ಈ ಪೂಜೆ ಇರುವಲ್ಲಿಗೆ ಹೋಗಲು ಆಮಂತ್ರಣ ಬೇಕಿಲ್ಲ: ಡಾ ಸುರೇಶ ನೆಗಳಗುಳಿ

Upayuktha
0

ಸತ್ಯನಾರಾಯಣ ಪೂಜೆ ಕವಿಗೋಷ್ಠಿ




ಮಂಗಳೂರು: ಮಾಡೂರು ಸಮೀಪದ ನಿವಾಸಿ ಕವಿ ವೆಂಕಟೇಶ ಗಟ್ಟಿಯವರ ಮನೆಯಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಸತ್ಯನಾರಾಯಣ ಪೂಜೆ ಹಾಗೂ ಕವಿಗೋಷ್ಠಿಯನ್ನು ನಡೆಸಲಾಯಿತು.


ವಿದ್ಯುಕ್ತವಾಗಿ ಪೂಜಾ ಕಾರ್ಯಗಳು ನಡೆದ ತರುವಾಯ ಕೋಟೆಕಾರು ಸಮೀಪದ ನಿವೃತ್ತ ಬ್ಯಾಂಕು ಉದ್ಯೋಗಿ ಶ್ರೀ ಹರಿಶ್ಚಂದ್ರ ಗಟ್ಟಿಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯನ್ನು ನಡೆಸಲಾಯಿತು. 


ಮಂಗಳೂರಿನ ಮಂಗಳಾ ಆಸ್ಪತ್ರೆ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಯ ಸಲಹೆಗಾರ ಕವಿ ಡಾ ಸುರೇಶ ನೆಗಳಗುಳಿಯವರು ಮೇಘ ಘರ್ಜನೆ ಎಂಬ ಗಜಲ್ ಮತ್ತು ಧೀರತಮ್ಮನ ಸೊಲ್ಲು ಎಂಬ ಹನಿಗವನ ವಾಚಿಸಿ ಗಟ್ಟಿಯವರ ವಿವಾಹ ದಿನಕ್ಕೆ ಶುಭ ಹಾರೈಸಿ, ಸತ್ಯನಾರಾಯಣ ಪೂಜೆಯ ಮಹತ್ವ ವನ್ನು ತಿಳಿಸುತ್ತಾ ಅತ್ಯಂತ ದೈವಿಕವಾದ ಈ ಪೂಜೆ ನಡೆಯುವಲ್ಲಿಗೆ ಹೋಗಲು ಆಮಂತ್ರಣವೇ ಬೇಕಾಗಿಲ್ಲ ಎಂಬ ಅಸ್ತಿಕ ನುಡಿಯನ್ನು ಪ್ರಸ್ತಾಪಿಸಿದರು.


ಪಿಂಗಾರ ಪತ್ರಿಕೆಯ ಸಂಪಾದಕರು ಹಾಗೂ ಪತ್ರಕರ್ತ ಶ್ರೀ ರೇಮಂಡ್ ಡಿ ಕುನ್ಹ ತಾಕೊಡೆಯವರು ಶುಭಹಾರೈಸಿ ಕವನವೊಂದನ್ನು ವಾಚಿಸಿದರು.

ಅಧ್ಯಕ್ಷ ಪೀಠ ದಿಂದ ಮಾತನಾಡುತ್ತಾ ಶ್ರೀ ಹರೀಶ್ಚಂದ್ರ ಗಟ್ಟಿಯವರು ವೆಂಕಟೇಶ ಗಟ್ಟಿಯವರ ಸಾಹಿತ್ಯ ಪ್ರೇಮವನ್ನು ಕೊಂಡಾಡುತ್ತ ಅವರ ಸಂಪರ್ಕದಿಂದ ತಾನೂ ಕವಿಯಾಗುತ್ತಿದ್ದೇನೆ ಎಂದರು.


ಅತಿಥೇಯ ವೆಂಕಟೇಶ ಗಟ್ಟಿಯವರು ಸ್ವರಚಿತ ಕವನ ವಾಚಿಸಿ ಎಲ್ಲರಿಗೂ ವಂದಿಸಿದರು. ಸುಮಾರು 50 ಮಂದಿಗೂ ಮೀರಿದ ಅಸ್ತಿಕ ಬಂಧುಬಾಂಧವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top