ಇವತ್ತು ಶಾಲಾ ಕಾಲೇಜ್, ಸಭೆ ಸಮಾರಂಭಗಳಲ್ಲಿ ಬಳಸುವ ಲಯ ಬದ್ಧ ಚಪ್ಪಾಳೆ:
ಒನ್ ಟು ತ್ರೀ👏👏👏
ಒನ್ ಟು ತ್ರೀ👏👏👏
ಒನ್👏
ಟೂ👏
ತ್ರೀ👏
ಇದು ಮೂಲತಃ ಇವತ್ತಿನದಲ್ಲ!! ರಾಮಾಯಣ ಕಾಲದ್ದು!!
ರಾಮಾಯಣ ಕಾಲದಲ್ಲಿ ಶರಧಿಗೆ ಸೇತುವೆ ನಿರ್ಮಿಸುವ ಸಂದರ್ಭ. ಮೊನ್ನೆ ಮೊನ್ನೆ ತಮಿಳುನಾಡಿನ ಕರೂರು, ಆಂಧ್ರಪ್ರದೇಶದ ಶ್ರೀಕಾಕುಳಂ ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆಡೆದಂತಹ ಕಾಲ್ತುಳಿತ ಪ್ರಕರಣಗಳು ಅವತ್ತೂ ನೆಡೆದಿದ್ದವು. ತ್ರೇತಾಯುಗದ ಕಾಲ್ತುಳಿತದಲ್ಲಿ ಸಾವಿನ ಘಟನೆಗಳು ನೆಡೆಯದಿದ್ದರೂ, ಅನೇಕ ವಾನರರು ಗಂಭೀರವಾಗಿ ಗಾಯಗೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದವು.
ಸೇತುವೆ ಪೂರ್ಣಗೊಂಡು, ವಾನರ ಸೇನೆ ಲಂಕೆಗೆ ಹೊರಡುವಾಗ, ಯಾವುದೇ ಕಾರಣಕ್ಕೂ ಕಾಲ್ತುಳಿತ ಪ್ರಕರಣಗಳು ಸಂಭವಿಸದಂತೆ ವಾನರ ಸೇನೆಯ ಪಥ ಸಂಚಲನಕ್ಕೆ ಹೊಸ ರೂಪ ಕೊಡಲು ಸೇನಾ ಮುಖ್ಯ ನಾಯಕ ಸುಗ್ರೀವನು ಗಂಭೀರವಾಗಿ ನಿಶ್ಚಯಿಸಿದನು. ದಶಕಂಠನ ಲಂಕಾ ದೇಶಕ್ಕೆ ಸೇನೆಯನ್ನು ಮುನ್ನೆಡೆಸಲು ಮುಂದಾಳತ್ವ ವಹಿಸಿದ ಸುಗ್ರೀವ: 'ಹನುಮಂತ, ಅಂಗದ, ಜಾಂಬವಂತ, ನಳ, ನೀಳ, ಮೈಂದ, ದ್ವಿವಿದ, ಪ್ರಮತಿ, ರಭಸ, ಶರಭ ಮತ್ತು ಗಂಧಮಾದನ'ರನ್ನು ಒಳಗೊಂಡ ಒಂದು 'ದಶ ನಾಯಕ ಸಮಿತಿ' ರಚನೆ ಮಾಡಿ, 'ಕಾಲ್ತುಳಿತ ಪ್ರಕರಣ ಮರುಕಳಿಸದಂತೆ ಬಿಗಿ ಕ್ರಮಕ್ಕೆ ಸೂತ್ರ ಹಣಿಯುವ "ಒಂದು ಯೋಜನಾ ವರದಿ" ಕೊಡುವಂತೆ ಸೂಚನೆ ಕೊಟ್ಟನು.
