ಮಡಿಕೇರಿ: ಭಾರತದ ಪ್ರಮುಖ ಕೃಷಿ ಪರಿಹಾರ ಒದಗಿಸುವ ಸಂಸ್ಥೆಯಾದ ಕೋರಮಂಡಲ್ ಇಂಟರ್‍ನ್ಯಾಷನಲ್ ಲಿಮಿಟೆಡ್ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದಲ್ಲಿ ತನ್ನ 1200ನೇ 'ನಮ್ಮ ಗ್ರೋಮೋರ್' ರಿಟೇಲ್ ಮಳಿಗೆಯನ್ನು ಇಂದು ಉದ್ಘಾಟಿಸಿದೆ. ಇದು ರಾಜ್ಯದಲ್ಲಿ ಸಂಸ್ಥೆಯ 270ನೇ ಮಳಿಗೆಯಾಗಿದೆ.
ಗ್ರಾಮೀಣ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಂಸ್ಥೆಯು ಈ ಮಳಿಗೆಯನ್ನು ಆರಂಭಿಸಿದ್ದು, ಕೃಷಿ ಸಮುದಾಯದೊಂದಿಗೆ ನೇರ ಸಂಪರ್ಕವನ್ನು ಬಲಪಡಿಸುವ ಸಂಸ್ಥೆಯ ಪಯಣದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.
ಈ ಮಳಿಗೆಯನ್ನು ಕುಟ್ಟಪ್ಪ ಕಾಫಿ ಸಂಸ್ಥೆಯ ಸಂಸ್ಥಾಪಕರಾದ, ಇಂಡಿಯನ್ ವ್ಯಾನಿಲ್ಲಾ ಇನಿಶಿಯೇಟಿವ್‍ನ ಸಹ-ಸಂಸ್ಥಾಪಕ ಐ.ಕೆ. ಅನಿಲ್ ಉದ್ಘಾಟಿಸಿದರು. ಕೋರಮಂಡಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಎಸ್. ಶಂಕರ ಸುಬ್ರಮಣಿಯನ್ ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶಿಷ್ಟ ಕಾಫಿ ಮಳಿಗೆಯಾಗಿ ಆರಂಭಗೊಂಡಿರುವ ಈ ಕೇಂದ್ರವನ್ನು ಅರ್ಜಿ ಮತ್ತು ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ವಿರಾಜಪೇಟೆ ತಾಲ್ಲೂಕಿನ ಪ್ರಮುಖ ಕಾಫಿ ಬೆಳೆಯುವ ಪ್ರದೇಶಗಳಿಗೆ ಹಾಗೂ ಕೊಡಗು ಜಿಲ್ಲೆಯ ಪ್ರಮುಖ ಎಸ್ಟೇಟ್ ಸಮೂಹಗಳಿಗೆ ಸೇವೆ ಸಲ್ಲಿಸಲು ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಲಾಗಿದೆ.
'ಮೈ ಗ್ರೋಮೋರ್' ಮೊಬೈಲ್ ಆ್ಯಪ್ ಮೂಲಕ ಇನ್ನಷ್ಟು ಬಲಗೊಂಡಿದ್ದು, ಇದು ಬೆಳೆ ಆಧಾರಿತ ಸಲಹೆಗಳು, ಮಾರುಕಟ್ಟೆಯ ನೈಜ ಸಮಯದ ಬೆಲೆ ಮಾಹಿತಿ ಮತ್ತು ಎಐ ತಂತ್ರಜ್ಞಾನ ಆಧಾರಿತ ಕೀಟ ಹಾಗೂ ರೋಗ ಪತ್ತೆ ಸೌಲಭ್ಯಗಳನ್ನು ಒದಗಿಸುತ್ತದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


