ಕೂಡ್ಲಿಗಿ (ವಿಜಯನಗರ ಜಿಲ್ಲೆ): ಶ್ರೀ ವಾಸವಿದೇವಿ ಜಯಂತಿ ಪ್ರಯುಕ್ತ ಪಟ್ಟಣದ ಶ್ರೀ ಚಿದಂಬರೇಶ್ವರ ದೇವಸ್ಥಾನದ ಆವರಣದಲ್ಲಿ ಆರ್ಯವೈಶ್ಯ ಯುವಜನ ಸಂಘ, ಹಾಗೂ ಆರ್ಯವೈಶ್ಯ ಮಹಿಳಾ ಸಂಘದ ಸಹಯೋಗದಲ್ಲಿ. ಶ್ರೀ ವಾಸವಿ ದೇವಿ ಜಯಂತಿ ಅದ್ಧೂರಿ ಹಾಗೂ ಬಹು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬೆಳಿಗ್ಗೆ ಶ್ರೀವಾಸವಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನ, ಹಾಗೂ ವಿಶೇಷ ಪೂಜೆ ಹೋಮ ಹವನ ಜರುಗಿಸಲಾಯಿತು. ನಂತರ ಮಕ್ಕಳಿಗಾಗಿ ವಿವಿದ ಸ್ಪರ್ಧೆಗಳು ಮತ್ತು ಹಿರಿಯರಿಗಾಗಿ ಕ್ರೀಡೆಗಳ ಆಯೋಜನೆ, ನಂತರ ಮಕ್ಕಳಿಂದ ಹೆಣ್ಣು ಮಕ್ಕಳಿಂದ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಗೌರವ ಸನ್ಮಾನ, ಸಮಾಜದ ಹಿರಿಯರಿಗೆ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗೌರವಿಸಿ ಸನ್ಮಾನಿಸಲಾಯಿತು.
ನೆರೆದ ಸಮಾಜವರೆಲ್ಲರಿಗೂ, ಅನ್ನ ಪ್ರಸಾದ ವಿನಿಯೋಗ ಸೇವೆ ಜರುಗಿತು. ಪಟ್ಟ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಹಾಗೂ ವಿವಿದೆಡೆಗಳಿಂದ ಆಗಮಿಸಿದ್ದ ಆರ್ಯವೈಶ್ಯ ಸಮಾಜದ ಬಾಂಧವರು, ಮಹಿಳೆಯರು, ಹಿರಿಯರು, ಯುವಕ ಯುವತಿಯರು, ಮಕ್ಕಳಾದಿಯಾಗಿ ಸಮಾಜದ ಸರ್ವರೂ ಶ್ರೀ ವಾಸವಿ ದೇವಿಯ ಆರಾಧನೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