ಹತ್ತು ಜನ ತಜ್ಞರ ಸಮಿತಿಯ ವರದಿಯನ್ನು ಜೊಟ್ಟಿತು. ಅದನ್ನು ಆಧರಿಸಿ, ವಾನರ ಸೇನಾ ಪರಮೋಚ್ಛ ನಾಯಕ ಸುಗ್ರೀವನು ಸಮಸ್ತ ವಾನರ ಸೇನೆಗೆ ಒಂದು ವಿಶೇಷ ಆಜ್ಞೆ ಮಾಡಿದ್ದು, ಅದನ್ನು ಸಮಸ್ತ ವಾನರ ಸೇನೆ ಕಡ್ಡಾಯವಾಗಿ ಪಾಲಿಸುವಂತೆ ಆದೇಶಗೊಳಿಸಿದ್ದನು. ಪಥ ಸಂಚಲನಕ್ಕೆ ಅವತ್ತು ಸುಗ್ರೀವ ನೀಡಿದ ಆ ಆಜ್ಞೆಯೇ ಸುಗ್ರೀವಾಜ್ಞೆ ಎಂದು ಪ್ರಸಿದ್ಧಿ ಪಡೆದು, ಇವತ್ತಿಗೂ ಶಾಸಕಾಂಗ ವ್ಯವಸ್ಥೆಯಲ್ಲಿ ಆ ಶಬ್ಧವನ್ನು ಯತಾವತ್ ಬಳಸಲಾಗುತ್ತಿದೆ.
ಪಥ ಸಂಚಲನದ ಆ ಸುಗ್ರೀವಾಜ್ಞೆಯ ಯೋಜನೆಯೇ ಜೈಶ್ರೀರಾಮ್ ಕರತಾಡನಂ!!
ಸೇತುವೆಯನ್ನು ಕಟ್ಟಿದ ಮೇಲೆ, ವಾನರ ಸೇನೆ ಸೇತುವೆ ಮೇಲೆ ಪಥ ಸಂಚಲನ ಮಾಡುತ್ತ, ಭಾರತದಿಂದ ಲಂಕೆಗೆ ಹೊರಟಿತು. ಸೇತುವೆಯ ಮೇಲೆ ನೆಡೆಯುವಾಗ ಕಾಲ್ತುಳಿತ ಉಂಟಾಗದಂತೆ, ನೆಡಿಗೆಯ ಆಯಾಸ ಕಮ್ಮಿಯಾಗುವಂತೆ, ಹೇಳಿದ್ದು-ನೆಡೆದಿದ್ದು-ಚಪ್ಪಾಳೆಗಳು ಒಂದೇ ಲಯಬದ್ಧವಾಗಿ ಬರುವುದಕ್ಕೆ ಮತ್ತು ರಾಮನಿಗೆ ಮುಂದಿನ ಯುದ್ಧದಲ್ಲಿ ಜಯ ಲಭಿಸುವಂತೆ ಪ್ರಾರ್ಥಿಸುತ್ತಾ, ಹಾರೈಸುತ್ತ ನೆಡೆಯುವುದಕ್ಕೆ ಪಥ ಸಂಚಲನದಲ್ಲಿ ಬಳಸಿದ ಚಪ್ಪಾಳೆ, ಶಿಸ್ತು ಬದ್ಧ ನೆಡಿಗೆ ಮತ್ತು ಘೋಷಣೆಯ ತ್ರಿವೇಣಿ ಸಂಗಮದ ಆ ಶೈಲಿಯೇ ಜೈಶ್ರೀರಾಮ್ ಕರತಾಡನಂ
ಅದರ ಗತಿ:
ಜೈಶ್ರೀರಾಮ್👏👏👏
ಜೈಶ್ರೀರಾಮ್👏👏👏,
ಜೈss👏
ಶ್ರೀss👏
ರಾಮ್👏.
ಭೌತಿಕವಾಗಿ ಮೇಲ್ನೋಟಕ್ಕೆ ಇದು ತ್ರಿವೇಣಿ ಸಂಗಮವಾದರೂ(ಲಯಬದ್ಧ ಘೋಷಣೆ, ಲಯ ಬದ್ದ ನೆಡಿಗೆ ಮತ್ತು ಲಯ ಬದ್ದ ಚಪ್ಪಾಳೆ), ಆಂತರಂಗಿಕವಾಗಿ ಜೈಶ್ರೀರಾಮ್ ಕರತಾಡನಂ ಇದರಲ್ಲಿ ಭಕ್ತಿ, ಶ್ರದ್ಧೆ, ಪ್ರಾಣಾಯಾಮ, ಹಾರೈಕೆ, ಪ್ರಾರ್ಥನೆ, ಆಟ, ಮನರಂಜನೆ, ಉತ್ತೇಜನ, ಆಯಾಸ ನಾಶ, ಧ್ವನಿ ಸ್ಪರ್ಧಾ ಮನೋಭಾವ' ಎಂಬ ದಶ ಗುಣಗಳ ಸಂಗಮವೂ ಇದೆ.
