕರ್ನಾಟಕವು ಈಗ ನಗರ ರಾಕ್ಷಸರಿಂದ (ನಗರ ನಕ್ಸಲೇಟ್!?) ತುಂಬಿ ತುಳುಕುತ್ತಿದೆ. ರಾಕ್ಷಸೀ ಪ್ರವೃತ್ತಿಯ ಮನುಷ್ಯರು ಅಧಿಕಾರ ವ್ಯವಸ್ಥೆಯ ಒಳಗೂ ಬಂದು ಕೂತಿದ್ದಾರೆ,  


ಸದಾ ದ್ವೇಷ, ದ್ವೇಷ ಭಾಷಣ, ಕಿರುಕುಳ ಕೊಡುವುದು, ಪೀಡಿಸುವುದು, ಕಲ್ಲು ಹೊಡೆಯುವುದು, ಜನಿವಾರ ಕೀಳುವುದು, "ಭಗವದ್ಗೀತೆಯಂತಹ ಧರ್ಮ ಗ್ರಂಥಗಳನ್ನು ಸುಡಬೇಕು" ಎನ್ನುವುದು, ಸನಾತನ ಧರ್ಮದ ಮಂದಿರಗಳನ್ನು ವಿರೂಪಗೊಳಿಸುವುದು... ಮಾಡುತ್ತಿದ್ದಾರೆ.


ಭರತ ಭೂಮಿಯ, ದಕ್ಷಿಣದ ಕರ್ನಾಟಕವೂ ಸೇರಿದಂತೆ, ಬಹುತೇಕ ದಂಡಕಾರಣ್ಯವು ಮತ್ತೆ ರಾಮನ ಯುಗದ, ರಾಮನು ದಂಡಕಾರಣ್ಯಕ್ಕೆ ಬರುವ ಮೊದಲಿನ ದಿನಗಳ ವಿಪರೀತದ ಪರಿಸ್ಥಿತಿಗೆ ತಲುಪುತ್ತಿದೆ.


ದುಷ್ಟ ನಿಗ್ರಹ ಮಾಡಿ, ಸರಿ ಮಾಡಲು ಮತ್ತೆ ರಾಮನಂತವರೇ ಅಥವಾ ರಾಮನೇ ಬರಬೇಕಾ? 


ಕಾಲವೇ ಉತ್ತರ ಹೇಳಬೇಕು.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top