ಕೂಡ್ಲಿಗಿ: ಪರಿಹಾರ ನೀಡದಿರುವ ಹಿನ್ನಲೆಯಲ್ಲಿ, ಸಾರಿಗೆ ಇಲಾಖೆಯ 2 ಬಸ್‌ಗಳ ಜಪ್ತಿ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಜರುಗಿದೆ. ಕಳೆದ 2019ರಲ್ಲಿ, ಸಾರಿಗೆ ಇಲಾಖೆಯ ಕೊಪ್ಪಳ ಡಿಪೋಗೆ ಸೇರಿದ ಬಸ್, ಹಾಗೂ ಆಟೋ ನಡುವೆ ಜರುಗಿದ್ದ ಅಪಘಾತದಲ್ಲಿ. ಆಟೋದಲ್ಲಿ ಪ್ರಯಣಿಸುತ್ತಿದ್ದ, ನಾಗಪ್ಪ (50) ಮತ್ತು ನಾಗಮ್ಮ(24) ಇಬ್ಬರು ಪ್ರಯಾಣಿಕರು ತೀವ್ರ ಗಾಯಗೊಂಡು ಮೃತಪಟ್ಟಿದ್ದರು. ಮೃತರ ಕುಟುಂಬದವರು ಸೂಕ್ತ ಪರಿಹಾರಕ್ಕಾಗಿ, ಕೂಡ್ಲಿಗಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.
ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯವು, ನೊಂದ ಮೃತರ ಕುಟುಂಬಸ್ಥರ ಪರ ವಕೀಲರಾದ ಜಿ.ಸೀತಾರಾಮ್ ಗೌಡ ರವರ ಮನವಿಯನ್ನು ಪುರಸ್ಕರಿಸಿದ್ದು. ಓರ್ವ ಕುಟುಂಬಕ್ಕೆ 12ಲಕ್ಷ ರೂ, ಮತ್ತೋರ್ವ ಕುಟುಂಬಕ್ಕೆ 20 ಲಕ್ಷ ರೂಗಳನ್ನು ಮೃತರ ಕುಟುಂಬಕ್ಕೆ ಪರಿಹಾರವಾಗಿ, ನಗದು ಹಣ ನೀಡುವಂತೆ ಸಾರಿಗೆ ಇಲಾಖೆಯ ಕೊಪ್ಪಳ ಡಿಪೋ ಘಟಕಕ್ಕೆ ಈ ಹಿಂದೆಯೇ ಆದೇಶಿಸಿತ್ತು. ಆದರೆ ಈವರೆಗೂ ಸಾರಿಗೆ ಇಲಾಖೆ, ನೊಂದ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿನಾಕಾರಣ ಅತಿಯಾದ ವಿಳಂಬ ನೀತಿ ತೋರಿತ್ತು.
ಈ ಹಿನ್ನಲೆಯಲ್ಲಿ ಕಕ್ಷಿದಾರರ ಪರ ವಕೀಲರಾದ ಜಿ. ಸೀತಾರಾಮ್ ಗೌಡ ರವರು, ನ್ಯಾಯಾಲಯದಲ್ಲಿ ಸಾರಿಗೆ ಇಲಾಖೆಯ ಅನಗತ್ಯ ವಿಳಂಬ ನೀತಿಯನ್ನು ಖಂಡಿಸಿದ್ದು, ನೊಂದ ಕುಟುಂಬಗಳಿಗೆ ತುರ್ತಾಗಿ ಪರಿಹಾರ ನೀಡುವಂತೆ ಕ್ರಮಕ್ಕಾಗಿ, ನ್ಯಾಯಾಲಯದಲ್ಲಿ ಕಕ್ಷಿದಾರರ ಪರ ಮನವಿ ಮಾಡಿದ್ದರು. ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಧೀಶರು, ಸಾರಿಗೆ ಇಲಾಖೆಯ ಕೊಪ್ಪಳ ಡಿಪೋದ 2 ಬಸ್‌ಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದ್ದಾರೆ. ನ್ಯಾಯಾಧೀಶರ ಆದೇಶದನ್ವಯ, ನ್ಯಾಯಾಲಯದ ಸಿಬ್ಬಂದಿಯವರು ಕರ್ಥವ್ಯ ನಿರ್ವಹಿಸಿದ್ದಾರೆ.
ಎಪ್ರಿಲ್ 28 ರಂದು ಬೆಳಿಗ್ಗೆ ಎಂದಿನಂತೆ ಸಾರಿಗೆ ಇಲಾಖೆ ಕೊಪ್ಪಳ ಡಿಪೋದ ಬಸ್‌ಗಳು, ಕೂಡ್ಲಿಗಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ. ಕೂಡ್ಲಿಗಿ ಬಸ್ ನಿಲ್ದಾಣದಿಂದ ಕೂಡ್ಲಿಗಿ ನ್ಯಾಯಾಲಯಕ್ಕೆ ಕರೆತರುವ ಮೂಲಕ, ನ್ಯಾಯಾಲಯದ ಆದೇಶದಂತೆ ಎರೆಡು ಬಸ್‌ಗಳನ್ನು ನ್ಯಾಯಾಲಯದ ಅಮೀನ್ ಸಿಬ್ಬಂದಿಯವರಾದ ವಿ. ಚನ್ನಪ್ಪ ಹಾಗೂ ಎನ್ ವಿ ಪರಮೇಶ್ವರ ವರು ಜಪ್ತಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ, ನ್ಯಾಯಾಲಯದ ಕಕ್ಷಿದಾರರಾದ ಶಿವಪುರ ಗ್ರಾಮದ ಸತ್ಯಮ್ಮ ಹಾಗೂ ಕೊಟ್ರಮ್ಮ, ಕಕ್ಷಿದಾರರ ಪರ ವಕೀಲರಾದ ಸೀತಾರಾಮ್ ಹಾಗೂ ಸಹವರ್ತಿ ವಕೀಲರಾದ ಖಲಂಧರ್ ಮತ್ತು ನ್ಯಾಯಾಲಯದ ಅಮೀನ್ ಸಿಬ್ಬಂದಿಯವರಾದ ಎನ್ ವಿ ಪರಮೇಶ್ವರ ಹಾಗೂ ವಿ.ಚನ್ನಪ್ಪ ಇದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