**
ವಾನರ ಸೇನಯ ಪಥ ಸಂಚಲನದ ಈ
ಜೈಶ್ರೀರಾಮ್👏👏👏
ಜೈಶ್ರೀರಾಮ್👏👏👏,
ಜೈss👏
ಶ್ರೀss👏
ರಾಮ್👏.
ಎಂಬ ಈ ಲಯಬದ್ಧ ಘೋಷಣೆ, ಲಯ ಬದ್ದ ನೆಡಿಗೆ ಮತ್ತು ಲಯ ಬದ್ದ ಚಪ್ಪಾಳೆಯ ಜೈಶ್ರೀರಾಮ್ ಕರತಾಡನಂ ಯನ್ನು ಆಗಿನ ದಂಡಕಾರಣ್ಯದಲ್ಲಿದ್ದ ಋಷಿ ಮುನಿಗಳ ಗುರುಕುಲಗಳಲ್ಲಿ ಶೈಕ್ಷಣಿಕ ಮತ್ತು ಪ್ರತಿಭಾ ಪ್ರದರ್ಶನಗಳಲ್ಲಿ ಅಳವಡಿಸಿಕೊಳ್ಳಲಾಗಿತ್ತು.
ಕಾಲಾಂತರದಲ್ಲಿ, ಯುಗಾಂತರದಲ್ಲಿ ಈ ಜೈಶ್ರೀರಾಮ್ ಕರತಾಡನಂ ಯನ್ನು ನಗರ ಪ್ರದೇಶದ ಶಿಕ್ಷಣ ವ್ಯವಸ್ಥೆಯಲ್ಲೂ, ಸಾಂಸ್ಕೃತಿಕ ವೇದಿಕೆಗಳಲ್ಲೂ ಬಳಸಿಕೊಳ್ಳಲಾಗಿತ್ತು ಎಂಬುದು ಪುರಾಣೇತಿಹಾಸ ಅಧ್ಯಯನದಿಂದ ಕಂಡು ಬಂದಿದೆ.
**
ಜೈಶ್ರೀರಾಮ್ ಕರತಾಡನಂ ಯ ಗತಿ:
ಜೈಶ್ರೀರಾಮ್👏👏👏
ಜೈಶ್ರೀರಾಮ್👏👏👏,
ಜೈss👏
ಶ್ರೀss👏
ರಾಮ್👏.
ಮೊದಲ ಜೈಶ್ರೀರಾಮ್‌ಗೆ ಪಾದದಲ್ಲಿ ಎರಡು ಹೆಜ್ಜೆ ನೆಡಿಗೆ, ಕೈಯಲ್ಲಿ ಮೂರು ಚಪ್ಪಾಳೆ. (ಮೊದಲ ಹೆಜ್ಜೆ ಬಲಗಾಲಿನಿಂದ ಪ್ರಾರಂಭವಾಗಬೇಕು).
ಎರಡನೇ ಜೈಶ್ರೀರಾಮ್‌ಗೆ ಪುನಃ ಅದೇ ತರಹ, ಪಾದದಲ್ಲಿ ಎರಡು ಹೆಜ್ಜೆ ನೆಡಿಗೆ, ಕೈಯಲ್ಲಿ ಮೂರು ಚಪ್ಪಾಳೆ. (ಸಹಜವಾಗಿ ಬಲಗಾಲಿನಿಂದಲೇ ಮುಂದುವರಿಯುತ್ತದೆ).
