ಏಪ್ರಿಲ್ 30ರಿಂದ ಮೇ 3ರವರೆಗೆ ಧಾರ್ಮಿಕ ಕಾರ್ಯಕ್ರಮಗಳು
ಕುಂದಾಪುರ: ತಾಲೂಕಿನ ಕಂದಾವರ ಗ್ರಾಮದ ಹೇರಂಭಾಪುರ ಅಗ್ರಹಾರದಲ್ಲಿರುವ ಶ್ರೀ ವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಶಿಲಾಮಯ ದೇವಳ ನಿರ್ಮಾಣ ಕಾರ್ಯದ ಅಂಗವಾಗಿ ಏಪ್ರಿಲ್ 30ರಿಂದ ಮೇ 3ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ದೇವಾಲಯವು ಪ್ರಾಚೀನ ಪರಂಪರೆಯನ್ನು ಹೊಂದಿದ್ದು, ಈಗ ಶಿಲಾಮಯ (ಕಲ್ಲಿನ) ದೇವಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಜೀರ್ಣೋದ್ಧಾರ ಕಾರ್ಯಕ್ಕೆ ಭಕ್ತರ ಸಹಕಾರದೊಂದಿಗೆ ಪುನರ್‌ನಿರ್ಮಾಣ ಕೈಗೊಳ್ಳಲಾಗಿದೆ.
ಕಾರ್ಯಕ್ರಮಗಳ ವಿವರ
ಏಪ್ರಿಲ್ 30ರಂದು ಬೆಳಿಗ್ಗೆ ಪೂರ್ವ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಗಣಹೋಮ, ಪೂಜಾ ವಿಧಿಗಳು ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಪ್ರತಿದಿನವೂ ವಿಶೇಷ ಪೂಜೆ, ಹೋಮ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 3ರಂದು ಪೂರ್ಣಾಹುತಿ ಹಾಗೂ ಮಹಾಪೂಜೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ. ಈ ಅವಧಿಯಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆಯೂ ಕಲ್ಪಿಸಲಾಗಿದೆ.
ಭಕ್ತರಿಗೆ ಮನವಿ
ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಶಿಲಾಮಯ ದೇವಳ ನಿರ್ಮಾಣ ಕಾರ್ಯಕ್ಕೆ ಭಕ್ತರು ಉದಾರವಾಗಿ ಸಹಕರಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
ರಾಮಕೃಷ್ಣ ಮಯ್ಯರಿಗೆ ಸ್ವಪ್ನನಿರೂಪವಾದಂತೆ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರೆನ್ನುವ ಪುಣ್ಯಪುರುಷರ ಮೂಲಕವೇ ವಿನಾಯಕನ ಗರ್ಭಗುಡಿ ನಿರ್ಮಾಣವಾಗಿದೆ. ಆವತ್ತು ಮಯ್ಯರು ಮಂಜರಲ್ಲಿ ಈ ವಿಷಯ ಹೇಳಿದಾಗ ಮಂಜರು ಬೇರೆ ಯೋಚನೆ ಮಾಡದೇ 'ಅಸ್ತು' ಎಂದು ಬಿಟ್ಟರು. ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ಮೂಲಕ ಕರಾವಳಿಯಲ್ಲಿ ಅನೇಕ ದೇವಸ್ಥಾನಗಳ ನಿರ್ಮಾಣವಾಗಿದೆ. ಇದೀಗ ವಿಶೇಷವಾಗಿ ಕಾಡಿನಕೊಂಡದ ಹೇರಂಬಾಪುರ ಶ್ರೀ ವಿನಾಯಕ ದೇವಾಲಯವೂ ಸೇರ್ಪಡೆಯಾಗುತ್ತಿದೆ. ಶ್ರೀಧರ ಮಂಜರು, ಕೃಷ್ಣಮೂರ್ತಿ ಮಂಜರು, ನಾಗರಾಜ ಮಂಜರು ಲೋಕಾರ್ಪಣೆಯ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಅತ್ಯಂತ ಸಣ್ಣ ಅವಧಿಯಲ್ಲಿ ಮಂಜರ ನಿರ್ದೇಶನದಲ್ಲಿಯೇ ನಯನ ಮನೋಹರವಾದ ಶಿಲಾಮಯ ಗರ್ಭಗುಡಿ ನಿರ್ಮಾಣವಾಗಿದೆ. ಶಿಲೆಯಲ್ಲಿ ಕಲೆ ಅರಳಿದ ಪರಿ ಅನನ್ಯ, ಅದ್ಭುತ.
