ಕವನ: ಒಲವು ನೆನಪಾದಾಗ...

Upayuktha
0



ತವರು ಸಿರಿಗಿಂತ

ನಿಮ್ಮ ಮನ ಹಿರಿದೆನಗೆ 

ನಿಮ್ಮ ಎದೆ ಆಸರೆಯು

ಒಲವು ನನಗೆ


ಹಾಲುಂಟು ಹಣ್ಣುಂಟು

ಜೇನುಂಟು ತವರಲ್ಲಿ

ನಿಮ್ಮ ಪ್ರೀತಿಗೆ ಅದುವೆ

ಸಮನು ಅಹುದೆ


ಅಮ್ಮನಾ ಆರೈಕೆ

ಇಹುದಿಂದು ತವರಲ್ಲಿ

ನಿಮ್ಮ ಕರದಾರೈಕೆ

ಕೊನೆಯವರೆಗೆ


ರೇಷಿಮೆಯ ಜರಿಸೀರೆ

ತೊಡಿಸಿಹರು ಎನಗಿಲ್ಲಿ

ನಿಮ್ಮ ಪ್ರೇಮದ ಧಾರೆ

ಎನಗೆ ಮಿಗಿಲು


ಒಂದು ತಿಂಗಳೊಳಗೆ

ಕಂದ ಬರುವನು ಮನೆಗೆ

ನೆನಪು ಕಾಡುವುದೆನಗೆ

ಬೇಗ ಬರುವೆ..




- ಉಮೇಶ್ ಮುಂಡಳ್ಳಿ, ಭಟ್ಕಳ

9945840552


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top