ಮೂರನೆ ನಿಧಾನ ಗತಿಯ ಜೈ ಶ್ರೀ ರಾಮ್ ಗೆ, ಪಾದದಲ್ಲಿ ನಿಧಾನ ಗತಿಯ ಮೂರು ಹೆಜ್ಜೆ, ಕೈಯಲ್ಲೂ ನಿಧಾನ ಗತಿಯ ಮೂರು ಚಪ್ಪಾಳೆ. (ಮೂರು ಹೆಜ್ಜೆಗಳಿರುವುದರಿಂದ, ಬಲಗಾಲಿನಿಂದ ಪ್ರಾರಂಭಗೊಂಡು, ಬಲಗಾಲಿಗೆ ಮುಕ್ತಾಯಗೊಳ್ಳುತ್ತದೆ).
(ಎರಡನೇ ಆವೃತ್ತಿ ಪ್ರಾರಂಭವಾಗುವಾಗ, ಮೊದಲ ಆವೃತ್ತಿಯ ವಿರುದ್ಧವಾಗಿ, ಅಂದರೆ ಎಡಗಾಲಿನಿಂದ ಪ್ರಾರಂಭವಾಗಬೇಕು)
ಸಂಪೂರ್ಣ ಸೇತುವೆ ನಿರ್ಮಾಣದ ನಂತರ, ಒಂದು ವಾರದ ವಿರಾಮ ಮತ್ತು ಜೈಶ್ರೀರಾಮ್ ಕರತಾಡನಂ ನೊಂದಿಗಿನ ಒಂದು ವಾರದ ನಿರಂತರ ಪಥ ಸಂಚಲನದ ಅಭ್ಯಾಸದೊಂದಿಗೆ, ಲಂಕೆಯ ಕಡೆ ವಾನರ ಸೇನೆ ಹೊರಟಿತು. ವಾನರ ಸೇನೆಯ ಗಾತ್ರ ಅಂದಾಜು 90 ಕೋಟಿಯನ್ನು ಮೀರಿತ್ತು ಮತ್ತು 90 ಕೋಟಿ ವಾಬರ ಸೇನೆಯಲ್ಲಿ ಒಂದು ಸಣ್ಣ ಸಂಖ್ಯಾ ಗಾತ್ರದ ಕರಡಿ ಸಮುದಾಯವೂ ಇತ್ತು ಎಂದು ಹೇಳಲಾಗುತ್ತದೆ. ಲಂಕೆಗೆ ಹೊರಟ ಜೈಶ್ರೀರಾಮ್ ಕರತಾಡನಂ ನೊಂದಿಗಿನ ಪಥ ಸಂಚಲನದಲ್ಲಿ ಒಂದೇ ಒಂದು ಕಾಲ್ತುಳಿತ ಪ್ರಕರಣ ಆಗಿರಲಿಲ್ಲ. ಮುಂದಿನ ಯುದ್ಧದಲ್ಲಿ ವಾನರ ಸೇನೆಯಲ್ಲಿ ಎದುರಾಳಿ ರಾಕ್ಷಸ ದಾಳಿಗೆ ಅನೇಕ ಸಾವು ನೋವುಗಳು ಆಗಿದ್ದರೂ, ಯಾವುದೇ ಕಾಲ್ತುಳಿತಕ್ಕೆ ಸಾವು ನೋವುಗಳ ವಾನರ ಸೇನೆಯಲ್ಲಿ ಆಗಿರಲಿಲ್ಲ.
***
ತ್ರೇತಾಯುಗ ಮುಗಿದು, ದ್ವಾಪರ ಕಳೆದು, ಕಲಿಯುಗ ಬಂದು ಸುಮಾರು 3293 ವರ್ಷಗಳು ಕಳೆಯುವವರೆಗೂ ಜೈಶ್ರೀರಾಮ್ ಕರತಾಡನಂ ಪದ್ದತಿ ಮತ್ತು ಸುಗ್ರೀವಾಜ್ಞೆ ಶಬ್ಧ ಬಳಿಕೆ ಅಸ್ತಿತ್ವದಲ್ಲಿತ್ತು. ಬ್ರೀಟೀಷ್ ಆಡಳಿತದಲ್ಲಿ, ಥಾಮಸ್ ಬಾಬಿಂಗ್ಟನ್ ಮೆಕಾಲೆ ಎಂಬುವವನು ತಂದ ಹೊಸ ಶಿಕ್ಷಣ ನೀತಿಯು ಭಾರತದಲ್ಲಿ 1835ರಲ್ಲಿ ಜಾರಿಗೆ ಬಂದ ಮೇಲೆ, ಜೈಶ್ರೀರಾಮ್ ಕರತಾಡನಂ ಪದ್ಧತಿ ನಿಧಾನವಾಗಿ ಅಂಗ್ರೇಜಿ ಸಂಖ್ಯೆಗಳಿಗೆ ಬದಲಾಯಿತು!!.