ಹಿನ್ನೆಲೆ:
ಈ ದೇವಸ್ಥಾನವು ಸಂಪೂರ್ಣ ಶಿಥಿಲಗೊಂಡಿದ್ದು ಜೀರ್ಣೋದ್ಧಾರಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಶ್ರೀ ದೇವರ ಆಲಯದ ಪಕ್ಕದಲ್ಲಿ ಶತಮಾನದಿಂದ ಸದ್ಯ ಅರ್ಚಕರು ಹಾಗೂ ಆಡಳಿತ ಮುಖ್ಯಸ್ಥರಾದ ಪುರಾಣಿಕ ಕುಟುಂಬದವರು ನೆಲೆಸಿದ್ದು, ಆ ಮನೆಯಲ್ಲಿ ವಿಶ್ರಾಂತಿಗಾಗಿ ಹಲವಾರು ವರ್ಷಗಳಿಂದ ಬರುತ್ತಿರುವ ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದ ರಾಮಕೃಷ್ಣ ಮಯ್ಯರಿಗೆ ಸ್ವಪ್ನದಲ್ಲಿ ದೇವರ ಸಂದೇಶವಾಗುತ್ತದೆ. ಶ್ರೀ ದೇವರು ಸ್ವಪ್ನದಲ್ಲಿ ಈ ಪ್ರಾಚೀನ ಸನ್ನಿಧಿ ಜೀರ್ಣೋದ್ಧಾರವಾಗಬೇಕು, ಹಲವು ಕ್ಷೇತ್ರಗಳ ಜೀರ್ಣೋದ್ಧಾರದಲ್ಲಿ ಪ್ರಧಾನ ಪಾತ್ರ ವಹಿಸಿದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಇವರ ಮಾರ್ಗದರ್ಶನದಲ್ಲಿ ಮುಂದುವರೆಯುವಂತೆ ಹಲವಾರು ಬಾರಿ ಪುನಃ ಪುನಃ ಪ್ರೇರಣೆಯಾಗುತ್ತದೆ.
ಸಾತ್ವಿಕರಾದ ಮಯ್ಯರು ಕೃಷ್ಣಮೂರ್ತಿ ಮಂಜರನ್ನು ಸಂಪರ್ಕಿಸಿದಾಗ ತಾನು ಮುಂದೆ ನಿಂತು ಈ ಕಾರ್ಯಗಳನ್ನು ನಡೆಸಿಕೊಡುವುದಾಗಿ ಭರವಸೆ ಕೊಡುತ್ತಾರೆ. ಎಲ್ಲವೂ ಸೋಜಿಗದಂತೆ ನಡೆಯುತ್ತದೆ. ಎಲ್ಲಿಯ ಸಿರಿಬಾಗಿಲು? ಎಲ್ಲಿಯ ಕಂದಾವರ? ಎತ್ತಣದತ್ತ ಸಂಬಂಧ? ಈ ಬಗ್ಗೆ ಮಯ್ಯರಿಗೆ ಪ್ರಶ್ನೆ ಕಾಡುತ್ತದೆ. "ನನಗೂ ಇಲ್ಲಿಗೂ ಏನು ಸಂಬಂಧ..?" ಎಂಬ ಚಿಂತೆ ಕಾಡುತ್ತಿರುತ್ತದೆ. ಎರಡೆರಡು ದೈವಜ್ಞರಲ್ಲಿ ಕೇಳಿದಾಗ ಬಂದ ಉತ್ತರ ಒಂದೇ "ಶ್ರೀ ಧರ್ಮಸ್ಥಳ ಮೇಳದ ಛತ್ರ ಗಣಪತಿಯೇ ವತಿಯೇ ಮಯ್ಯರ ಮುಖಾಂತರ ಪುರಾಣಿಕರಿಗೆ, ಮಂಜರಿಗೆ, ಕಾಡಿನಕೊಂಡದ ನಾಗರಿಕರಿಗೆ ಸೂಚಿಸಿದ್ದು ಎಂದು ತಿಳಿಯುತ್ತದೆ. ಈ ಬಗ್ಗೆ ಮಯ್ಯರಲ್ಲಿ ಕೇಳಿದರೆ ರೋಮಾಂಚನಗೊಂಡು ಜೀವನದಲ್ಲಿ ಇನ್ನೇನು ಬೇಕು?" ಸಾರ್ಥಕ್ಯಗೊಂಡ ಕ್ಷಣ ಎನ್ನುತ್ತಾರೆ. ಗಣಪತಿಯ ಮಹಿಮೆಗೆ ಈ ಕ್ಷೇತ್ರದ ಜೀರ್ಣೋದ್ಧಾರವೇ ಒಂದು ಜ್ವಲಂತ ಸಾಕ್ಷಿ.
