ನಯಾನಗರದಲ್ಲಿ ಎತ್ತುಗಳ ಹಬ್ಬ: ರೈತ ಚೈತನ್ಯದ ಸಂಭ್ರಮ

Upayuktha
0


ನಯಾನಗರ (ಬೆಳಗಾವಿ): ಉತ್ತರ ಕರ್ನಾಟಕದ ಸಂಸ್ಕೃತಿ, ರೈತ ಜೀವನದ ಹೆಮ್ಮೆ ಮತ್ತು ಪಶುಪಾಲನಾ ಪರಂಪರೆಯನ್ನು ಒಗ್ಗೂಡಿಸುವ ಅದ್ಭುತ ಕ್ಷಣಕ್ಕೆ ನಯಾನಗರ ಸಜ್ಜಾಗಿದೆ. ಶ್ರೀ ಸುಖದೇವಾನಂದ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ, “ಸ್ನೇಹ ಸರಪಳಿ ಗೆಳೆಯರ ಬಳಗ (2007 SSLC ಬ್ಯಾಚ್)” ವತಿಯಿಂದ ಸತತ ನಾಲ್ಕನೇ ಬಾರಿಗೆ ಬೃಹತ್ ಜಾನುವಾರು ಪ್ರದರ್ಶನವನ್ನು ಆಯೋಜಿಸಲಾಗಿದೆ.


ಈ ವಿಶೇಷ ಕಾರ್ಯಕ್ರಮದಲ್ಲಿ ಅಲಂಕೃತ ಜೋಡಿ ಎತ್ತುಗಳು ಅಖಾಡಕ್ಕೆ ಇಳಿಯುವ ದೃಶ್ಯ, ಕೊರಳ ಘಂಟೆಯ ನಾದ ಮತ್ತು ರೈತರ ಉತ್ಸಾಹವು ಒಂದಾಗಿ ವಿಶಿಷ್ಟ ವಾತಾವರಣವನ್ನು ಸೃಷ್ಟಿಸಲಿದೆ. ಇದು ಕೇವಲ ಸ್ಪರ್ಧೆಯಷ್ಟೇ ಅಲ್ಲ, ಗ್ರಾಮೀಣ ಸಂಸ್ಕೃತಿ ಮತ್ತು ರೈತ ಚೈತನ್ಯದ ಪ್ರತಿಬಿಂಬವಾಗಿದೆ.


ಕಾರ್ಯಕ್ರಮವು ಏಪ್ರಿಲ್ 15, 2026ರಂದು ನಯಾನಗರದಲ್ಲಿ ನಡೆಯಲಿದ್ದು, ವಿಜೇತರಿಗೆ ಭರ್ಜರಿ ನಗದು ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನವಾಗಿ ರೂ. 20,000, ದ್ವಿತೀಯ ಬಹುಮಾನವಾಗಿ ರೂ. 10,000 ಮತ್ತು ತೃತೀಯ ಬಹುಮಾನವಾಗಿ ರೂ. 5,000 ನೀಡಲಾಗುತ್ತದೆ.


ಈ ಬಾರಿಯ ಪ್ರದರ್ಶನದಲ್ಲಿ ವಿಶೇಷವಾಗಿ ‘ಹಸಿರು ಟವಲ್’ ಸೇವೆಯನ್ನು ಶ್ರೀ ಹನುಮಂತ ಕರಿದೇಮನ್ನವರ (CISF) ನೀಡಲಿದ್ದು, ಹಗ್ಗದ ಸೇವೆಯನ್ನು ಊರಿನ ಪ್ರಮುಖರು ವಹಿಸಿಕೊಂಡಿದ್ದಾರೆ. ರೈತರ ಶ್ರಮಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.


ರೈತರಿಗೆ ಅನುಕೂಲವಾಗುವಂತೆ ಎತ್ತುಗಳಿಗೆ ಬೇಕಾದ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಸಮಿತಿಯೇ ಮಾಡಿದ್ದು, ತಮ್ಮ ಹೆಮ್ಮೆಯ ಜೋಡಿ ಎತ್ತುಗಳನ್ನು ಕರೆತಂದು ಈ ಕೃಷಿ ಸಂಭ್ರಮದಲ್ಲಿ ಭಾಗವಹಿಸಲು ರೈತ ಬಾಂಧವರಿಗೆ ಕರೆ ನೀಡಲಾಗಿದೆ.


ಈ ಜಾನುವಾರು ಪ್ರದರ್ಶನವು ನಯಾನಗರದ ಗ್ರಾಮೀಣ ಸಂಸ್ಕೃತಿ, ಪಶುಪಾಲನೆ ಮತ್ತು ರೈತರ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ವ್ಯಕ್ತವಾಗಿದೆ.


- ಮಹಾಂತೇಶ್ ಎಸ್ ಹುಲಿಕಟ್ಟಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top