ಜೈಶ್ರೀರಾಮ್ ಕರತಾಡನಂ ಎಂಬ ಲಯ ಬದ್ಧ ಚಪ್ಪಾಳೆಯ ಸಾಹಿತ್ಯ, ಅದೇ ಲಯದೊಂದಿಗೆ ಅಂದರೆ:
ಒನ್ ಟು ತ್ರೀ👏👏👏
ಒನ್ ಟು ತ್ರೀ👏👏👏
ಒನ್👏
ಟೂ👏
ತ್ರೀ👏
ಅಂತ ಬದಲಾಗಿ ಮುಂದುವರಿಯಿತು.
ಭಾರತದಲ್ಲಿ ಮಾತ್ರ ಅಲ್ಲ, ಒನ್‌ಟುತ್ರಿ ಗೆ ಬದಲಾವಣೆಗೊಂಡ ಚಪ್ಪಾಳೆಯ ಶೈಲಿ, ಇಂಗ್ಲೇಂಡಿಗೂ ಸಂಚರಿಸಿ ನಂತರ ವಿಶ್ವದ ಅನೇಕ ದೇಶಗಳಿಗೂ ಪಸರಿಸಿದೆ.
ಕಾಲಗತಿಯಲ್ಲಿ ಇಂಗ್ಲೀಷ್ ಭಾಷೆ ಅಸ್ತಿತ್ವಕ್ಕೆ ಬಂದ ಮೇಲೆ ಜೈಶ್ರೀರಾಮ್ ಸಾಹಿತ್ಯದ ಬದಲಿಗೆ ಒಂಟೂತ್ರೀಗೆ ಬದಲಾವಣೆಗೊಂಡು, ಚಲಾವಣೆಗೆ ಬಂತು.
ಇನ್ನು ಈ ಜೈಶ್ರೀರಾಮ್ ಕರತಾಡನಂ ಪದ್ದತಿಯ ಸಂಶೋಧನೆಗೆ ಬಳಸಿದ ಆಕರ ಗ್ರಂಥಗಳ ತಾಳೆಗರಿಗಳು ಬ್ರಿಟೀಷ್ ಆಡಳಿತ ಕಾಲದಲ್ಲಿ ನಾಶವಾಗಿರುವ ಕಾರಣ, ಭೌತಿಕ ಆಕರ ತಾಳೆಗರಿ ಹಸ್ತಪ್ರತಿಗಳು ಈಗ ಲಭ್ಯವಿರುವುದಿಲ್ಲ!! ಹಾಗಾಗಿ ಕಾಲ್ಪನಿಕ ಸಂಶೋಧನೆಯಿಂದ ಈ ನೈಜ ವರದಿಯನ್ನು ಸಿದ್ಧಪಡಿಸಲಾಗಿದೆ!!
ಶಾಸನ ವ್ಯವಸ್ಥೆಗೆ ಸಂಬಂಧಿಸಿದ ಸುಗ್ರೀವಾಜ್ಞೆ ಮತ್ತು ಶಿಸ್ತುಬದ್ದ ಜೈಶ್ರೀರಾಮ್ ಕರತಾಡನಂ ಗಳು ರಾಮಾಯಣದ್ದು, ರಾಮಾಯಣ ಕಾಲದ್ದು ಅಂತ ಗೊತ್ತಾದರೆ, ಅದನ್ನು ವಿರೋಧಿಸುವ ಹಾಗು ವ್ಯವಸ್ಥೆಯಲ್ಲಿ ಸುಗ್ರೀವಾಜ್ಞೆ ಮತ್ತು ಒನ್‌ಟುತ್ರೀ ಯಾಗಿ ಬದಲಾಗಿರುವ ಶಿಸ್ತುಬದ್ದ ಜೈಶ್ರೀರಾಮ್ ಕರತಾಡನಂ ಗಳನ್ನು ತೆಗೆದು ಹಾಕಬಹದು!!?
