ಕಲಾಭಿ ಮಂಗಳೂರು: ಮಕ್ಕಳಿಗಾಗಿ ವೃತ್ತಿಪರ ರಂಗಭೂಮಿ ಕಾರ್ಯಾಗಾರ- ಅರಳು 2026

Upayuktha
0

ವಿಜಯಕುಮಾರ್ ಕೋಡಿಯಾಲ್ ಬೈಲ್ ಉದ್ಘಾಟನೆ 






ಮಂಗಳೂರು: ತನ್ನ 5ನೇ ಸಂವತ್ಸರದ ಸಂಭ್ರಮದಲ್ಲಿರುವ ಕಲಾಭಿ (ರಿ.) ಮಂಗಳೂರು ಕಲಾ ಸಂಸ್ಥೆಯ ಅರಳು 2026, ಮಕ್ಕಳಿಗಾಗಿ ವೃತ್ತಿಪರ ರಂಗಭೂಮಿ ಕಾರ್ಯಾಗಾರ ಉದ್ಘಾಟನೆಗೊಂಡಿತು. 4ನೇ ವರ್ಷದ ಈ ಶಿಬಿರವನ್ನು ತುಳು ಸಿನಿಮಾ ಮತ್ತು ರಂಗಭೂಮಿ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಉದ್ಘಾಟಿಸಿದರು. 


ಬಳಿಕ ಮಾತನಾಡಿದ ಅವರು ಈಗಿನ ಸಮಾಜದಲ್ಲಿ ಕಲಾವಿದರಿಗೆ ಮತ್ತೆ ಕಲೆಗೆ ಉತ್ತಮ ಸ್ಥಾನ ದೊರಕುತ್ತಿದೆ. ಕಲಾವಿದರ ಕೆಲಸಕ್ಕೂ ಮಾನ್ಯತೆ ದೊರೆತು ಗೌರವ ಪಡೆಯುತ್ತಿದ್ದಾರೆ. ಅಂತಹ ಕಲೆಯನ್ನು ಮಕ್ಕಳಿಗೆ ಎಳವೆಯಲ್ಲೇ ಅಭ್ಯಾಸ ಮಾಡಿಸಲು ಮುಂದಾಗಿರುವ ಕಲಾಭಿಯ ಶ್ರಮ  ಅಭಿನಂದನಾರ್ಹ ಎಂದರು. ಮಕ್ಕಳನ್ನು ಈ ರೀತಿಯ ಶಿಬಿರಗಳಿಗೆ ಕಳಿಸುತ್ತಿರುವ ಪೋಷಕರಿಗೂ ಕೃತಜ್ಞತೆ ಸಲ್ಲಿಸಿದರು. 


ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ನೃತ್ಯ ಕೇಂದ್ರದ ನಿರ್ದೇಶಕಿ ಡಾ. ಆರತಿ ಶೆಟ್ಟಿ ಮಾತನಾಡಿ ಮಕ್ಕಳು ಇಂತಹ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಪೋಷಕರು ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು. 


ಈ ಸಂದರ್ಭ ಮುಖ್ಯ ಅತಿಥಿಗಳಾದ ಉದ್ಯಮಿ ಶ್ರೀಮತಿ ಅಶ್ವಿನಿ ಕಾಮತ್, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ರಾಕೇಶ್ ಹಾಗೂ ಅರಳು 2026ರ ಶಿಬಿರ ನಿರ್ದೇಶಕರಾದ ಶ್ರೀ ಚರಿತ್ ಸುವರ್ಣ ಉಪಸ್ಥಿತರಿದ್ದರು.


ಅರಳು ಶಿಬಿರ ಗೀತೆಯಿಂದ ಆರಂಭವಾಗಿ ಡೋಲು ಬಾರಿಸುವುದರ ಮೂಲಕ ಈ ಬಾರಿಯ ಶಿಬಿರವನ್ನು ಉದ್ಘಾಟಿಸಲಾಯಿತು. ಕಲಾಭಿಯ ಕಾರ್ಯದರ್ಶಿಯಾದ ಉಜ್ವಲ್ ಯು.ವಿಯವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳಾಡಿದರು. ಕಲಾಭಿಯ ಅಧ್ಯಕ್ಷರಾದ ಶ್ರೀ ಸುರೇಶ್ ವರ್ಕಾಡಿಯವರು ಧನ್ಯವಾದ ಸಮರ್ಪಿಸಿದರು. ಈ ವೇಳೆ ಕಲಾಭಿ ಥಿಯೇಟರ್ ಮತ್ತು ಕಲಾಭಿ ಚಿಲ್ಡ್ರನ್ಸ್ ಥಿಯೇಟರ್ ನ ಕಲಾವಿದರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top