ಜೀರ್ಣೋದ್ದಾರದ ಪುಣ್ಯ ಕಾರ್ಯ:
ಅತ್ಯಂತ ವೇಗವಾಗಿ ಜೀರ್ಣೋದ್ದಾರ ಕಾರ್ಯ ನಡೆದಿದೆ. ಕಾಡಿನಕೊಂಡ ಎನ್ನುವ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಸುಂದರವಾದ ಶಿಲಾಮಯ ದೇವಳ ತಲೆ ಎತ್ತಿ ನಿಂತಿದೆ. ಡಿಸೆಂಬರ್ 05-2025ರಂದು ಎಡನೀರು ಮಠಾಧೀಶರಿಂದ ಶಿಲಾಮಯ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿತು. ಸುಮಾರು 45 ಕೋಟಿ ವೆಚ್ಚದಲ್ಲಿ ಸಮಗ್ರ ದೇವಳದ ಜೀರ್ಣೋದ್ದಾರಕ್ಕೆ ಸಂಕಲ್ಪ ఇడలాయిపు. ಮಾಡಿ ಗರ್ಭಗುಡಿಯನ್ನು ಕೃಷ್ಣಮೂರ್ತಿ ಮಂಜರು ನಿರ್ಮಿಸಿಕೊಟ್ಟಿದ್ದಾರೆ. ಹೆಬ್ಬಾಗಿಲು, ಸುತ್ತ ಪೌಳಿ, ಮುಖಮಂಟಪ ಮೊದಲಾದ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ.
ಜೀರ್ಣೋದ್ಧಾರ ಕಾರ್ಯದ ಗೌರವಾಧ್ಯಕ್ಷರಾಗಿ ಡಾ. ಆದರ್ಶ ಹೆಬ್ಬಾರ್ ಕುಂದಾಪುರ, ಕಾರ್ಯಾಧ್ಯಕ್ಷರಾಗಿ ರಾಘವೇಂದ್ರ ಚರಣ ನಾವಡ ಕುಂದಾಪುರ, ಅಧ್ಯಕ್ಷರಾಗಿ ವಿಠಲ್ ಶೆಟ್ಟಿಗಾರ್ ಕಾಡಿನ ಕೊಂಡ, ಪ್ರಧಾನ ಕಾರ್ಯದರ್ಶಿಯಾಗಿ ಸುಬ್ರಾಯ ಪುರಾಣಿಕ ಕಾಡಿನಕೊಂಡ, ಖಜಾಂಚಿಯಾಗಿ ಸುಧೀರ ಹೆಗ್ಡೆ ಕಾಡಿನಕೊಂಡ, ಉಪ ಖಜಾಂಚಿಯಾಗಿ ಶ್ರೇಯಸ್ ಶೇರೆಗಾರ್, ಪ್ರಧಾನ ಮಾರ್ಗದರ್ಶಕರಾಗಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪ್ರಧಾನ ಭಾಗವತರು. ಧರ್ಮಸ್ಥಳ ಮೇಳ ಸೇವೆ ಸಲ್ಲಿಸುತ್ತಿದ್ದಾರೆ. ಜೀರ್ಣೋದ್ದಾರ ಪ್ರಕ್ರಿಯೆಯಲ್ಲಿ ಗ್ರಾಮಸ್ಥರು ಸಕ್ರಿಯವಾಗಿ ತೊಡಗಿಸಿಕೊಂಡು ಕಂದಾವರ ಗ್ರಾಮದಲ್ಲಿ ಕಾರಣಿಕ ಮೂರ್ತಿ ಗಣಪತಿಯ ಪಿನರ್ ಪ್ರತಿಷ್ಠಾಪನೆಗೆ ಕಂಕಣ ಬದ್ಧರಾಗಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

