ಗಾಯತ್ರೀ ರವಿಯವರ 'ಓಡುವ ಗಡಿಯಾರ' ಕವನ ಸಂಕಲನ ಲೋಕಾರ್ಪಣೆ

Upayuktha
0

ಹೂಬಳ್ಳಿ ಲೇಖಕಿಯರ ಬಳಗದಿಂದ ಆಯೋಜನೆ




ಹುಬ್ಬಳ್ಳಿ: ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಹೂಬಳ್ಳಿ ಲೇಖಕಿಯರ ಬಳಗದವರು ಭಾನುವಾರ (ಏ.12) ರಂದು ಅಕ್ಷರ ಸಾಹಿತ್ಯ ವೇದಿಕೆ ಮತ್ತು ರವಿ ಪ್ರಕಾಶನದ ಸಹಯೋಗದೊಂದಿಗೆ ಹೂಬಳ್ಳಿ ಬಳಗದ ಹೆಮ್ಮೆಯ ಕವಿತ್ರಿ ಗಾಯತ್ರೀ ರವಿಯವರ ನಾಲ್ಕನೇ ಕಾವ್ಯ ಕೃತಿ ಓಡುವ ಗಡಿಯಾರ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಜಾಜಿಮಲ್ಲಿಗೆ ಕವಿತೆಯ ಖ್ಯಾತ  ಕವಿ ಶ್ರೀ ಸತ್ಯಾನಂದ ಪಾತ್ರೊಟ ಅವರು ಆಗಮಿಸಿ, ಉದ್ಘಾಟನೆ ನುಡಿಯಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಸಾಹಿತಿಗಳ ಕೊಡುಗೆ ಹೇಗಿರಬೇಕೆಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ಕವಿ ಮಹಾಂತಪ್ಪ ನಂದೂರ ಕಾವ್ಯದ ಮಹತ್ವ ಬಗ್ಗೆ ಮಾತನಾಡಿದರೆ ಮತ್ತು ಲೇಖಕಿ ಸುನಂದಾ ಕಡಮೆಯವರು ಕೃತಿ ಪರಿಚಯ ಮಾಡಿದರು. ಹಾವೇರಿಯ ಸಾಹಿತಿ ಡಾ. ಸತೀಶ್ ಕುಲಕರ್ಣಿ ಯವರು ಗಾಯತ್ರೀ ಯವರ ಕಾವ್ಯ ಸಾಧನೆ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೂಬಳ್ಳಿ ಲೇಖಕಿಯರ ಬಳಗದ ಅಧ್ಯಕ್ಷೆ ಡಾ. ಸರೋಜಾ ಮೇಟಿ ಲೊಡಾಯಾ ಅವರು ಮಾತನಾಡುತ್ತಾ   ಹುಬ್ಬಳ್ಳಿಯಲ್ಲಿ ಸಾಹಿತ್ಯ ಬೆಳವಣಿಗೆಗೆ ಹೂಬಳ್ಳಿ ಲೇಖಕಿಯರ ಕಾರ್ಯವೈಖರಿ ವಿವರಿಸಿದರು.


ಶಾಲಿನಿ ರುದ್ರಮುನಿಯವರ ಪ್ರಾರ್ಥನೆ ಸೊಗಸಾಗಿ ಮೂಡಿ ಬಂತು. ಕವಿತಾ ಹೆಗಡೆಯವರು ಸ್ವಾಗತ ಮಾಡಿದರು ಮತ್ತು ಶ್ರೀದೇವಿ ಬಿರಾದಾರ  ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರೂಪಣೆ ಯನ್ನು ಲೇಖಕ ವಿರೂಪಾಕ್ಷ ಕಟ್ಟಿಮನಿ ಮಾಡಿದರೆ. ಕಾರ್ಯಕ್ರಮದಲ್ಲಿ ಗಾಯತ್ರೀ ರವಿ ಯವರ ಪರಿವಾರ  ಹೂಬಳ್ಳಿ ಲೇಖಕಿಯರು,ಅಕ್ಷರ ಸಾಹಿತ್ಯ ವೇದಿಕೆ, ಹಾವೇರಿಯ ಸಾಹಿತ್ಯ ಬಳಗ ಮತ್ತು ಶ್ರೀ ವೆಂಕಟೇಶ್ ಮರೆ ಗುದ್ದಿ, ಮಹೇಶ್ ಮತ್ತು ಸುರೇಶ್  ಹೊರಕೇರಿ, ಶ್ರೀ ಕೇಶವ ಕೊಂಗಿ ಶ್ರೀ ಪ್ರಕಾಶ ಕಡಮೆ, ಪದ್ಮಜಾ ಉಮರ್ಜಿ, ಸಂಧ್ಯಾ ದೀಕ್ಷಿತ, ಮಹಾದೇವಿ, ವೀಣಾ ಬರಗಿ ಮುಂತಾದವರು ಕಾರ್ಯಕ್ರಮಕ್ಕೆ ಮೆರಗು ನೀಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top