ಸನಾತನ ವಿರೋಧಿ ವಿಕೃತ ಮನಸ್ಸುಗಳು ಅಧಿಕಾರದಲ್ಲಿ ಇರಬಹುದಾದ್ದರಿಂದ, ಅವರುಗಳಿಗೆ ಈ ಶಿಸ್ತುಬದ್ದ ಜೈಶ್ರೀರಾಮ್ ಕರತಾಡನಂ ವರದಿಯ ಮೆಸೇಜನ್ನು ಫಾರ್ವರ್ಡ್ ಮಾಡುವುದು ಬೇಡ. ಉಳಿದವರಿಗೆ ತಲುಪುವಂತೆ ಫಾರ್ವರ್ಡ್ ಮಾಡುತ್ತಲೇ ಇರಿ!!!
(ಟಿಪ್ಪಣಿ: ಇತ್ತೀಚೆಗೆ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಕಟ್ಟಹಕ್ಕಲು ಎಂಬ ಊರಿನ ಛತ್ರದಲ್ಲಿನ ಒಂದು ಮದುವೆಯ ಹಿಂದಿನ ದಿನದ ರಾತ್ರಿ ನೆಡೆದ ವರಪೂಜೆ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದ ಮೇಲುಕೊಪ್ಪದ ಶ್ರೀಮತಿ ದಿವ್ಯಾ ಎನ್ನುವವರು "ಒನ್ ಟು ತ್ರೀ, ಒನ್ ಟು ತ್ರೀ, ಒನ್sss ಟೂsss ತ್ರೀsss" ಚಪ್ಪಾಳೆ ಬದಲಿಗೆ "ಜೈಶ್ರೀರಾಮ್, ಜೈಶ್ರೀರಾಮ್, ಜೈsss ಶ್ರೀsss ರಾಮ್" ಚಪ್ಪಾಳೆಯನ್ನು ಪ್ರೇಕ್ಷಕರಿಂದ ಹೊಡೆಸಿದ್ದು, ಅವತ್ತು ಅದು ವಿಶೇಷವಾಗಿ ಕಂಡಿದ್ದು, ಇವತ್ತಿನ ಈ ಸಮಗ್ರ ಕಾಲ್ಪನಿಕ ಸಂಶೋಧನೆಗೆ ಪ್ರೇರಣೆಯಾಗಿದೆ!! ಅಂದ ಹಾಗೆ, ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಊರು ರಾಮಾಯಣದಲ್ಲಿ ರಾಮ, ಮಾಯಾ ಜಿಂಕೆಯನ್ನು ಹೊಡೆದ ಮೃಗವಧೆ ಸ್ಥಳದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ. ಅದೇ ರೀತಿ, ರಾಮ, ಜಿಂಕೆಯನ್ನು ಹೊಡೆದಾಗ, ಜಿಂಕೆಯ ಮಂಡೆ ಬಿದ್ದ ಜಾಗ 'ಮಂಡಗದ್ದೆ'ಯಾಗಿಯೂ, ಜಿಂಕೆಯ ಕೊರಳು ಬಂದು ಬಿದ್ದ ಸ್ಥಳ 'ಕೊಳಾವರ' ಎಂದು ಪ್ರಸಿದ್ಧಿ ಪಡೆದಿದ್ದು, 'ಕೊಳಾವರ' ಸ್ಥಳವು 'ಮೇಲುಕೊಪ್ಪ'ದಿಂದ ಒಂದು ಕಿ ಮೀ ದೂರದಲ್ಲಿದೆ)
ಜೈಶ್ರೀರಾಮ್👏👏👏
ಜೈಶ್ರೀರಾಮ್👏👏👏,
ಜೈss👏
ಶ್ರೀss👏
ರಾಮ್👏.
(ಕಾಲ್ಪನಿಕ ಸಂಶೋಧನೆ, ಅಧ್ಯಯನ ಮತ್ತು ವರದಿ:)
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


