ಮನೆಗಳ ಟೆರೇಸ್ ರಕ್ಷಣೆಗೆ ಸೂಕ್ತ ಉತ್ಪನ್ನ ಡ್ಯಾಂಪ್ ಪ್ರೂಫ್: ಅಮಿತ್ ಸಿಂಗಲ್

Upayuktha
0

ವಾಟರ್‌ ಫ್ರೂಫಿಂಗ್‌ ನ ಮಹತ್ವ ಸಾರುವ ‘ಸೂಪರ್‌ ಸ್ಟಾರ್’ ಅಭಿಯಾನ ಆರಂಭಿಸಿದ ಏಷ್ಯನ್ ಪೇಂಟ್ಸ್





ಮಂಗಳೂರು, ಏಪ್ರಿಲ್ 22: "ದಕ್ಷಿಣ ಭಾರತದ ಪ್ರತೀ ಮನೆಗಳ ಟೆರೇಸ್‌ಗಳು ಕೂಡ ಸಂಭ್ರಮದ ತಾಣಗಳಾಗಿರುತ್ತವೆ. ಅಂಥಾ ಟೆರೇಸ್‌ಗಳಿಗೆ ಸೋರಿಕೆ ಅಥವಾ ಶಾಖದಿಂದ ತೊಂದರೆ ಆಗದಂತೆ ಇರಲು ಏಷ್ಯನ್ ಪೇಂಟ್ಸ್ ನ ‘ಡ್ಯಾಂಪ್ ಪ್ರೂಫ್’ ಉತ್ಪನ್ನ ನೆರವಾಗಲಿದೆ. ಈ ಕುರಿತು ವಿಶೇಷ ಅಭಿಯಾನ ಬಿಡುಗಡೆಯಾಗಿದೆ" ಎಂದು ಏಷ್ಯನ್ ಪೇಂಟ್ಸ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಸಿಂಗಲ್ ಹೇಳಿದ್ದಾರೆ. 


ಏಷ್ಯನ್ ಪೇಂಟ್ಸ್ ನ ‘ಡ್ಯಾಂಪ್ ಪ್ರೂಫ್’ ಉತ್ಪನ್ನದ ಕುರಿತ ವಿನೂತನ ಸೂಪರ್ ಸ್ಟಾರ್ ಅಭಿಯಾನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.


ದಕ್ಷಿಣ ಭಾರತದ ಮನೆಗಳ ಟೆರೇಸ್‌ ಗಳು ದೈನಂದಿನ ಚಟುವಟಿಕೆ ಮತ್ತು ಸಂಭ್ರಮಾಚರಣೆಯ ತಾಣಗಳು. ಆದರೆ ಮಳೆಗಾಲದಲ್ಲಿನ ನೀರಿನ ಸೋರಿಕೆ ಮತ್ತು ಬೇಸಿಗೆಯ ಸುಡುವ ತಾಪಮಾನ ಈ ಸಂಭ್ರಮಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಏಷ್ಯನ್ ಪೇಂಟ್ಸ್ ಡ್ಯಾಂಪ್ ಪ್ರೂಫ್ ಉತ್ಪನ್ನ ತಂದಿದೆ. ಜೊತೆಗೆ ವಿಶೇಷ ಅಭಿಯಾನ ಕೂಡ ಅನಾವರಣ ಮಾಡಲಾಗಿದೆ.


ಈ ಅಭಿಯಾನ ಚಿತ್ರದಲ್ಲಿ ‘ರೌಡಿ ಬೇಬಿ’ ಹಾಡಿನ ಧಾಟಿಯನ್ನು ಬಳಸಿಕೊಳ್ಳಲಾಗಿದ್ದು, ವಾಟರ್‌ ಫ್ರೂಫಿಂಗ್‌ ನಂತಹ ತಾಂತ್ರಿಕ ವಿಷಯವನ್ನು ಜನರಿಗೆ ಸುಲಭವಾಗಿ ಮತ್ತು ಆಕರ್ಷಕವಾಗಿ ತಲುಪಿಸುವ ಪ್ರಯತ್ನ ಮಾಡಲಾಗಿದೆ. ದಕ್ಷಿಣದ ಸಿನಿಮಾಗಳಲ್ಲಿ ನಟರು ಹೇಗೆ ಶಕ್ತಿಯುತವಾಗಿ ಮಿಂಚುತ್ತಾರೋ, ಹಾಗೆಯೇ ‘ಡ್ಯಾಂಪ್ ಪ್ರೂಫ್’ ಉತ್ಪನ್ನವನ್ನು ಈ ಜಾಹೀರಾತಿನಲ್ಲಿ ‘ವಾಟರ್‌ ಫ್ರೂಫಿಂಗ್ ನ ಸೂಪರ್‌ ಸ್ಟಾರ್’ ಎಂದು ಬಿಂಬಿಸಲಾಗಿದೆ.


ಮನೆ ಮಾಲೀಕರ ಪ್ರಮುಖ ಎರಡು ಸಮಸ್ಯೆಗಳಿಗೆ ಈ ‘ಡ್ಯಾಂಪ್ ಪ್ರೂಫ್’ ರಾಮಬಾಣವಾಗಿ ಕೆಲಸ ಮಾಡಲಿದೆ. ಎಷ್ಟೇ ಸೋರಿಕೆಯಾಗುತ್ತಿದ್ದರೂ ಅದರ ವಿರುದ್ಧ ಇದು ಬಲವಾದ ರಕ್ಷಣೆ ನೀಡುತ್ತದೆ. ಜೊತೆಗೆ ಇದರ ಸುಧಾರಿತ ಹೀಟ್-ರಿಫ್ಲೆಕ್ಟಿವ್ ಕೋಟಿಂಗ್ ತಂತ್ರಜ್ಞಾನವು ಮನೆಯ ಮೇಲ್ಮೈ ತಾಪಮಾನವನ್ನು ಸುಮಾರು 10 ಡಿಗ್ರಿ ಸೆಲ್ಸಿಯಸ್‌ ವರೆಗೆ ಕಡಿಮೆ ಮಾಡುತ್ತದೆ. ಇದರಿಂದ ತೀವ್ರ ಬೇಸಿಗೆಯಲ್ಲೂ ಮನೆ ತಂಪಾಗಿರುತ್ತದೆ.

ದಕ್ಷಿಣ ಭಾರತದ ಹವಾಮಾನ ವೈಪರೀತ್ಯಗಳನ್ನು ಎದುರಿಸಲು ಈ ‘ಸೂಪರ್‌ ಸ್ಟಾರ್’ ಈಗ ಮಾರುಕಟ್ಟೆಯಲ್ಲಿ ಸನ್ನದ್ಧವಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top