ಜಿ.ಜಿ. ಜೆ.ಸಿ. ಪ್ರಧಾನ ಪ್ರೌಢಶಾಲೆ ಶೇ 94.9 ರಷ್ಟು ಫಲಿತಾಂಶ

Upayuktha
0


ಹಾಸನ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ಜಿ.ಜಿ. ಜೆ.ಸಿ. ಪ್ರಧಾನ ಪ್ರೌಢಶಾಲೆ ಶೇ 94.9 ರಷ್ಟು ಫಲಿತಾಂಶ ಬಂದಿದೆ. ಒಟ್ಟು 59 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 56 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ ಎಂದು ಉಪಪ್ರಾಂಶುಪಾಲರಾದ ಮಂಜುನಾಥ್ ರವರು ತಿಳಿಸಿದರು.


ನಗರದ ಆರ್.ಸಿ. ರಸ್ತೆಯಲ್ಲಿರುವ ಜಿ.ಜಿ. ಜೆ.ಸಿ. ಪ್ರಧಾನ ಪ್ರೌಢಶಾಲೆಯಲ್ಲಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಕುರಿತು ಮಾತನಾಡುತ್ತಾ ಕು. ಸಾತ್ವಿಕ ಎಂ.ವಿ. ರವರು 625ಕ್ಕೆ 599 ಅಂಗಳನ್ನು ಗಳಿಸಿ ಶಾಲಾಹಂತದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಕು. ಫಾತಿಮಾ 625ಕ್ಕೆ 589 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದರೆ, ಕು. ರಚನಾ ಹೆಚ್.ಎಂ. ರವರು 625ಕ್ಕೆ 588 ಅಂಕಗಳನ್ನು ಗಳಿಸಿ ತೃತೀಯ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದರು.


ಒಟ್ಟಾರೆ ಉತ್ತೀರ್ಣರಾದ 56 ವಿದ್ಯಾರ್ಥಿನಿಯರಲ್ಲಿ 12 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ಇವರನ್ನು ಒಳಗೊಂಡಂತೆ 17 ವಿದ್ಯಾರ್ಥಿನಿಯರು 500 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುತ್ತಾರೆ ಎಂದು ಹೇಳಿದರು.


ಉಪಪ್ರಾಂಶುಪಾಲರಾದ ಮಂಜನಾಥ್, ತರಗತಿ ಶಿಕ್ಷಕರಾದ ಚಿದಾನಂದ ಕೆ.ಎನ್. ಮತ್ತು ಮಂಜುಳ ಹೆಚ್.ಪಿ. ಹಾಗೂ ವಿಷಯ ಶಿಕ್ಷಕರಾದ ಗೀತಾರಾಣಿ ಎ.ವಿ, ರುದ್ರೇಶ್, ರಂಗಾಮಣಿ ಎಂ.ಆರ್., ಪೂರ್ಣಿಮಾ ಎಸ್. ಕೆ, ಮಧು ಪಿ, ಚಿದಾನಂದ, ತೈಬಾಕೌಸರ್, ಸತ್ಯನಾರಾಯಣ ಮುರಳಿ, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಎಲ್ಲಾ ಪೋಷಕರು ವಿದ್ಯಾರ್ಥಿನಿಯರಿಗೆ ಅಭಿನಂದಿಸಿರುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top