ಪೆರಡಾಲದಲ್ಲಿ ನಾಳೆ ಕವಾಟೋದ್ಘಾಟನೆ; ಉದನೇಶ್ವರ ದೇವರಿಗೆ ಬ್ರಹ್ಮಕಲಶ

Upayuktha
0


ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ 10ನೇ ದಿನ ಭಾನುವಾರ (ಏ.26) ರಂದು ಬೆಳಗ್ಗೆ ಶ್ರೀ ಉದನೇಶ್ವರ ದೇವರಿಗೆ ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಶನಿವಾರ ಸಹಸ್ರ ಕಲಶ, ಬ್ರಹ್ಮಕಲಶ ಪೂಜೆ ನಡೆಯಿತು.


ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ತತ್ವಹೋಮ, ಕುಂಭೇಶ ಕರ್ಕರಿ ಪೂಜೆ, ಅಂಕುರ ಪೂಜೆ, ಸೋಪಾನಪೂಜೆ, ಬ್ರಹ್ಮಕಲಶ ಪೂಜೆ, ಮಧ್ಯಾಹ್ನ ಸೋಪಾನ ಪೂಜೆ, ಅಂಕುರ ಪೂಜೆ, ಮಹಾಪೂಜೆ, ಸಂಜೆ ಪರಿಕಲಶ ಪೂಜೆ, ಅಧಿವಾಸ ಹೋಮ, ಅಧಿವಾಸ ಬಲಿ, ಕಲಶಾಧಿವಾಸ, ಸೋಪಾನಪೂಜೆ, ಮಹಾಬಲಿ ಪೀಠಾಧಿವಾಸ ಜರಗಿತು.


ಇಂದು(ಏ.26) ಬೆಳಗ್ಗೆ 5 ಗಂಟೆಗೆ ಗಣಪತಿ ಹೋಮ, ಕವಾಟೋದ್ಘಾಟನೆ, ಶಾಂತಿ, ಪ್ರಾಯಶ್ಚಿತ್ತ ಮತ್ತು ತತ್ವ ಹೋಮಗಳ ಕಲಶಾಭಿಷೇಕ ನಡೆಯಲಿದೆ. ಪರಮಪೂಜ್ಯ ಜಗದ್ಗುರು ಶ್ರೀಶಂಕರಾಚಾರ್ಯ ಸಂಸ್ಥಾನಮ್ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಸಹಸ್ರ ಕಲಶಾಭಿಷೇಕ- ಬ್ರಹ್ಮಕಲಶಾಭಿಷೇಕ, ಅವಭೃತ ಪ್ರೋಕ್ಷಣೆ, ಮಹಾಪೂಜೆ, ಮಂಗಲ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಪೂರ್ವಾಹ್ನ 11.30ಕ್ಕೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠ ಇವರ ಆಗಮನ, ಪೂರ್ಣಕುಂಭ ಸ್ವಾಗತ, ಆಶೀರ್ವಚನ ನಡೆಯಲಿದೆ. ಸಂಜೆ 7ರಿಂದ ಶ್ರೀದೇವರ ಉತ್ಸವಬಲಿ ನಡೆಯಲಿದೆ.


ವಯೋಲಿನ್ ಫ್ಯೂಷನ್ ಗಂಗಾತರಂಗಮ್:

ಶಿವಶಕ್ತಿ ಪೆರಡಾಲ ಪ್ರಾಯೋಜಕತ್ವದಲ್ಲಿ ಕುಮಾರಿ ಗಂಗಾ ಶಶಿಧರನ್ ತ್ರಿಶೂರು ಮತ್ತು ಬಳಗದವರಿಂದ ರಾತ್ರಿ 9 ಗಂಟೆಯಿಂದ ವಯೋಲಿನ್ ಫ್ಯೂಷನ್ `ಗಂಗಾತರಂಗಮ್' ಜರಗಲಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top